ಕುಮಾರಸ್ವಾಮಿ ಐದು ವರ್ಷ ಅಧಿಕಾರ ಮಾಡಲು “ಕೈ” ಬಿಡಲ್ಲ : ನಟ ಜಗ್ಗೇಶ್‌

ಬೆಂಗಳೂರು : ಎಚ್‌ಡಿಕೆ ಐದು ವರ್ಷ ಅಧಿಕಾರ ಮಾಡಲು ಕೈ ಬಿಡಲ್ಲ ಎಂದು ನಟ ಜಗ್ಗೇಶ್‌ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೆ ಮೈತ್ರಿ ಸರ್ಕಾರದಲ್ಲಿ ಗೊಂದಲ ಶುರುವಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತೆ ಎಂದು ಕಾದು ನೋಡಿ. ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ. ಜನರಿಗೆ 1 ಪೈಸೆ ಹಣವನ್ನೂ ಹಂಚಿಕೆ ಮಾಡಿಲ್ಲ.  ಆದರೆ ಕಾಂಗ್ರೆಸ್‌ನವರು ಪ್ರತೀ ಓಟಿಗೆ 500 ರೂ 1000ರೂ ಹಂಚಿಕೆ ಮಾಡಿದ್ದಾರೆ. ಸಿದ್ದರಾಮಯ್ಯ ಜನತಾದಳದಿಂದವರೇ ಆದ ಕಾರಣ ಜೆಡಿಎಸ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಅಷ್ಟೇ. ಆದರೆ ಜಾಸ್ತಿ ದಿನ ಈ ಮೈತ್ರಿ ಸರ್ಕಾರ ಉಳಿಯುವುದಿಲ್ಲ ಎಂದಿದ್ದಾರೆ.

ಶೀಘ್ರದಲ್ಲೇ ಸರ್ಕಾರ ಉರುಳುತ್ತೆ. ಸಿದ್ದರಾಮಯ್ಯ ಏನು ಕಾಂಗ್ರೆಸ್‌ ಗಿರಾಕಿಯಲ್ಲ.  ನಾವು ಐದು  ವರ್ಷ ಯಾರಿಗೂ ಬಿಡಲ್ಲ ಎಂದು ಕೆ.ಸಿ ವೇಣುಗೋಪಾಲ್‌ ಹೇಳಿದ್ದಾರೆ. ಇಲ್ಲಿಂದಲೇ ಬೆಂಕಿ ಹತ್ತಿರುವುದಾಗಿ ಹೇಳಿದ್ದಾರೆ.

9 thoughts on “ಕುಮಾರಸ್ವಾಮಿ ಐದು ವರ್ಷ ಅಧಿಕಾರ ಮಾಡಲು “ಕೈ” ಬಿಡಲ್ಲ : ನಟ ಜಗ್ಗೇಶ್‌

Leave a Reply

Your email address will not be published.

Social Media Auto Publish Powered By : XYZScripts.com