ದೊಡ್ಡಗೌಡರ ಷರತ್ತಿಗೆ ಕಂಗಾಲಾದ ಕಾಂಗ್ರೆಸ್‌ : M.B ಪಾಟೀಲ್‌, ಡಿಕೆಶಿಗೆ ಎದುರಾಯ್ತು ಕಂಟಕ

ಬೆಂಗಳೂರು :  ಯಡಿಯೂರಪ್ಪ ಸರ್ಕಾರ ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿಕೂಟಕ್ಕೆ ಸರ್ಕಾರ ರಚಿಸುವ ಅವಕಾಶ ಒದಗಿಬಂದಿದೆ.

ನಾಳೆ ಸಂಜೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ನಾಳೆಯಿಂದ ರಾಜ್ಯದಲ್ಲಿ ದೊಡ್ಡಗೌಡರು ಹಾಗೂ ಕುಮಾರಸ್ವಾಮಿಯ ಆಟ ಶುರುವಾಗಲಿದೆ.

ಈ ಮದ್ಯೆ ದೇವೇಗೌಡರು ನಾನು ಸಮ್ಮಿಶ್ರ ಸರ್ಕಾರದ ಯಾವುದೇ ಕಾರ್ಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಅತ್ತ ತಲೆಯೂ ಹಾಕುವುದಿಲ್ಲ ಎಂದಿದ್ದಾರೆ. ಆದರೆ ಮತ್ತೊಂದು ಮೂಲಗಳ ಪ್ರಕಾರ ಕಾಂಗ್ರೆಸ್‌ ನ ಎಂ. ಬಿ ಪಾಟೀಲ್ ಹಾಗೂ ಡಿಕೆಶಿ ಯವರಿಗೆ ಸಚಿವ ಸ್ಥಾನ ನೀಡಲು ದೊಡ್ಡಗೌಡರು ನಿರಾಕರಿಸಿರುವುದಾಗಿ ತಿಳಿದುಬಂದಿದೆ.

ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ಬೆಂಬಲ ನೀಡಿದ್ದ ಎಂ.ಬಿ ಪಾಟೀಲ್‌ಗೆ ಸಚಿವ ಸ್ಥಾನ ನೀಡಿದರೆ ಧರ್ಮ ವಿರೋಧಿ ಕೆಲಸ ಮಾಡುವವರ ನ್ನು ಸಂಪುಟದಲ್ಲಿ ಸೇರಿಸಿಕೊಂಡಿದ್ದಾರೆ ಎಂಬ ಆರೋಪ ತಮ್ಮ ಮೇಲೆ ಬರುತ್ತದೆ ಎಂಬ ಕಾರಣಕ್ಕೆ ಎಂ.ಬಿ ಪಾಟೀಲರಿಗೆ  ಸಚಿವ ಸ್ಥಾನ ನೀಡಬಾರದು ಎಂದು ದೇವೇಗೌಡರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಮತ್ತೊಂದೆಡೆ ಡಿ.ಕೆ ಶಿವಕುಮಾರ್‌ ಕಾಂಗ್ರೆಸ್‌ನಲ್ಲಿ ಪ್ರಭಾವಿ ನಾಯಕನಾಗಿದ್ದು, ಗೌಡ ಜಾತಿಗೆ ಸೇರಿರುವ ಡಿಕೆಶಿ ಪ್ರಭಾವ ಹೆಚ್ಚಿದರೆ ಕುಮಾರಸ್ವಾಮಿ ಬೆಳವಣಿಗೆಗೆ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ ಡಿಕೆಶಿಗೂ ಸಚಿವ ಸ್ಥಾನ ನೀಡಲು ದೇವೇಗೌಡರು ಅಡ್ಡಗಾಲು ಹಾಕುತ್ತಿರುವುದಾಗಿ ತಿಳಿದುಬಂದಿದೆ.

ಆದರೆ ಸುದ್ದಿಗಾರರೊಂದಿಗೆ ಮಾತನಾಡಿರುವ ದೇವೇಗೌಡರು, ಡಿಕೆಶಿ ಹಾಗೂ ಎಂ.ಬಿ ಪಾಟೀಲರಿಗೆ ಸಚಿವ ಸ್ಥಾನ ಕೊಡಬೇಡಿ ಎಂದು ನಾನು ಹೇಳಿಲ್ಲ. ಇದಕ್ಕೂ ನನಗೂ ಸಂಬಂಧವಿಲ್ಲ. ನನಗ ಈ ಸರ್ಕಾರ ಸುಸೂತ್ರವಾಗಿ ನಡೆದುಕೊಂಡು ಹೋಗು ವುದೇ ಮುಖ್ಯ ಎಂದಿದ್ದಾರೆ.

ಆದರೆ ದೇವೇಗೌಡರು ಸರ್ಕಾರದ ಮುಖ್ಯ ಕಾರ್ಯಕದರ್ಶಿಯನ್ನು ಮನೆಗೆ ಕರೆಸಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಈ ಬೆನ್ನಲ್ಲೇ ನಾನು ಮನೆ ಹತ್ತಿರ ಯಾವುದೇ ಅಧಿಕಾರಿಗಳನ್ನು ಕರೆದಿಲ್ಲ ,ಚರ್ಚೆ ನಡೆಸಿಯೂ ಇಲ್ಲ ಎಂದು ಮಾಧ್ಯಮದವರ ವಿರುದ್ಧವೇ ಕಿಡಿ ಕಾರಿದ್ದಾರೆ.

 

5 thoughts on “ದೊಡ್ಡಗೌಡರ ಷರತ್ತಿಗೆ ಕಂಗಾಲಾದ ಕಾಂಗ್ರೆಸ್‌ : M.B ಪಾಟೀಲ್‌, ಡಿಕೆಶಿಗೆ ಎದುರಾಯ್ತು ಕಂಟಕ

Leave a Reply

Your email address will not be published.