ನಿರೀಕ್ಷೆಗೂ ಮುಂಚೆಯೇ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಬಿದ್ದು ಹೋಗಲಿದೆ : ಈಶ್ವರಪ್ಪ

ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ‘ ಕಾಂಗ್ರೆಸ್ ನ ಕೊನೆ ಸಿಎಂ ಸಿದ್ದರಾಮಯ್ಯ ಅಂತ ಹೇಳಿದ್ವಿ, ಅದು ಸತ್ಯವಾಗಿದೆ. ರಾಜ್ಯದಲ್ಲಿ ಜನ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರ ಮಾಡಿದ್ರೂ, ಹಿಂಬಾಗಿಲಿನಿಂದ ಜೆಡಿಎಸ್ ಗೆ ಬೆಂಬಲ ನೀಡಿ ಅಧಿಕಾರಕ್ಕೆ ಬರುತ್ತಿದೆ. ಇದು ಕುಚೋದ್ಯದ ರಾಜಕಾರಣ.

‘ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ನಮ್ಮ ನೀರಿಕ್ಷೆಗೊ ಮುಂಚೆನೇ ಬಿದ್ದು ಹೋಗುತ್ತದೆ. ಬಿಜೆಪಿಗೆ 104 ಶಾಸಕರನ್ನು ಜನ ಗೆಲ್ಲಿಸಿ ಕೊಟ್ಟಿದ‌್ದಾರೆ. ಸರ್ಕಾರ ಬಹಳ ದಿನ ಇರಲ್ಲ. ಸರ್ಕಾರದ ಕೌನ್ ಡೌನ್ ಶುರುವಾಗಿದೆ. ಮಂತ್ರಿ ಮಂಡಲದ ರಚನೆಗೆ ಕಸರತ್ತು ಶುರುವಾಗಿದೆ. ಅತೃಪ್ತಿ ಕಾಂಗ್ರೆಸ್ ಮತ್ತು ಜೆಡಿಎಸ್ ನಲ್ಲಿ ಇದೆ ‘ ಎಂದು ಹೇಳಿದ್ದಾರೆ.

‘ ಜನ ಕಾಂಗ್ರೆಸ್ ತಿರಸ್ಕಾರ ಮಾಡಿದ ಮೇಲೆ ಹೇಗೆ ಅಧಿಕಾರಕ್ಕೆ ಬರುವುದು ಎಂದು ಹೇಳುತ್ತಿದ್ದಾರೆ. ಈ ಸರ್ಕಾರಕ್ಕೆ ಹೆಚ್ಚು ದಿನ ಆಡಳಿತ ನಡೆಸೊದಿಲ್ಲ. ಸಿದ್ದರಾಮಯ್ಯನವರು ಅವರಪ್ಪಾಣೆ ಹೆಚ್ ಡಿ ಕೆ ಸಿಎಂ ಆಗಲ್ಲ ಅಂತ ಹೇಳುತ್ತಿದ್ದರು, ಈಗ ಅವರೆ ಹೋಗಿ ಸಿಎಂ ಮ‌ಾಡುವ ದುಸ್ಥಿತಿ ಬಂದಿದೆ. ಕಾಂಗ್ರೆಸ್ ಅವಕಾಶ ರಾಜಕಾರಣ ಮಾಡುತ್ತಿದ್ದಾರೆ ‘ ಎಂದು ಆರೋಪಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com