Karnataka Election 2018 : ಸುಧಾಮರಗಿಲ್ಲ ಸ್ಥಾನ, ಇಲ್ಲಿ ಎಲ್ಲ ಶಾಸಕರು ಕುಬೇರರೆ…!

ಕಳೆದ 2013ರಲ್ಲಿ ಜಯ ಗಳಿಸಿ ಈ ಸಲವೂ ಆಯ್ಕೆಯಾಗಿರುವ ಸುಮಾರು 94 ಶಾಸಕರ ಆಸ್ತಿ ಇದೀಗ ಸರಾಸರಿ ಶೇ.90ರಷ್ಟು ಹೆಚ್ಚಳವಾಗಿದ್ದು, ಇದು ದೇಶದ ಯಾವುದೇ ಸೆಕ್ಟರನ ಬೆಳವಿಗೆಗಿಂತ ವೇಗವಾಗಿ ಆಸ್ಥಿ ಹೆಚ್ಚಾಗಿರುವುದು ಕಂಡುಬರುತ್ತದೆ.. ಎಂ.ಟಿ.ಬಿ.ನಾಗರಾಜು, ಡಿ.ಕೆ.ಶಿವಕುಮಾರ್, ಬೈರತಿ ಸುರೇಶ್, ಆರ್.ಶಂಕರ್, ಎಂ.ಕೃಷ್ಣಪ್ಪ, ಆರ್.ವಿ.ದೇಶಪಾಂಡೆ ಮತ್ತು ಉದಯ್ ಗರುಡಾಚಾರ್ ಟಾಪ್ ಫೈವ್ ಕಯಭೇರ ಶಾಸಕರ  ಪಟ್ಟಿಯಲ್ಲಿದ್ದಾರೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ಕರ್ನಾಟಕ ಎಲೆಕ್ಷನ್ ವಾಚ್ (ಕೆಇಡಬ್ಲೂೃ) ನಡೆಸಿದ ಜಂಟಿ ಅಧ್ಯಯನದಲ್ಲಿ ಈ ವಿಷಯ ಬಹಿರಂಗವಾಗಿದೆ. ಈ ಹಿಂದೆ 2013ರಲ್ಲಿ ಸರಾಸರಿ 26.92 ಕೋಟಿ ರೂಪಾಯಿಗಳ ಆಸ್ತಿ ಹೊಂದಿದ್ದ ಶಾಸಕರು ಈ ಬಾರಿ ಚುನಾವಣೆಗೆ ಸ್ಪರ್ಧಿಸುವ ವೇಳೆ ಸಲ್ಲಿಸಿರುವ ಆಸ್ತಿ ಘೋಷಣೆಯಲ್ಲಿ ಸರಾಸರಿ 44.24 ಕೋಟಿ ರೂ.ಗಳ ಒಡೆಯರಾಗಿದ್ದು, ಶಾಸಕರ ಆಸ್ತಿ ಹೆಚ್ಚಳದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮೊದಲ ಸ್ಥಾನದಲ್ಲಿದ್ದಾರೆ. ಪ್ರಿಯಾಕೃಷ್ಣ ಸೇರಿದಂತೆ ಕಣದಲ್ಲಿ 883 ಕೋಟ್ಯಧಿಪತಿಗಳು ಮರು ಆಯ್ಕೆಯಾದ ಶಾಸಕರ ಆಸ್ತಿ ಹೆಚ್ಚಳದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರೇ ಮುನ್ನಡೆ ಸಾಧಿಸಿದ್ದಾರೆ.

ಕಾಂಗ್ರೆಸ್‌ನಿಂದ ಒಟ್ಟು 47 ಶಾಸಕರು ಮರು ಆಯ್ಕೆಯಾಗಿದ್ದು, 2013ರಲ್ಲಿ ಇದ್ದ ಸರಾಸರಿ ಆಸ್ತಿ 43 ಕೋಟಿ ರೂ.ಗಳಿಂದ ಈಗ ಸರಾಸರಿ 83 ಕೋಟಿ ರೂ.ಗಳಿಗೆ ಮೌಲ್ಯ ಹೆಚ್ಚಿದೆ. ಅಂದರೆ ಪ್ರತಿಯೊಬ್ಬ ಶಾಸಕರ ಸರಾಸರಿ ಆಸ್ತಿ 43 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ. ಇದು ಶೇ.108ರಷ್ಟು ವೃದ್ಧಿಯಾಗಿದೆ. ಇನ್ನು ಬಿಜೆಪಿಯ 34 ಮಂದಿ ಮರು ಆಯ್ಕೆಯಾಗಿದ್ದು, ಇವರ ಆಸ್ತಿ ಸರಾಸರಿ 13 ಕೋಟಿ ರೂ.ಗಳಿಂದ 21 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಂದರೆ ಸರಾಸರಿ 7 ಕೋಟಿ ರೂ.ಗಳಷ್ಟು ಹೆಚ್ಚಳವಾಗಿದ್ದು, ಶೇ.53ರಷ್ಟು ಬೆಳವಣಿಗೆ ಹೊಂದಿದ್ದಾರೆ. ಜೆಡಿಎಸ್‌ನ 13 ಮಂದಿ ಮರು ಆಯ್ಕೆ ಬಯಸಿದ್ದು, ಅವರ ಆಸ್ತಿ 21 ಕೋಟಿ ರೂ.ಗಳಿಂದ 28 ಕೋಟಿ ರೂ.ಗಳಿಗೆ ತಲುಪಿದೆ. 6 ಕೋಟಿ ರೂ.ಗಳ ಹೆಚ್ಚು ಆಸ್ತಿ ಹೊಂದಿ, ಶೇ.30ರಷ್ಟು ಬೆಳವಣಿಗೆ ದಾಖಲಿಸಿದ್ದಾರೆ. ಒಟ್ಟು 94 ಶಾಸಕರ ಸರಾಸರಿ ಆಸ್ತಿ 28 ಕೋಟಿ ರೂ.ಗಳಿಂದ 53 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, 25 ಕೋಟಿ ರೂ.ಗಳ ಹೆಚ್ಚುವರಿ ಆಸ್ತಿ ಮಾಡಿದ್ದಾರೆ. ಆ ಮೂಲಕ ಶೇ.90ರಷ್ಟು ಹೊಸ ಆಸ್ತಿ ಗಳಿಸಿದ್ದಾರೆ. ಸಚಿವ ಡಿ.ಕೆ.ಶಿವಕುಮಾರ್ ಆಸ್ತಿ 251 ಕೋಟಿ ರೂ.ಗಳಿಂದ 840 ಕೋಟಿ ರೂ.ಗಳಿಗೆ ಹೆಚ್ಚಳವಾಗಿದ್ದು, ಸುಮಾರು 588 ಕೋಟಿ ರೂ.ಗಳಷ್ಟು ಆಸ್ತಿ ವೃದ್ಧಿಯಾಗಿದೆ. ಅಂದರೆ ಶೇ.234 ರಷ್ಟು ಆಸ್ತಿ ಮೌಲ್ಯ ಹೆಚ್ಚಳವಾಗಿದೆ. ಹೊಸಕೇಟೆ ಶಾಸಕ ಎನ್.ನಾಗರಾಜು (ಎಂಟಿಬಿ) ಅವರ ಆಸ್ತಿ 470 ಕೋಟಿ ರೂ.ಗಳಿಂದ 1,015 ಕೋಟಿ ರೂ.ಗಳಿಗೆ ಹೆಚ್ಚಿದ್ದು, ಈ ಅವಧಿಯಲ್ಲಿ 545 ಕೋಟಿ ರೂ.ಗಳ ಆಸ್ತಿ ವೃದ್ಧಿಯಾಗಿದೆ. ಅಂದರೆ ಶೇ.157ರಷ್ಟು ಆಸ್ತಿ ಮೌಲ್ಯ ವೃದ್ಧಿಸಿದೆ. ದಾವಣಗೆರೆ ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆಸ್ತಿ 67 ಕೋಟಿ ರೂ.ಗಳಿಂದ 183 ಕೋಟಿ ರೂ.ಗಳಿಗೆ ಹೆಚ್ಚಳವಾಗಿದೆ. ಅಂದರೆ 115 ಕೋಟಿ ರೂ.ಗಳ ಶೇ.170ರಷ್ಟು ಆಸ್ತಿ ವೃದ್ಧಿಯನ್ನು ಶಾಮನೂರು ಆದಾಯಘೋಷಣೆಯಲ್ಲಿ ಹೇಳಿಕೊಂಡಿದ್ದಾರೆ. ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಅವರ ಆಸ್ತಿ 113 ಕೋಟಿ ರೂ.ಗಳಿಂದ 215 ಕೋಟಿ ರೂ.ಗಳಿಗೆ ಏರಿದೆ. ಐದು ವರ್ಷಗಳ ಅವಧಿಯಲ್ಲಿ 101 ಕೋಟಿ ರೂ.ಗಳ ಆಸ್ತಿ ವೃದ್ಧಿಸಿದ್ದು, ಶೇ.89ರಷ್ಟು ಬೆಳವಣಿಗೆ ಸಾಧಿಸಿದ್ದಾರೆ.
ಅತಿ ಹೆಚ್ಚು ಆದಾಯ ಘೋಷಿಸಿಕೊಂಡ ಶಾಸಕರು ಎಂ.ಟಿ.ಬಿ.ನಾಗರಾಜು-1,050 ಕೋಟಿರೂ , ಡಿ.ಕೆ.ಶಿವಕುಮಾರ್ 840 ಕೋಟಿರೂ , ಬೈರತಿ ಸುರೇಶ್-416 ಕೋಟಿ ರೂ, ಆರ್.ಶಂಕರ್-265 ಕೋಟಿ, ಎಂ.ಕೃಷ್ಣಪ್ಪ-235 ಕೋಟಿರೂ, ಆರ್.ವಿ.ದೇಶಪಾಂಡೆ-215 ಕೋಟಿರೂ, ಉದಯ್ ಗರುಡಾಚಾರ್-196 ಕೋಟಿ, ಎನ್.ಎ.ಹ್ಯಾರಿಸ್-190 ಕೋಟಿರೂ, ಶಾಮನೂರು ಶಿವಶಂಕರಪ್ಪ- 183 ಕೋಟಿ ರೂ ಹಾಗೂ ಎಚ್.ಡಿ.ಕುಮಾರಸ್ವಾಮಿ-167 ಕೋಟಿ ರೂ ಒಡೆಯರು.

ಅತಿ ಹೆಚ್ಚು ಸಾಲ ಹೊಂದಿದವರು ಡಿ.ಕೆ.ಶಿವಕುಮಾರ್ 228 ಕೋಟಿ ರೂ. ಎಚ್.ಡಿ.ಕುಮಾರಸ್ವಾಮಿ 104 ಕೋಟಿ ರೂ. ಹಾಗೂ ಎಂ.ಕೃಷ್ಣಪ್ಪ 66 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.
ಅತಿ ಕಡಿಮೆ ಆಸ್ತಿ ಹೊಂದಿದವರು ಎಸ್.ಎ.ರಾಮದಾಸ್ 39 ಲಕ್ಷ ರೂ., ಎ.ಎಸ್.ರವೀಂದ್ರ 68 ಲಕ್ಷ ರೂ. ಹಾಗೂ ಎನ್.ಮಹೇಶ್ 75 ಲಕ್ಷ ರೂ.ಗಳ ಒಟ್ಟು ಆಸ್ತಿ ಹೊಂದಿದ್ದಾರೆ. ಯಾವ ಪಕ್ಷದಲ್ಲಿ ಎಷ್ಟು ಕೋಟ್ಯಾಧೀಶರು: ಬಿಜೆಪಿಯಲ್ಲಿ 101, ಕಾಂಗ್ರೆಸ್‌ನಲ್ಲಿ 77, ಜೆಡಿಎಸ್‌ನಲ್ಲಿ 35, ಕೆಪಿಜೆಪಿ ಮತ್ತು ಪಕ್ಷೇತರ ತಲಾ ಒಬ್ಬರು ಕೋಟ್ಯಾಧೀಶ ಶಾಸಕರಾಗಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com