ABD ಲವ್ ಸ್ಟೋರಿ : ತಾಜ್ ಮಹಲ್ ಎದುರು ಪತ್ನಿಗೆ ಪ್ರಪೋಸ್ ಮಾಡಿದ್ದರಂತೆ ಡಿವಿಲಿಯರ್ಸ್..!

ರಾಯಲ್ ಚಾಲೆಂಜರ್ಸ್ ತಂಡದ ಸ್ಟಾರ್ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ತಮ್ಮ ಆಕರ್ಷಕ ಬ್ಯಾಟಿಂಗ್ ನಿಂದ ಜಗತ್ತಿನಾದ್ಯಂತ ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅದರಲ್ಲೂ ಆರ್ಸೀಬಿ ತಂಡವನ್ನು ಸಪೋರ್ಟ್ ಮಾಡುವವರಿಗೆ ಎಬಿಡಿ ಮೇಲೆ ವಿಶೇಷ ಅಭಿಮಾನ.

Image result for abd propose danielle

 

ಮೈದಾನದ ಎಲ್ಲ ಕೋನಗಳಲ್ಲಿಯೂ ಶಾಟ್ ಬಾರಿಸುವ ಕಾರಣದಿಂದ ‘ಮಿಸ್ಟರ್ 360 ಡಿಗ್ರೀ’ ಎಂದೇ ಖ್ಯಾತರಾಗಿರುವ ಎಬಿ ಡಿವಿಲಿಯರ್ಸ್ ತಮ್ಮ ಪ್ರೇಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. 2012 ರ ಐಪಿಎಲ್ ವೇಳೆ ಡಿವಿಲಿಯರ್ಸ್ ತಮ್ಮ ಪತ್ನಿ ಡೇನಿಯಲ್ ಗೆ ತಾಜ್ ಮಹಲ್ ಎದುರು ಪ್ರಪೋಸ್ ಮಾಡಿದ್ದನ್ನು ನೆನಪಿಸಿಕೊಂಡಿದ್ದಾರೆ.

Image result for abd propose danielle

 

ವಾಟ್ ದಿ ಡಕ್ ಎಂಬ ಷೋನಲ್ಲಿ ಮಾತನಾಡಿರುವ ಎಬಿ ಡಿವಿಲಿಯರ್ಸ್ ‘ ಅದು ನನ್ನ ಜೀವನದ ಸ್ಪೆಷಲ್ ಟೈಮ್ ಆಗಿತ್ತು. ಡೇನಿಯಲ್ ಗೆ ನಾನು ಸರ್ಪ್ರೈಸ್ ನೀಡಿದೆ, ನಾನು ಅವಳಿಗೆ ಪ್ರಪೋಸ್ ಮಾಡಲಿದ್ದೇನೆಂದು ತಿಳಿದಿರಲಿಲ್ಲ. ಪ್ರಪೋಸ್ ಮಾಡೋದಕ್ಕೆ ತಾಜ್ ಮಹಲ್ ಗಿಂತ ವಿಶೇಷವಾದ ಬೇರೆ ಸ್ಥಳವಿರಲಿಲ್ಲ.

Related image

‘ ಐಪಿಎಲ್ ಶುರುವಾಗೋಕೂ 2 ತಿಂಗಳು ಮುಂಚಿನಿಂದಲೂ ಇದಕ್ಕಾಗಿ ಪ್ಲಾನಿಂಗ್ ನಡೆಸಿದ್ದೆ. ರಿಂಗ್ ಕೂಡ ಖರೀದಿಸಿದ್ದೆ. ವಿಶೇಷ ಕ್ಷಣವನ್ನು ರೆಕಾರ್ಡ್ ಮಾಡೋದಕ್ಕೆ ಫೋಟೋಗ್ರಾಫರ್ ಗಳನ್ನು ಹಾಗೂ ವಿಡಿಯೋ ಗ್ರಾಫರ್ ಗಳನ್ನು ಕರೆದೊಯ್ದಿದ್ದೆ. ಆದರೆ ಡೇನಿಯಲ್ ಗೆ ಮಾತ್ರ ಅವರು ಸೆಕ್ಯುರಿಟಿ ಗಾರ್ಡ್ ಗಳೆಂದು ಹೇಳಿದ್ದೆ ‘ ಎಂದು ಪ್ರಪೋಸ್ ಮಾಡಿದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.

Related image

Leave a Reply

Your email address will not be published.

Social Media Auto Publish Powered By : XYZScripts.com