ಕೋಡಿಮಣಿತ್ತಾಯ ದೇವಸ್ಥಾನದ ಮೇಲೆ ಉರುಳಿ ಬಿದ್ದ ಮರ : ಭಕ್ತರಲ್ಲಿ ಮನೆಮಾಡಿದ ಆತಂಕ..!

ಮಂಗಳೂರು : ಅಪಶಕುನ! ಕರಾವಳಿಯ ಇತಿಹಾಸ ಪ್ರಸಿದ್ದ ದೈವಸ್ಥಾನ ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ಭಾರೀ ಅವಘಡವೊಂದು ಸಂಭವಿಸಿದ್ದು, ಸದ್ಯ ದೈವಭಕ್ತರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಕೊಡಮಣಿತ್ತಾಯ ದೈವಸ್ಥಾನದ ಮುಂಭಾಗದಲ್ಲಿ ನೆಟ್ಟಿದ್ದ ದೈವದ ಕೊಡಿಮರ ತಡರಾತ್ರಿ ದೈವಸ್ಥಾನದ ಮೇಲೆಯೇ ಉರುಳಿಬಿದ್ದಿದ್ದು, ಭಾರೀ ಗಂಡಾಂತರದ ಮುನ್ಸೂಚನೆ ಅನ್ನೋ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಕರಾವಳಿ ಭಾಗದ ಅತ್ಯಂತ ಕಾರ್ಣಿಕ ದೈವಗಳಲ್ಲಿ ಕೊಡಮಣಿತ್ತಾಯ ಕೂಡ ಒಂದಾಗಿದ್ದು, ಸಾಂಪ್ರದಾಯಿಕ ಆಚರಣೆಯಲ್ಲಿ ಎಡವಿದ ಕಾರಣ ಈ ಅಪಶಕುನ ನಡೆದಿದೆ ಅನ್ನೋ ಮಾತುಗಳು ಕೇಳಿ ಬಂದಿದೆ. ಕಳೆದ ತಿಂಗಳು ರಾಜ್ಯದ ಇತಿಹಾಸ ಪ್ರಸಿದ್ದ ಧಾರ್ಮಿಕ ಪುಣ್ಯಕ್ಷೇತ್ರ ಕಟೀಲಿನಲ್ಲಿ ಜಾತ್ರೋತ್ಸವ ನಡೆದಿದ್ದು, ಈ ವೇಳೆ ಕೊಡಮಣಿತ್ತಾಯ ದೈವ ಕಟೀಲಿಗೆ ಭೇಟಿ ಕೊಡೋದು ವಾಡಿಕೆ ‌ಅದರಂತೆ ದೈವ ಕಟೀಲಿಗೆ ಭೇಟಿ ಕೊಟ್ಟಿದ್ದ ವೇಳೆ ಸಾಂಪ್ರದಾಯಿಕ ಆಚರಣೆ ವಿಚಾರಕ್ಕೆ ಎರಡು ಪಂಗಡಗಳ ಮಧ್ಯೆ ತಕರಾರು ನಡೆದಿದೆ ಎನ್ನಲಾಗಿದೆ.

ಶಿಬರೂರು ಮತ್ತು ಕೊಡತ್ತೂರು ಪಂಗಡದ ಮಧ್ಯೆ ಈ ತಕರಾರು ಎದ್ದಿದ್ದು, ಇದ್ರಿಂದ ದೈವ ಆಕ್ರೋಶಗೊಂಡಿದೆ ಎನ್ನಲಾಗ್ತೊದೆ. ಇದರ ಪರಿಣಾಮವೇ ದೈವ ತನ್ನ ಆಕ್ರೋಶವನ್ನ ಈ ರೀತಿ ವ್ಯಕ್ತಪಡಿಸಿದ್ದು, ಇದು ಗಂಡಾಂತರದ ಸೂಚನೆ ಅನ್ನೋ ಆತಂಕ ವ್ಯಕ್ತವಾಗಿದೆ. ಸದ್ಯ ಕೊಡಿಮರ ಉರುಳಿಬಿದ್ದು ದೈವಸ್ಥಾನಕ್ಕೂ ಭಾರೀ ಹಾನಿಯಾಗಿದ್ದು, ಆಡಳಿತ ಮಂಡಳಿ ಈ ಬಗ್ಗೆ ಪ್ರಶ್ನಾಚಿಂತನೆ ನಡೆಸಲು ಚಿಂತಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com