ಪಾಕ್ ದಾಳಿಗೆ BSF ದಿಟ್ಟ ಉತ್ತರ : ‘ಫೈರಿಂಗ್ ನಿಲ್ಲಿಸಿ’ ಎಂದು ಕೇಳಿಕೊಂಡ ಪಾಕ್ ರೇಂಜರ್ಸ್

ಅಂತರಾಷ್ಟ್ರೀಯ ಗಡಿ ರೇಖೆಯ ಬಳಿ ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನು ಮುಂದುವರೆಸಿದ್ದು, ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದೆ. ಪಾಕ್ ದಾಳಿಗೆ ಭಾರತದ ಬಿಎಸ್ ಎಫ್ (ಬಾರ್ಡರ್ ಸೆಕ್ಯುರಿಟಿ ಫೋರ್ಸ್) ಪಡೆಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದಾರೆ. ಬಿಎಸ್ ಎಫ್ ಪಡೆಯ ದಿಟ್ಟ ದಾಳಿಗೆ ಬೆದರಿರುವ ಪಾಕ್ ರೇಂಜರ್ಸ್ ಗಡಿಯಲ್ಲಿ ‘ ದಯವಿಟ್ಟು ಗುಂಡಿನ ದಾಳಿ ‘ ನಿಲ್ಲಿಸಿ ವಿನಂತಿಸಿಕೊಂಡಿದೆ.

‘ ಜಮ್ಮು ಬಿಎಸ್ ಎಫ್ ಫಾರ್ಮೇಶನ್ ಕಚೇರಿಗೆ, ಪಾಕಿಸ್ತಾನ್ ರೇಂಜರ್ಸ್ ದೂರವಾಣಿ ಕರೆ ಮಾಡಿ ಫೈರಿಂಗ್ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ ‘ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಾಕಿಸ್ತಾನ ನಡೆಸಿದ ಫೈರಿಂಗ್ ನಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ ಬಿಎಸ್ ಎಫ್ ಪಡೆಯ ಇಬ್ಬರು ಯೋಧರು ಹಾಗೂ ಇಬ್ಬರು ಸಾಮಾನ್ಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದರು. ದಿಟ್ಟ ಉತ್ತರ ನೀಡಿರುವ ಬಿಎಸ್ ಎಫ್ ಯೋಧರು ಪಾಕ್ ರೇಂಜರ್ಸ್ ನ 4 ಸೈನಿಕರನ್ನು ಹೊಡೆದುರುಳಿಸಿದೆ. ಬಿಎಸ್ ಎಫ್, ಪಾಕಿಸ್ತಾನ ಸೇನೆಯ ಬಂಕರ್ ಹಾಗೂ ಪೋಸ್ಟ್ ಗಳ ಮೇಲೆ ಪ್ರಬಲ ಗುಂಡಿನ ದಾಳಿ ನಡೆಸಿ ನಾಶಪಡಿಸಿದೆ.

Leave a Reply

Your email address will not be published.