ಜೆಡಿಎಸ್ ಅವಕಾಶವಾದಿ ಪಕ್ಷ : ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ – ಶೋಭಾ ಕರಂದ್ಲಾಜೆ ..

ಬಿಜೆಪಿ ನಾಯಕರು ಕಾಂಗ್ರೆಸ್ ನವರ ಜೊತೆ ಮಾತನಾಡಿರುವ ಬಗ್ಗೆ ಬಿಡುಗಡೆ ಮಾಡಿರುವ ಸಿಡಿ ಫೇಕ್ ಆಗಿದೆ. ಅದನ್ನ ಯಾರು ಮಾಡಿದ್ದಾರೆ ಅನ್ನೋದು ಕೂಡ ತನಿಖೆಯಾಗಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.


ಮೈಸೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿಯ ಪ್ರದಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ, ಬಿಜೆಪಿ ವಿಧಾನ ಪರಿಷತ್ ನ ಚುನಾವಣೆಗೆ ಪೂರ್ವ ಸಿದ್ಧತೆ ಸಭೆಯನ್ನ ಕರೆದಿದ್ದವು. ದಕ್ಷಿಣ ಕ್ಷೇತ್ರದ ಶಿಕ್ಷಕರ ಚುನಾವಣೆಗೆ 3 ಜನ ನಾಮಪತ್ರವನ್ನ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನಗಳನ್ನ ಪಡೆದಿತ್ತಾದರು, ಬಿಎಸ್ ವೈ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷ ಸಂಘಟಿಸಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಪ್ಪನಾಣೆ ಮುಖ್ಯಮಂತ್ರಿ ಆಗಲ್ಲ, ಮುಖ್ಯಮಂತ್ರಿ ಆಗದಿದ್ದರೆ ನಾನು ಸತ್ತು ಹೋಗಿತ್ತೇನೆ ಎಂದು ಮುಖ್ಯಮಂತ್ರಿಯಾಗುತ್ತಿದ್ದಾರೆ. ಅವರಿಗೆ ನಾನು ಹೃದಯ ಪೂರಕವಾಗಿ ಅಭಿನಂದಿಸುತ್ತೇನೆ ಎಂದು ಟಾಂಗ್ ನೀಡಿದ ಶೋಭಾಕರಂದ್ಲಾಜೆ, ಇದ್ಯಾವುದಕ್ಕೂ ಕುಗ್ಗದ ಯಡಿಯೂರಪ್ಪ ಈಗಾಗ್ಲೇ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶದಲ್ಲಿ ನೆಲಕಚ್ಚಿದೇ.ರಾಜ್ಯದಲ್ಲೂ ನೆಲಕ್ಕೆ ಉರುಳುವ ಸ್ಥಿತಿ ಬಂದಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಯಾವುದೇ ಕಾರಣಕ್ಕೂ ಕುಗ್ಗೋದಿಲ್ಲ. ಮೈಸೂರಿನಲ್ಲಿಯೂ ನಮ್ಮ ಪಾರಮತ್ಯವನ್ನ ಸಾಧಿಸಿದ್ದೇವೆ. ಜೆಡಿಎಸ್ ಭದ್ರಕೋಟೆ ಹಾಸನಲ್ಲು ನಾವು ಬಿಜೆಪಿ ಬಾವುಟ ಹಾರಿಸಿದ್ದೇವೆ. ಒಂದೊಂದೇ ಹೆಜ್ಜೆಯನ್ನ ನಾವು ಹಾಕುತ್ತೇವೆ ರಾಜ್ಯದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶೋಭಾಕರಂದ್ಲಾಜೆ, ಕೇವಲ 18 % ಮತವನ್ನ ತೆಗೆದುಕೊಂಡ ಪಾರ್ಟಿ ರಾಜ್ಯದಲ್ಲಿ ಆಳ್ವಿಕೆ ಮಾಡುತ್ತಿದೆ. ರಾಜ್ಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮತ್ತು ಜಾತಿ ಲೆಕ್ಕಾಚಾರ ಮಾಡುವವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯರನ್ನ ಸೋಲಿಸಿ ಕಾಂಗ್ರೆಸ್ ನ ನಿರ್ನಾಮ ಮಾಡಲು ಜನತೆ ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

Leave a Reply

Your email address will not be published.

Social Media Auto Publish Powered By : XYZScripts.com