ನಾನಿನ್ನೂ ದಣಿದಿಲ್ಲ, ನೀವು ನನ್ನನ್ನು ಧಣಿ ಎಂಬ ಮೇಲೆ ನಿಮ್ಮ ಜೊತೆ ಧ್ವನಿಯಾಗಿರುತ್ತೇನೆ : ಕಾರ್ಯಕರ್ತರಿಗೆ BSY ಕರೆ

ಬೆಂಗಳೂರು : ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾಗಿ ಕೇವಲ ಮೂರು ದಿನದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಬಿ.ಎಸ್ ಯಡಿಯೂರಪ್ಪ ಮತ್ತೆ ಕಾರ್ಯಕರ್ತರಿಗೆ ಆತ್ಮವಿಶ್ವಾಸ ತುಂಬುವ ಮಾತನ್ನಾಡಿದ್ದಾರೆ.
ತಮ್ಮ ಫೇಸ್‌ಬುಕ್‌ನಲ್ಲಿ ಭಾವನಾತ್ಮಕವಾಗಿ ಸಂದೇಶ ರವಾನಿಸಿರುವ ಯಡಿಯೂರಪ್ಪ, ನಮ್ಮ ಪ್ರಯತ್ನಗಳು ಹುಸಿಯಾಗುವುದಿಲ್ಲ ತಾಳ್ಮೆಯಿಂದಿರಿ ಎಂದು ಪೋಸ್ಟ್ ಮಾಡಿದ್ದಾರೆ.

ನಿಮಗಾಗಿ ಬದುಕುವುದೇ ನನ್ನ ಬದುಕು!ನಾವು ಬದುಕುತ್ತಿರುವುದೇ ಪ್ರಜಾಪ್ರಭುತ್ವದಲ್ಲಿ‌. ಅರ್ಥಾತ್‌, ಇಲ್ಲಿ ಪ್ರಜೆಗಳೇ, ಅಂದರೆ ನೀವೇ ಪ್ರಭುಗಳು….

Posted by BS Yeddyurappa on 21 मे 2018

ಅಲ್ಲದೆ,  ಪ್ರಜಾಪ್ರಭುತ್ವಕ್ಕೆ ಕೊಡಲಿ ಏಟು ಬಿದ್ದಿದೆ. ಜನತೆಯ ಆಶೀರ್ವಾದ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿ ಇಂದು ಅಧಿಕಾರದಿಂದ ಹೊರಗುಳಿದಿದೆ. ಹಿಂದಿನ ಚುನಾವಣೆಯಲ್ಲಿ  122 ಇದ್ದ ಕಾಂಗ್ರೆಸ್ ಬಲ 78ಕ್ಕೆ ಕುಸಿದಿದೆ.ಜೆಡಿಎಸ್ 40 ರಿಂದ 37ಕ್ಕೆ ಇಳಿದಿದೆ. ಗರಿಷ್ಠ ಸ್ಥಾನ ಗಳಿಸಿದ ಪಕ್ಷವಾಗಿ ಸರ್ಕಾರ ರಚಿಸಬೇಕಾದ್ದು ನಮ್ಮ ಜವಾಬ್ದಾರಿ. ನಾವು ಏಕೆ ಯಶಸ್ವಿಯಾಗಲಿಲ್ಲವೆಂದು ಜಗತ್ತಿಗೇ ತಿಳಿದಿದೆ. ಜನರಿಂದ ತಿರಸ್ಕೃತಗೊಂಡ ಎರಡು ಪಕ್ಷಗಳು ನಮ್ಮ ವಿರುದ್ಧ ಪಿತೂರಿ ಮಾಡಿರುವುದಾಗಿ ಆರೋಪಿಸಿದ್ದಾರೆ.
ನಾನಿನ್ನೂ ದಣಿದಿಲ್ಲ ಎಂದಿರುವ ಬಿಎಸ್ ವೈ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ರೈತರ ಆತ್ಮಹತ್ಯೆಯನ್ನು ಸ್ಮರಿಸುತ್ತಾ “ನಮಗೆ ಅಧಿಕಾರವಿಲ್ಲ.  ಆದರೆ ರೈತರ ಕಾರಣಕ್ಕಾಗಿ ನಮ್ಮ ಹೋರಾಟ ನಿರಂತರವಾಗಿರಲಿದೆ. ನಮ್ಮ ರೈತರು ಗರ್ವದಿಂದ ನಾನು ರೈತ ಎಂದು ಹೇಳಿಕೊಳ್ಳುವ ಹಾಗೆ ಮಾಡುವುದು ನನ್ನ ಸರ್ಕಾರದ ಆಶಯ. ಆ ಆಶಯ ಈಗಲೂ ಹಾಗೇ ಇದೆ ಎಂದಿದ್ದಾರೆ.
ನೀವೆಲ್ಲ ಕೆಲ ತಿಂಗಳು ಮನೆ ಬಿಟ್ಟು ಬಿಜೆಪಿ ಪರವಾಗಿ ಕೆಲಸ ಮಾಡಿ ಎಂದು ನಾನು ಪರಿವರ್ತನಾ ಯಾತ್ರೆಯಲ್ಲಿ ಕೊಟ್ಟ ಕರೆಗೆ ನೀವೆಲ್ಲ ಬಂದು ದುಡಿದಿದ್ದೀರಿ. ಅಂದು ನೀವು ಪಟ್ಟ ಶ್ರಮ, ಇಂದು ನೀವು ಹಾಕಿದ ಕಣ್ಣೀರು ಯಾವುದೂ ವ್ಯರ್ಥವಾಗಲು ನಾನು ಬಿಡುವುದಿಲ್ಲ. ನೀವ್ಯಾರೂ ಎದೆಗುಂದಬೇಡಿ. ನಿಮ್ಮ ಶಕ್ತಿಯೇ ನನ್ನ ಬಲ ಎಂದಿದ್ದಾರೆ.
ಸದ್ಯಕ್ಕೆ ಸ್ವಲ್ಪ ತಾಳ್ಮೆಯಿಂದಿರಿ. ಮನೆಯವರೊಂದಿಗೆ ಕಾಲ ಕಳೆಯಿರಿ. ಮತ್ತೆ ನಾನು ನಿಮ್ಮೊಂದಿಗೆ ಬರುತ್ತೇನೆ. ಸ್ವಸ್ಥ, ಸದೃಢ, ಸಮರ್ಥ ಸಮಾಜದ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಸಾಗೋಣ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com