ಸೋಲನ್ನು ಗೆಲುವನ್ನಾಗಿ ಆಚರಿಸುತ್ತರುವ ಕಾಂಗ್ರೆಸ್ ಸಂತಸ 2019ಕ್ಕೆ ಅಂತ್ಯವಾಗಿದೆ – ಅಮಿತ್ ಶಾ..

ಕರ್ನಾಟಕದ ಜನತೆ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿಗೆ ಜನಾದೇಶ ನೀಡಿದ್ದರು. ಆದರೂ ಆ ಪಕ್ಷ ತನ್ನ ಸೋಲನ್ನೇ ಗೆಲುವಾಗಿ ಸಂಭ್ರಮಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದೆ. ತನ್ನ ಪಕ್ಷದ ಅನೇಕ ಸಚಿವರು ಚುನಾವಣೆಯಲ್ಲಿ ಸೋತಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಹೀನಾಯವಾಗಿ ಸೋತಿದ್ದಾರೆ. ಬದಾಮಿಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದಿದ್ದಾರೆ. ಅದರ ಹೊರತಾಗಿಯೂ ತಾನೇಕೆ ಈ ಸೋಲಿನಲ್ಲೂ ವಿಜಯದ ಸಂಭ್ರಮಾಚರಣೆಯನ್ನು ಮಾಡುತ್ತಿದ್ದೇನೆ ಎಂಬುದನ್ನು ಕಾಂಗ್ರೆಸ್ ಕರ್ನಾಟಕದ ಜನತೆಗೆ ತಿಳಿಸಬೇಕು’ ಎಂದು ಟಾಂಗ್ ನೀಡಿದರು.

ಸೋಲನ್ನು ವಿಜಯವನ್ನಾಗಿ ಆಚರಿಸುತ್ತಿರುವ ಕಾಂಗ್ರೆಸ್ ನ ಹೊಸ ಮಾರ್ಗ 2019ರ ಲೋಕಸಭಾ ಚುನಾವಣೆವರೆಗೆ ಮಾತ್ರ- ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಾಗ್ದಾಳಿ…
ಕಾಂಗ್ರೆಸ್ ಸೋಲನ್ನು ವಿಜಯವನ್ನಾಗಿ ಆಚರಿಸುತ್ತಿದೆ. ಕಾಂಗ್ರೆಸ್ ನ ಹೊಸ ಮಾರ್ಗ 2019ರ ಮಹಾ ಚುನಾವಣೆಯವರೆಗೂ ಮಾತ್ರ ಜಾರಿಯಲ್ಲಿರುತ್ತದೆ. ಆ ಬಳಿಕ ಅದರಿಂದ ಬಿಜೆಪಿಗೇ ಲಾಭವಾಗಲಿದೆ’ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್- ಜೆಡಿಎಸ್ ಮಾಡುತ್ತಿರುವ ಸಂಭ್ರಮಾಚರಣೆಯನ್ನ ಕರ್ನಾಟಕದ ಜನರು ಮಾಡುತ್ತಿಲ್ಲ. ಜೆಡಿಎಸ್ ಶೇ.80 ರಷ್ಟು ಕ್ಷೇತ್ರದಲ್ಲಿ ಠೇವಣಿ ಕಳೆದುಕೊಂಡಿದೆ. ಹೀಗಿರುವಾಗಲೂ ರಾಜ್ಯದಲ್ಲಿ ಅಧಿಕಾರ ಹಿಡಿದಿದೆ. ಇದು ಕೇವಲ 2018ರ ಲೋಕಸಭಾ ಚುನಾವಣೆವರೆಗೆ ಮಾತ್ರ ಎಂದು ಭವಿಷ್ಯ ನುಡಿದರು. ಲೋಕಸಭಾ ಚುನಾವಣೆಯ ನಂತರ ಮತ್ತೆ ಕರ್ನಾಟಕಲ್ಲಿ ಅಿಕಾರದ ಚುಕ್ಕಾಣೆ ಹಿಡಿಯಲಿದ್ದೆವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು..

Leave a Reply

Your email address will not be published.

Social Media Auto Publish Powered By : XYZScripts.com