ಹುಡುಗಿ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಗುಂಪು ಘರ್ಷಣೆ : ಚಾಕು ಇರಿತದಿಂದ ಇಬ್ಬರಿಗೆ ಗಾಯ

ಕೊಪ್ಪಳ : ಹುಡುಗಿ ಜೊತೆ ಅನುಚಿತವಾಗಿ ವರ್ತಿಸಿದ್ದಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಗಲಾಟೆಯಲ್ಲಿ ಇಬ್ಬರು ಹೊಟ್ಟೆಗೆ ಚಾಕು ಇರಿತಕ್ಕೊಳಗಾಗಿದ್ದಾರೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊಪ್ಪಳದ ಗಂಗಾವತಿಯ 24 ನೇ ವಾರ್ಡ್ ಗೌಳಿ ನಗರದಲ್ಲಿ ನಡೆದ ಘಟನೆಯಲ್ಲಿ ಸಂಜೀವ ಗೌಳಿ (38), ಬಾಳಪ್ಪ (30), ಚಾಕು ಇರಿತಕ್ಕೆ ಒಳಗಾಗಿದ್ದಾರೆ. ಚಾಕು ಇರಿದವರು ಪರಾರಿಯಾಗಿದ್ದಾರೆ. ಗಂಗಾವತಿಯಲ್ಲಿ ನಿನ್ನೆಯಿಂದ ಬೇರೆ ಬೇರೆ ವಿಷಯಗಳಿಂದ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿದೆ.

 

 

ಗಂಗಾವತಿಯಲ್ಲಿಯೇ ಬೀಡು ಬಿಟ್ಟು ಗಸ್ತು ತಿರುಗುತ್ತಿರುವ ಪೊಲೀಸರು ಘಟನೆ ನಡೆಯದಂತೆ ತಡೆಯಲು ಹರಸಾಹಸ ಪಡುತ್ತಿದ್ದಾರೆ. ಗಂಗಾವತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published.

Social Media Auto Publish Powered By : XYZScripts.com