ಶಿರಾ : ಅಪಘಾತಕ್ಕೀಡಾಗಿ ಒದ್ದಾಡುತ್ತಿದ್ದ ದಂಪತಿಯನ್ನು ರಕ್ಷಿಸಿ ಮಾನವೀಯತೆ ಮೆರೆದ ಶಾಸಕ..

ತುಮಕೂರು : ಮಾನವೀಯತೆ ಮೆರೆದ ಶಾಸಕ : ಬೈಕ್ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ದಂಪತಿಗಳಿಬ್ಬರನ್ನು ಶಾಸಕರೊಬ್ಬರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ನಡೆದಿದೆ. ಹೌದು ಶಿರಾ – ತುಮಕೂರು ಹೆದ್ದಾರಿಯಲ್ಲಿ ತುಮಕೂರು ಮಾರ್ಗವಾಗಿ ಬರುತ್ತಿದ್ದ ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದೆ.

ಬೈಕ್ ನಲ್ಲಿದ್ದ ದಂಪತಿಗಳು ರಸ್ತೆಗೆ ಬಿದ್ದಿದ್ದಾರೆ. ಯಾರೊಬ್ಬರ ಸಹಾಯವೂ ಸಿಗದೆ ನರಳಾಡಿದ್ದಾರೆ. ಈ ವೇಳೆ ಅದೇ ಮಾರ್ಗದಲ್ಲಿ ಬರುತ್ತಿದ್ದ ಶಿರಾ ಶಾಸಕ ಸತ್ಯನಾರಾಯಣ , ಆಪತ್ತಿನಲ್ಲಿದ್ದ ದಂಪತಿಗಳನ್ನ ಕಂಡ ಕೂಡಲೇ ತಮ್ಮ ಕಾರನ್ನ ನಿಲ್ಲಿಸ, ಗಾಯಾಳುಗಳನ್ನ ತಮ್ಮದೇ ಕಾರಿನಲ್ಲಿ ಕರೆತಂದು ಕಳ್ಳಂಬೆಳ್ಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ತಮ್ಮನ್ನು ಕಾಪಾಡಿದ ಶಾಸಕರಿಗೆ ದಂಪತಿಗಳಿಬ್ಬರು ಧನ್ಯವಾದ ತಿಳಿಸಿದ್ದು, ಸತ್ಯನಾರಾಯಣರ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

Leave a Reply

Your email address will not be published.