WATCH : ಏಕಕಾಲದಲ್ಲಿ 3 ಹಾವುಗಳ ಸರಸ ಸಲ್ಲಾಪ : ವಿಡಿಯೋ ವೈರಲ್..!

ಹಾವುಗಳ ಸರಸ ಸಲ್ಲಾಪ (ತೆಕ್ಕೆ ಹಾಕಿಕೊಳ್ಳೋದು) ಕಾಣ ಸಿಗೋದು ತೀರಾ ವಿರಳ. ಎರಡು ಹಾವುಗಳು ಸರಸವಾಡೋದನ್ನ ನೋಡೋದೆ ಕಷ್ಟಸಾಧ್ಯ. ಅಂತದ್ರಲ್ಲಿ ಮೂರು ಹಾವುಗಳು ಏಕ ಕಾಲದಲ್ಲಿ ಸರಸ ಸಲ್ಲಾಪ ಮಾಡೋದನ್ನು ನೋಡದ್ರೆ ಆಶ್ಚರ್ಯವಾಗೋದರ ಜೊತೆ ಏನ್ ಕೇಡುಗಾಲನಪ್ಪಾ ಅಂತಾನೂ ಅನಿಸುತ್ತೆ.

ಆದರೆ, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಜನ ಮಾತ್ರ ಮೂರು ಹಾವುಗಳ ಸರಸ ಸಲ್ಲಾಪವನ್ನ ನೋಡಿ ಎಂಜಾಯ್ ಮಾಡಿದ್ದಾರೆ. ಏಕಕಾಲದಲ್ಲಿ ಮೂರು ಹಾವುಗಳ ಸರಸವನ್ನ ನೋಡಿದ ಗ್ರಾಮಸ್ಥರು ಕೆಲವರು ಶುಭ ಸೂಚನೆ ಅಂದರೆ, ಮತ್ತ ಕೆಲವರು ಎರಡು ಹಾವು ತೆಕ್ಕೆ ಹಾಕೋದನ್ನ ನೋಡೋದೆ ಪಾಪ, ಅಂತದ್ರಲ್ಲಿ ಮೂರು ಹಾವುಗಳ ಸರಸ ನೋಡೋದು ಅಪಶಕುನ ಅಂದಿದ್ದಾರೆ.

ಆದ್ರೆ, ಅದು ಒಳ್ಳೆದೋ-ಕೆಟ್ಟದ್ದೋ ಗೊತ್ತಿಲ್ಲ. ಆದ್ರೆ, ಹಾವುಗಳ ಜೀವಿತಾವಧಿ ಹಾಗೂ ಪ್ರಕೃತಿಯ ವೈಚಿತ್ರ್ಯದಲ್ಲಿ ಎಂದೂ ಕಾಣಸಿಗೋದು ಮೂರು ಹಾವುಗಳ ಸರಸ ಸಲ್ಲಾಪ ನೋಡಿ ಕೆಲವರು ಎಂಜಾಯ್ ಮಾಡಿದರೆ, ಮತ್ತ ಕೆಲವರು ಆಶ್ಚರ್ಯ ವ್ಯಕ್ತಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com