Karnataka Election 2018 : ಕ್ರಿಮಿನಲ್ ಪ್ರಕರಣಗಳಲ್ಲಿ BJP ಶಾಸಕರೆ ಮುಂದು….!

ರಾಜ್ಯದ 222 ಶಾಸಕರ ಪೈಕಿ 77 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಸ್ವತಃ ಶಾಸಕರು ಘೋಷಿಸಿಕೊಂಡಿದ್ದಾರೆ. ಈ ಪೈಕಿ 54 ಶಾಸಕರ ವಿರುದ್ಧ ಕೊಲೆಯತ್ನ ಹಾಗೂ ಅಪಹರಣದಂತಹ ಗಂಭೀರ ಆರೋಪಗಳೂ ಇವೆ. ನಾಲ್ವರ ವಿರುದ್ಧ ಕೊಲೆಯತ್ನ, 6 ಶಾಸಕರ ವಿರುದ್ಧ ದ್ವೇಷ ಪ್ರಚೋದಕ ಭಾಷಣ ಮಾಡಿದ ಆರೋಪಗಳೂ ಸೇರಿವೆ. ಅತಿ ಹೆಚ್ಚು ಶಾಸಕರನ್ನು ಹೊಂದಿರುವ ಅತಿ ಹೆಚ್ಚು ಕ್ರಿಮಿನಲ್ಲ್ ಗಳನ್ನು ಹೊಂದಿರುವ ಪಕ್ಷವಾಗದೆ,  ಬಿಜೆಪಿಯ 104 ಶಾಸಕರ ಪೈಕಿ 42 ಮಂದಿ ಶಾಸಕರು  ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲಿಕಿಕೊಂಡೆದ್ದಾರೆ. ಅದರಲ್ಲೂ ಕ್ರಮವಾಗಿ  ಬಿಜೆಪಿಯ 29 ಶಾಸಕರು  ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇವೆ.

ಕಾಂಗ್ರೆಸ್ 78 ಶಾಸಕರ ಪೈಕಿ 23 ಶಾಸಕರು  ಕ್ರಿಮಿನಲ್ ಪ್ರಕರಣಗಳಲ್ಲಿ ಸಿಲಿಕಿಕೊಂಡೆದ್ದಾರೆ. ಇನ್ನು ಗೌಡರ ಜೆಡಿಎಸ್‌ನ 38 ಶಾಸಕರ ಪೈಕಿ 11 ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಸ್ವಯಂ ಘೋಷಿಸಿಕೊಂಡಿದ್ದಾರೆ. ಬಿಜೆಪಿಯ 104 ಶಾಸಕರ ಪೈಕಿ 42, ಕಾಂಗ್ರೆಸ್‌ನ 78 ಶಾಸಕರ ಪೈಕಿ 23, ಹಾಗೂ ಜೆಡಿಎಸ್‌ನ 38 ಶಾಸಕರ ಪೈಕಿ 11 ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಅದರಲ್ಲೂ ಕ್ರಮವಾಗಿ  17 ಕಾಂಗ್ರೆಸ್ ಹಾಗೂ 8 ಜೆಡಿಎಸ್ ಶಾಸಕರ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳು ಇವೆ.
ಇನ್ಜು ವಿದ್ಯಾರ್ಹತೆಗೆ ಬಂದರೆ ಸ್ವಾತಂತ್ರ್ಯ ಬಂದು 70 ವರ್ಷವಾದರು ಅನಕ್ಷದಸ್ಥ ಶಾಸಕರು ನಮ್ಮನ್ನು ಆಳುವುದು ತಪ್ಪಿಲ್ಲ.. ಒಬ್ಬ ಶಾಸಕರು ಕೆವಲ ಅಕ್ಷರಸ್ಥರಾದರೆ, ಐವರು ಶಾಸಕರು ಐದನೇ ತರಗತಿವರೆಗೆ ಓದಿದ್ದಾರೆ.. , 8ನೇ ತರಗತಿವರೆಗೆ ಓದಿದ 10 ಮಂದಿ, ಎಸ್‌ಎಸ್‌ಎಲ್‌ಸಿವರೆಗೆ ಓದಿದ 31, ಪಿಯುಸಿವರೆಗೆ ಓದಿದ 34 ಮಂದಿ, ಪದವಿವರೆಗೆ ಓದಿದ 60 ಮಂದಿ ಶಾಸಕರು ಈ ಬಾರಿ ಗೆದ್ದುಬಂದಿದ್ದಾರೆ.

ವೃತ್ತಿಪರ ಪದವಿ ಪಡೆದ 44 ಮಂದಿ, ಸ್ನಾತಕೋತ್ತರ ಪದವಿ ಪಡೆದ 30, ಡಾಕ್ಟರೇಟ್ ಪಡೆದ ಇಬ್ಬರು, ಇತರೆ ವಿದ್ಯಾರ್ಹತೆ ಹೊಂದಿದ ನಾಲ್ವರು ಸೇರಿದಂತೆ ಒಟ್ಟು 221 ಮಂದಿ ವಿದ್ಯಾರ್ಹತೆ ಬಹಿರಂಗಪಡಿಸಿದ್ದರೆ ಒಬ್ಬರು ಮಾತ್ರ ತಮ್ಮ ವಿದ್ಯಾರ್ಹತೆ ಹೇಳಿಕೊಂಡಿಲ್ಲ.

ವಯೋಮಾನ: 25ರಿಂದ 30 ವರ್ಷದೊಳಗೆ ಒಬ್ಬರು, 31ರಿಂದ 40 ವರ್ಷದೊಳಗಿನ 15 ಮಂದಿ, 41ರಿಂದ 50ರವರೆಗಿನ 54 ಮಂದಿ, 51ರಿಂದ 60ರವರೆಗಿನ 84 ಮಂದಿ , 61ರಿಂದ 70ರವರೆಗಿನ 56 ಮಂದಿ, 71ರಿಂದ 80 ವರ್ಷದವರೆಗಿನ 8 ಮಂದಿ ಹಾಗೂ 80 ಮೀರಿದ ಮೂವರು ಶಾಸಕರಾಗಿದ್ದಾರೆ.
ಶಾಸಕರಲ್ಲಿ ಅತಿ ಹಿರಿಯರು ಯಾರಿದ್ದಾರೆ? ಶಾಮನೂರು ಶಿವಶಂಕರಪ್ಪ (86), ಎಂ.ಸಿ.ಮನಗುಳಿ (82), ಸಿ.ಎಂ.ಉದಾಸಿ (81), ಎಂ.ವೈ.ಪಾಟೀಲ್ (77). ಡಿ.ಸಿ.ತಮ್ಮಣ್ಣ (75), ಬಿ.ಎಸ್.ಯಡಿಯೂರಪ್ಪ (75), ಎಸ್.ಎ.ರವೀಂದ್ರನಾಥ (72), ನಾಗನಗೌಡ (72), ಸಿ.ಎಂ.ನಿಂಬಣ್ಣವರ (71), ಕೆ.ಶ್ರೀನಿವಾಸಗೌಡ (71), ಆರ್.ವಿ.ದೇಶಪಾಂಡೆ (71).
ಅತಿ ಕಿರಿಯ ಶಾಸಕರು ಅನಿಲ್‌ಕುಮಾರ್ (ಕಾಂಗ್ರೆಸ್) 29 ವರ್ಷ, ದತ್ತಾತ್ರೇಯ (ಬಿಜೆಪಿ) 35 ವರ್ಷ, ಹರೀಶ್ ಪೂಂಜ (ಬಿಜೆಪಿ) ಅಶ್ವಿನ್‌ಕುಮಾರ್ (ಜೆಡಿಎಸ್) ಇಬ್ಬರೂ 36 ವರ್ಷ, ಪ್ರೀತಂಗೌಡ (ಬಿಜೆಪಿ), ಯತೀಂದ್ರ ಎಸ್. (ಕಾಂಗ್ರೆಸ್) ಇಬ್ಬರೂ 37 ವರ್ಷ, ಬಸವರಾಜ ಮತ್ತಿಮುದು (ಬಿಜೆಪಿ), ರೂಪಕಲಾ (ಕಾಂಗ್ರೆಸ್), ಬಸವರಾಜ ದಡೇಸುಗೂರ (ಬಿಜೆಪಿ) ಮೂವರೂ 38 ವರ್ಷ ವಯಸ್ಸಿನವರು.

 

Leave a Reply

Your email address will not be published.

Social Media Auto Publish Powered By : XYZScripts.com