ಕಾಂಗ್ರೆಸ್ -ಜೆಡಿಎಸ್‌ ಪಾಳಯದಲ್ಲಿ ಆತಂಕ : ರೆಸಾರ್ಟ್‌ನಲ್ಲೇ ನಡೆಯುತ್ತಿದೆ ಆಪರೇಷನ್‌ ಕಮಲದ ತಂತ್ರ !

ಬೆಂಗಳೂರು : ನಾಳೆ, ನಾಡಿದ್ದು ಎ ರಡು ದಿನ ಬಾಕಿ ಇದೆ. ಏನಾಗುತ್ತದೋ ಕಾದು ನೋಡಿ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ ರಾವ್‌ ಹೇಳಿದ್ದು, ಮತ್ತಷ್ಟು ಕುತೂಹಲ ಹೆಚ್ಚುವಂತೆ ಮಾಡಿದೆ.

ಧವಳಗಿರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ  ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುರಳೀಧರ್‌ ರಾವ್, ನಾಳೆ, ನಾಡಿದ್ದು ಎರಡು ದಿನ ಬಾಕಿ ಇದೆ. ಮುಂದೇನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಈ ಮೂಲಕ ಬಿಜೆಪಿ ಮೌನವಾಗಿದ್ದುಕೊಂಡೇ ತಂತ್ರಗಾರಿಕೆ ರೂಪಿಸುತ್ತಿರುವುದು ಖಚಿವಾದಂತಾಗಿದ್ದು, ನಾಳೆ ಕುಮಾರಸ್ವಾಮಿಯವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಹುಮತ ಸಾಬೀತಿನ ವೇಳೆ ಏನಾಗಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಈ ಮಧ್ಯೆ ರೆಸಾರ್ಟ್‌ನಲ್ಲಿರುವ ಶಾಸಕರನ್ನು ಸೆಳೆಯಲು ಬಿಜೆಪಿ ಕಸರತ್ತು ನಡೆಸುತ್ತಿರುವುದಾಗಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com