ಬುಧವಾರ HDK ಪ್ರಮಾಣವಚನ ಹಿನ್ನೆಲೆ : ವಿಧಾನಸೌಧ ಮುಂಭಾಗದಲ್ಲಿ ಭರದ ಸಿದ್ಧತೆ

ಬುಧವಾರ ಎಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಭರದ ಸಿದ್ದತೆ ನಡೆದಿದೆ. ವಿಧಾನಸೌಧದ ಬಹು ಮೆಟ್ಟಿಲುಗಳ ಮೇಲೆ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.

ವೇದಿಕೆ ನಿರ್ಮಾಣದಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದು, ವಿವಿಐಪಿಗಳಿಗಾಗಿಯೇ ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿವಿಐಪಿಗಳಿಗೆ 3000 ವಿಶೇಷ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ 1 ಲಕ್ಷ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ಹೈಕೋರ್ಟ್ ಹಾಗು ವಿಧಾನಸೌಧದ ಮುಂಭಾಗದ ರಸ್ತೆಯಲ್ಲಿ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ.

ಬೃಹತ್ ಮಂಟಪ‌ ನಿರ್ಮಾಣಕ್ಕೂ ವಿಶೇಷ ಪೂಜೆ ನಡೆಯಲಿದೆ. ಅನಂತ್ ಶಾಸ್ತ್ರಿಯಿಂದ ವಿಧಾನಸೌಧದ ಬಹುಮೆಟ್ಡಿಲುಗಳ ಮೇಲೆ ವಿಶೇಷ ಪೂಜೆ ನೆರವೇರಿಸಲಾಗುವುದು. ಮಂಟಪ ಪೂಜೆ ಆಗಮಿಸಲಿರುವ ಶಾಸಕ ಎಚ್ ಡಿ ರೇವಣ್ಣ ಆಗಮಿಸಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com