ರಂಜಾನ್ ತಿಂಗಳಲ್ಲಿ ಮಾಲ್, ಪಾರ್ಕಿಗೆ ತೆರಳದಂತೆ ಮುಸ್ಲಿಂ ಮಹಿಳೆಯರಿಗೆ ಎಚ್ಚರಿಕೆ..!

ಮಂಗಳೂರು : ರಂಝಾನ್ ತಿಂಗಳಲ್ಲಿ ಹೆಣ್ಮಕ್ಕಳು ಮಾಲ್ ಚಿತ್ರಮಂದಿರ, ಪಾರ್ಕ್ ಗಳಲ್ಲಿ ಕಂಡು‌ ಬಂದ್ರೆ ಸಾಯಿಸಿ ಬಿಡ್ತಾರಂತೆ. ಹೀಗಂತ ಅಘಾತಕಾರಿ ಎಚ್ಚರಿಕೆಯ ಸಂದೇಶವೊಂದು ಸೋಷಿಯಲ್ ಮೀಡಿಯಾಗಳಲ್ಲಿ‌‌ ಹರಿದಾಡುತ್ತಿದೆ. ಮುಸ್ಲಿಂ ಸಂಘಟನೆಗಳ ಹೆಸರಲ್ಲಿ ಈ‌ ಸಂದೇಶವನ್ನು ಹರಿಯಬಿಡಲಾಗುತ್ತಿದ್ದು ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿ ಮಾಡೋ ಪ್ರಯತ್ನವನ್ನು ಮಾಡಲಾಗ್ತಿದೆ.

ಜೊತೆಗೆ ಬುರ್ಖಾ ಧರಿಸಿ ತಿನ್ನುವುದು ಕಂಡುಬಂದರೆ ಹೊಡೆದು ಮುಗಿಸ್ತೀವಿ. ನಿಮ್ಮ ಮೇಲೆ ನಮ್ ಕಣ್ಣಿದೆ, ಯಾರು ಕೇಳಲು ಬರ್ತಾರೋ ಎಂದು ನೋಡಿ‌ ಬಿಡೋಣ ಎಂದು ಎಚ್ಚರಿಸಲಾಗಿದೆ. ಮುಸ್ಲಿಮರ ರಂಝಾನ್ ಉಪವಾಸದ ಮೊದಲನೇ ದಿನವೇ ಈ ಸಂದೇಶವನ್ನು ಹರಿಯಬಿಡಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಇದು ವೈರಲ್ ಆಗ್ತಿದೆ. ಈ ಕುರಿತಾಗಿ ಮಂಗಳೂರು ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com