ಮೈಸೂರು : ಎತ್ತಿನ ಪ್ರಾಣ ಕಾಪಾಡಲು ಹೋಗಿ ವಿದ್ಯುತ್ ಸ್ಪರ್ಶದಿಂದ ರೈತನ ಸಾವು..!

ಮೈಸೂರು : ಎತ್ತಿನ ಪ್ರಾಣ ಕಾಪಾಡಲು ಹೋಗಿ ರೈತನೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ. ವಿದ್ಯುತ್ ಸ್ಪರ್ಶದಿಂದ ರೈತ ಯೋಗೀಶ್ (30) ಮೃತ ದುರ್ದೈವಿಯಾಗಿದ್ದಾರೆ.  ಹುಣಸೂರು ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಘಟನೆ ನಡೆದಿದೆ.

ಮುಂಜಾನೆ 6.30ರ ಸುಮಾರಿಗೆ ಎತ್ತಿನ ಗಾಡಿ ಕಟ್ಟಿಕೊಂಡು ಜಮೀನಿನತ್ತ ಹೊರಟಿದ್ದ. ಎತ್ತಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶವಾಗಿದೆ. ಒದ್ದಾಡುತ್ತಿದ್ದ ಎತ್ತನ್ನು ಬಿಡಲು ಹೋಗಿ ಯೋಗೀಶ್ ಸಾವನ್ನಪ್ಪಿದ್ದಾರೆ. ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.