ವಿಜಯಪುರ : ವಿವಿ ಪ್ಯಾಟ್ ಪ್ರಕರಣ : ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಎಸ್.ಬಿ ಶೆಟ್ಟಣ್ಣವರ್

ವಿಜಯಪುರ : ಮನಗೂಳಿ ಬಳಿ ವಿವಿ ಪ್ಯಾಟ್ ಖಾಲಿ ಬಾಕ್ಸಗಳು ದೊರೆತ ಪ್ರಕರಣದ ಕುರಿತಂತೆ ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟಣ್ಣವರ ಸ್ಪಷ್ಟನೆ ನೀಡಿದ್ದಾರೆ. ‘ಸ್ಥಳದಲ್ಲಿ 8 ವಿವಿಪ್ಯಾಟ್ ಖಾಲಿ ಬಾಕ್ಸಗಳಿದ್ದು, ಅದರಲ್ಲಿ ಯಾವುದೇ ಮಶಿನ್ಸ್ ಇಲ್ಲ. ಬಾಕ್ಸ್ಗಳ ಮೇಲೆ ಯಾವುದೇ ಯೂನಿಕ್ ಐಡಿ ನಂಬರ್ ಗಳು ಇಲ್ಲ ‘ ಎಂಸು ಹೇಳಿದ್ದಾರೆ.

ಅಲ್ಲದೇ ಸಿಕ್ಕ ಖಾಲಿ ಬಾಕ್ಸ್ಗಳು ಈ ಜಿಲ್ಲೆಗೆ ಸಂಬಂಧಿಸಿದಲ್ಲ. ಜಿಲ್ಲೆಗೆ ಹಂಚಿಕೆಯಾದ ಒಟ್ಟು 2744 ಪ್ಯಾಟ್ ಗಳು ಸುರಕ್ಷಿತವಾಗಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಎಸ್ಪಿಗೆ ಡಿಸಿ ಆದೇಶಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com