ಮುಖ್ಯಮಂತ್ರಿಯಾಗುತ್ತಿರುವುದು ಸಣ್ಣಗೌಡರು – ಅಧಿಕಾರ ನಡೆಸುತ್ತಿರುವುದು ದೊಡ್ಡಗೌಡರೇ..?

ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ರಾಜ್ಯದ ಪ್ರಮುಖ ಅಧಿಕಾರಿಗಳೊಂದಿಗೆ ನಡೆಸಿದರೆನ್ನಲಾದ ಸಭೆಯು ತೀವ್ರ ವಿವಾದಕ್ಕೆ ಎಡೆ ಮಾಡಿಕೊಡುವ ಸಾಧ್ಯತೆಗಳಿವೆ.

ಭಾನುವಾರ ನಗರದ ದಕ್ಷಿಣ ಭಾಗದಲ್ಲಿರುವ ಮನೆಯೊಂದರಲ್ಲಿ ರಾಜ್ಯದ ಪ್ರಮುಖ ಅಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ರತ್ನಪ್ರಭಾ ಅರಸ, ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ,ಐಎಎಸ್ ಅಧಿಕಾರಿ ಲಕ್ಷ್ಮಿನಾರಾಯಣ, ಡಿಸಿಬಿ ಶರಣಪ್ಪ ಮಾಜಿ ಪ್ರಧಾನಿಯವರನ್ನು ಭೇಟಿ ನೀಡಿದ ಚಿತ್ರ ಲಭ್ಯವಾಗಿದೆ.

ಮುಖ್ಯಮಂತ್ರಿಗಳಾಗಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡನೇ ಬಾರಿ ಅಧಿಕಾರ ಸ್ವೀಕರಿಸುವ ಮುನ್ನವೇ ರಾಜ್ಯದ ಪ್ರಮುಖ ಹುದ್ದೆಗಳಲ್ಲಿ ಇರುವ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿದೆ. ಭೇಟಿ ನಡೆದಿರುವುದು ಕಚೇರಿಯಲ್ಲ ಅಲ್ಲ. ಮತ್ತು ಅಧಿಕೃತ ಭೇಟಿಯೋ, ಸಭೆಯೋ ಎಂಬುದು ದೃಢಪಟ್ಟಿಲ್ಲ.

ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ನಿಯೋಜಿತ ಮುಖ್ಯಮಂತ್ರಿಗಳ ತಂದೆಯವರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವುದು ನಾಳೆಯ ಆಡಳಿತ ಹೇಗಿರಬಹುದು? ಎನ್ನುವುದಕ್ಕೆ ಮುನ್ಸೂಚನೆ ಎನ್ನಲಾಗುತ್ತಿದೆ.

ನಿಯೋಜಿತ ಮುಖದಯಮಂತ್ತಿಯವರನರನು ಬೇಟಿಯಾಗಲು ಹೊಗಿರುವಾಗ, ಔಪಚಾರಿಕವಾಗಿ ದೇವೇಗೌಡರನ್ನು ಬೇಟಿಯಾಗಿರುವುದಾಗಿ ಅಧಿಕಾರಿಗಳು ಸ್ಫಷ್ಟಣೆ ನೀಡಿದ್ದರಾದರು ನಂಬಲು ಕಷ್ಟಸಾಧ್ಯವಾಗಿದೆ…

Leave a Reply

Your email address will not be published.

Social Media Auto Publish Powered By : XYZScripts.com