IPL : ರಾಯಲ್ಸ್ ಎದುರು ಶರಣಾದ ಕೊಹ್ಲಿ ಪಡೆ : ಪ್ಲೇ ಆಫ್ ಕನಸು ಭಗ್ನ, ಟೂರ್ನಿಯಿಂದ RCB ಔಟ್

ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ ಟಿ-20 ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 30 ರನ್ ಅಂತರದ ಸೋಲು ಕಂಡಿದೆ. ಇದರೊಂದಿಗೆ ಆರ್ಸೀಬಿಯ ಪ್ಲೇ ಆಫ್ ಕನಸು ಭಗ್ನಗೊಂಡಿದ್ದು, ಐಪಿಎಲ್ ಟೂರ್ನಿಯಿಂದ ನಿರ್ಗಮಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ, 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಮೊತ್ತ ಕಲೆಹಾಕಿತು. ರಾಯಲ್ಸ್ ಪರವಾಗಿ ರಾಹುಲ್ ತ್ರಿಪಾಠಿ 80 ಹಾಗೂ ನಾಯಕ ಅಜಿಂಕ್ಯ ರಹಾನೆ 33, ಹೆನ್ರಿಕ್ ಕ್ಲಾಸೆನ್ 32 ರನ್ ಗಳಿಸಿದರು.

ಗುರಿಯನ್ನು ಬೆನ್ನಟ್ಟಿದ ಆರ್ಸೀಬಿ 19.2 ಓವರುಗಳಲ್ಲಿ 134 ಮೊತ್ತಕ್ಕೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಆರ್ಸೀಬಿ ಪರವಾಗಿ ಎಬಿ ಡಿವಿಲಿಯರ್ಸ್ 53 ಹಾಗೂ ಪಾರ್ಥಿವ್ ಪಟೇಲ್ 33 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸಮನ್ ಗಳ್ಯಾರೂ ತಂಡಕ್ಕೆ ನೆರವಾಗಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com