ಬಿ.ಸಿ ಪಾಟೀಲ್ ಗೆ ಗಾಳ ಹಾಕಲು ಹೋಗಿ ಬಲೆಗೆ ಬಿದ್ದ ಶ್ರೀರಾಮುಲು : ಆಡಿಯೋ ವೈರಲ್..!

ಹಿರೇ ಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಗೆ
ಗಾಳ ಹಾಕಿ ಸಿಕ್ಕಿ ಬಿದ್ದ ಯಡ್ಡಿ!
ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಗೆ ಸಚಿವ ಸ್ಥಾನದ ಆಮಿಷ ಒಡ್ಡಿ ಯಡಿಯೂರಪ್ಪ ಸಿಕ್ಕಿ ಬಿದ್ದಿದ್ದಾರೆ. ಅದರ ಆಡಿಯೋ ಸಂಭಾಷಣೆಯ ವಿವರ ಇಲ್ಲಿದೆ.

ಬಿಎಸ್ ವೈ ಆಪ್ತ (ಬಿ.ಸಿ. ಪಾಟೀಲರಿಗೆ): ಸಾರ್ ಒಂದುನಿಮಿಷ ಸಾಹೇಬರು ಮಾತನಾಡುತ್ತಾರೆ
ಬಿಎಸ್ ವೈ: ಹಲೋ…ಹಲೋ..
ಬಿ.ಸಿ.ಪಾಟೀಲ್: ಅಣ್ಣಾ ಕಂಗ್ರಾಜುಲೇಶನ್ … ಹೇಳಿ… ನಮಸ್ಕಾರ…
ಬಿಎಸ್ ವೈ: ಹಲೋ… ಹಲೋ…ಎಲ್ಲಿದ್ದೀಯಪ್ಪಾ…?
ಬಿ.ಸಿ. ಪಾಟೀಲ್: ಅಣ್ಣಾ ನಾವು ಕೊಚ್ಚಿನ್ ಗೆ ಹೋಗುತ್ತಿದ್ದೇವೆ…. ಕೊಚ್ಚಿನ್ ಗೆ ಹೋಗುತ್ತಿದ್ದೇವೆ…ಬಸ್ ನಲ್ಲಿದ್ದೇನೆ.
ಬಿಎಸ್ ವೈ: ಹೋಗಬಾರದಿತ್ತು..! ಬಾರಯ್ಯ ನೀನು…ನಿನಗೇನು ಹೆಲ್ಪ್ ಬೇಕೋ ಮಾಡುತ್ತೇನೆ! ಮಂತ್ರಿಯಾಗುವಂತೆ ಬಾ… ನಿನಗೇನು ಬೇಕೋ ಅದನ್ನು ಮಾಡುತ್ತೇನೆ.
ಬಿ.ಸಿ. ಪಾಟೀಲ್: ಆಯಿತು ಅಣ್ಣಾ…ನೀವು ಮೊದಲೇ ಒಂದೂ ಚೂರು ಹೇಳಿದ್ದರೇ…
ಬಿ.ಎಸ್. ವೈ: ಟೈಮ್ ಕರೆಕ್ಟಾಗಿ ತಾನೇ ಹೇಳಬೇಕು!
ಬಿ.ಸಿ. ಪಾಟೀಲ್: ಹೌದು…
ಬಿ.ಎಸ್. ವೈ: ನೀನು ಹೋಗಬೇಡ… ಬಂದು ಬಿಡು…
ಬಿ.ಸಿ. ಪಾಟೀಲ್: ಬಸ್ ನಲ್ಲಿ ಇದೀವಿ ಈಗ..
ಬಿ.ಎಸ್. ವೈ: ಮನೆವ್ರು… ಏನಾದರು ಒಂದು ಕಾರಣ ಹೇಳಿಕೊಂಡು ವಾಪಾಸ್ ಬಾ!
ಬಿ.ಸಿ. ಪಾಟೀಲ್: ನನ್ನ ಪೊಸಿಶನ್ ಏನ್ ಅಂತಾ?
ಬಿ.ಎಸ್. ವೈ: ಯು ವಿಲ್ ಬಿಕಂ ದ ಮಿನಿಸ್ಟರ್ ದಟ್ಸ್ ಆಲ್!
ಬಿ.ಸಿ. ಪಾಟೀಲ್: ಓ.ಕೆ. ಓ.ಕೆ. ಅಣ್ಣಾ… ನನ್ನ ಜತೆ ಇಬ್ಬರು ಮೂವರು ಇದ್ದಾರೆ!
ಬಿ.ಎಸ್. ವೈ: ನನ್ನ ಮೇಲೆ ವಿಶ್ವಾಸವಿದೆ ತಾನೇ…? ಕರೆದು ಕೊಂಡು ಬಾ…!
ಬಿ.ಸಿ. ಪಾಟೀಲ್ : ಖಂಡಿತ… ಖಂಡಿತ…!
ಬಿ.ಎಸ್. ವೈ: ಹಾಗಾದರೆ ಹೋಗ ಕೂಡದು ನೀನು ವಾಪಾಸ್ ಬಾ…!
ಬಿ.ಸಿ. ಪಾಟೀಲ್ : ಆಯ್ತಣ್ಣಾ…ಆಯ್ತಣ್ಣಾ…!
ಬಿ.ಎಸ್. ವೈ: ಒಂದು ಸಾರ್ತಿ ನೀನು ಕೊಚ್ಚಿನ್ ಗೆ ಹೋದರೆ ನೀನು ಸಿಗಲ್ಲ. ಅದು ಸಿಗದೇ ಇರುವ ವಿಷಯ
ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ…
ಬಿ.ಎಸ್. ವೈ: ಈಗೇನು ಮಾಡ್ತೀಯಾ… ಹೇಳು!
ಬಿ.ಸಿ. ಪಾಟೀಲ್: ತಾವು ಈಗ ಹೇಳಿದ್ದೀರಿ… ನಾನು ಐದು ನಿಮಿಷದಲ್ಲಿ ಹೇಳ್ತೀನೀ ಅಣ್ಣಾ…!
ಬಿ.ಎಸ್. ವೈ: ಶ್ರೀರಾಮುಲುಗೆ ಫೋನ್ ಮಾಡಿ ಹೇಳು…!
ಬಿ.ಸಿ. ಪಾಟೀಲ್: ಆಯ್ತಣ್ಣಾ… ಆಯ್ತಣ್ಣಾ….!!

ಶ್ರೀ ರಾಮುಲು, ಬಿಜೆಪಿ ಉಸ್ತುವಾರಿ ಮುರಳೀಧರ್ ರಾವ್ ಅವರಿಂದಲೂ
ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಗೆ ಆಫರ್ ಗಳು ಸುರಿಮಳೆ!!

ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್ ಅವರಿಗೆ ಶ್ರೀರಾಮುಲು ವಿಂದ ‘25’ ಆಫರ್. ಅವರೊಡನೆ ಬರುವ ಶಾಸಕರಿಗೆ 15 ಆಫರ್… ವಿವರ ಆಡಿಯೋ ಸಂಭಾಷಣೆಯ ವಿವರ ಇಲ್ಲಿದೆ…

ಶ್ರೀರಾಮುಲು: ನಾನು ರಾಮುಲು ಮಾತಡ್ತಾ ಇದ್ದೇನೆ..
ಬಿ.ಸಿ. ಪಾಟೀಲ್: ಹಾ… ನಮಸ್ಕಾರ ಹೇಳಿ ಅಣ್ಣಾ… ಬ್ರದರ್…
ಶ್ರೀರಾಮುಲು: ಏನು ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿ.ಸಿ.ಪಾಟೀಲ್: ‘ಸಾಹೇಬ್ರು’ ಹಂಗೆ ಹೇಳಿದ್ರು… ಆದರೆ ಅಮೌಂಟ್ ಬಗ್ಗೆ ಏನೂ ಹೇಳಲಿಲ್ಲ.
ಶ್ರೀರಾಮುಲು: ಹೇಳಿ ಏನು ಅಮೌಂಟ್ ಎಕ್ಸ್ ಪೆಕ್ಟ್ ಮಾಡ್ತೀರಾ?
ಬಿಸಿಪಾ: ನೀವೇ ಹೇಳಬೇಕು.
ಶ್ರೀರಾ: 25 ಅಂತ ಹೇಳಿದ್ದೆ.
ಬಿಸಿಪಾ: ನನ್ನ ಜತೆಯಲ್ಲಿ 3-4 ಜನರಿದ್ದಾರೆ… ಅವರಿಗೆ ಕ್ಲಾರಿಫೈ ಮಾಡಬೇಕು
ಶ್ರೀರಾ: ಅವರಿಗೆ 10ರಿಂದ 15 ಕೊಡ್ತೀವಿ
ಬಿಸಿಪಾ: ಅಣ್ಣಾ… ಅಣ್ಣಾ…ಅವರ ಪೊಸಿಷನ್ ಏನು?
ಶ್ರೀರಾ: ಅವರನ್ನೂ ಮಂತ್ರಿ ಮಾಡ್ತೀವಿ…
ಬಿಸಿಪಾ: ನನ್ನ ಕ್ಷೇತ್ರದಲ್ಲಿ ಯು.ಬಿ. ಬಣಕಾರ್ ಇದ್ದು, ಅವರು ತುಂಬಾ ಸ್ಟ್ರಾಂಗ್ ಇದ್ದಾರೆ… ಅವರು ಮತ್ತೊಂದು ಪಕ್ಷಕ್ಕೆ ಹೋಗಿ ನನ್ನ ವಿರುದ್ಧ ಚುನಾವಣೆಗೆ ನಿಂತರೆ…?
ಶ್ರೀರಾ: ಡೋಂಟ್ ವರಿ… ಎಲೆಕ್ಶನ್ ಇರುವುದಿಲ್ಲ…ನಾವು ನಮ್ಮದೇ ಸ್ಪೀಕರ್ ಎಲೆಕ್ಟ್ ಮಾಡ್ತೀವಿ. ಮೆಜಾರಿಟಿ ಪ್ರೂವ್ ಮಾಡ್ತೀವಿ. ಆಂಧ್ರ ಪ್ರದೇಶ್ ದಲ್ಲಿ ಏನಾಯ್ತು ಗೊತ್ತಲ್ಲಾ ಅಣ್ಣಾ… ಎಂಎಲ್ ಎ ಗಳನ್ನು ಅಮಾನತ್ತು ಮಾಡೋದಿಲ್ಲ. ನಮ್ಮದೇ.. ಸೆಂಟ್ರಲ್ ಗೌರ್ನಮೆಂಟ್ ಕೂಡ ಇದೆ. ನಮ್ಮದೇ ಎಲೆಕ್ಶನ್ – ಗಿಲೆಕ್ಶನ್ ಏನೂ ಇರಲ್ಲ. ನಾನು ಫೋನ್ ಈಗ ಮುರಳೀಧರ್ ರಾವ್ ಗೆ ಕೊಡ್ತೀನೀ… ಅವರಹತ್ತಿರ ಮಾತಾಡಿ…
ಬಿ.ಸಿ.ಪಾಟೀಲ್: ಅವೆಲ್ಲಾ ಏನೂ ಬೇಡಾ ಬ್ರದರ್…
ಶ್ರೀರಾ: ಇಲ್ಲಾ ಮಾತನಾಡಿ…
ಬಿ.ಸಿ.ಪಾಟೀಲ್: ಓ.ಕೆ. ಓ.ಕೆ. ಓ.ಕೆ. ಬ್ರದರ್
ಮುರಳಿಧರ ರಾವ್: ನೀವು ರಾಜೀನಾಮೆ ಕೊಡುವ ಪ್ರಶ್ನೆಯೇ ಬರುವುದಿಲ್ಲ…ನೀವು ಎಲೆಕ್ಶನ್ ಗೆ ಹೋಗುವ ಅಗತ್ಯವೇ ಬಾರದು
ಬಿಸಿಪಾ: ನನ್ನ ಜತೆ 3ರಿಂದ ನಾಲ್ಕು ಶಾಸಕರಿದ್ದು, ಅವರ ಪರವಾಗಿ ನಾನೇ ಕೇಳಬೇಕು… ನೀವು ಒಂದು ಫಿಗರ್ ಹೇಳಿ…
(ರಾಮುಲು ಮಧ್ಯಪ್ರವೇಶ)
ಶ್ರೀರಾ: ಪಾಟೀಲ್ ಸಾಹೇಬರೆ ನಾನು ಈಗಾಗಲೇ 15 ಹೇಳಿದ್ದೇನೆ. ಇವರ ಬಳಿ ನೀವು ಫಿಗರ್ ಕೇಳಬೇಡಿ
ಮುರಳಿಧರರಾವ್: ನಾವು ರೆಡಿ ಇದ್ದೇವೆ. ಯಾರಿಗೂ ಎಲೆಕ್ಶನ್ ಇಲ್ಲ…ಎಲ್ಲಾ ಸ್ಪೀಕರ್ ಗೆ ಬಿಟ್ಟಿದ್ದು… ಎಲ್ಲ ರಾಜ್ಯಗಳಲ್ಲೂ ಇದೇ same. ನಾವು ನಿಮ್ಮೊಂದಿಗೆ ಎಂದಿಗೂ ಇದ್ದೇವೆ. ಇದು ನನ್ನ ಮಾತು… ಆಂಧ್ರ ತೆಲಂಗಾಣದಲ್ಲೂ ಹೀಗೆ ಆಗಿತ್ತು…
ಬಿಸಿಪಾ: ಸಾರ್ ನಾನು ಇಲ್ಲೂ ಮಿನಿಸ್ಟರ್ ಆಗ್ತೀನೀ ಸಾರ್…
ಮುರಳೀಧರ್ ರಾವ್: ಸಾರ್… ನೂರಾ ನಾಲ್ಕೇ ಸ್ಟೇಬಲ್ ಆಗಿಲ್ಲ ಅಂದರೆ… 38 ಹೇಗೆ ಸ್ಟೇಬಲ್ ಆಗುತ್ತದೆ.
ಬಿಸಿಪಾ: ಯೆಸ್ ಸಾರ್. ಯೆಸ್ ಸಾರ್…!!
(ದೂರವಾಣಿ ಸಂಭಾಷಣೆ ಮುಕ್ತಾಯ! ಅದರೊಂದಿಗೆ ಮುರಳೀಧರ್ ರಾವ್ ಕೂಡ ಸಿಕ್ಕಿ ಬಿದ್ದ)

Leave a Reply

Your email address will not be published.

Social Media Auto Publish Powered By : XYZScripts.com