55 ಘಂಟೆಗಳ ಸರ್ಕಾರ ಪತನದ ನಂತರ ಪ್ರಧಾನಿ ಮೋದಿ, ಶಾ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ ..

ಇಂದು ರಾಜ್ಯಕ್ಕೆ ಮತ್ತು ದೇಶಕ್ಕೆ ಐತಿಹಾಸಿಕ ದಿನ, ಇದು ಕಾನೂನಿಗೆ ಸಂದ ಜಯ, ಅದಕ್ಕಾಗಿಯೆ ಬಿಎಸ್ ಯಡಿಯೂರಪ್ಪ ಬಹುಮತ ಸಾಭೀತಿಗೆ ಒಪ್ಪಿಕೊಂಡು ಇದೀಗ ಪಲಾಯನ ಮಾಡಿದ್ದಾರೆ   ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.


ಬಹುಮತ ಸಿಗದ ಬಗ್ಗೆ ಖಚಿತವಾದ ಹಿನ್ನೆಲೆ ವಿಧಾನಸಭೆ ಕಲಾಪದಲ್ಲಿ ಬಿಎಸ್ ಯಡಿಯೂರಪ್ಪ ರಾಜೀನಾಮೆ ಘೋಷಿಸಿ ಹೊರ ನಡೆದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಬಹುಮತ ಸಾಭೀತುಪಡಿಸುತ್ತೇನೆ ಎಂದು ತಿಳಿಸಿ ಇದೀಗ ಪಲಾಯಾನ ಮಾಡಿದ್ದಾರೆ. ಇದೊಂದು ಸಂವಿಧಾನಕ್ಕೆ ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದು ಹರ್ಷ ವ್ಯಕ್ತಪಡಿಸಿದರು.


ರಾಜ್ಯಪಾಲರ ವಿರುದ್ದ ಹರಿಹಾಯ್ದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯಪಾಲರು ಬಿಜೆಪಿ ಪರ ನಿಂತಿದ್ದಾರೆ. ಕೇಂದ್ರದ ಬಾಲಬಡುಕರಂತೆ ಕೆಲಸ ಮಾಡಿದ್ದಾರೆ. ಬಿಜೆಪಿಗೆ ಬಹುಮತವಿಲ್ಲದಿದ್ದರೂ ಅಧಿಕಾರ ರಚನೆಗೆ ಅವಕಾಶ ನೀಡಿದ್ದರು. ಬಿಎಸ್ ಯಡಿಯೂರಪ್ಪ ಒಂದು ವಾರ ಸಮಯಾವಕಾಶ ಕೇಳಿದರೇ ಅವರು 15 ದಿನಗಳ ಕಾಲ ಕಾಲಾವಕಾಶ ನೀಡಿದ್ದರು. ಇದರಿಂದ ಕುದುರೆ ವ್ಯಾಪಾರಕ್ಕೆ ಕುಮ್ಮಕು ನೀಡಿದ್ದರು ಎಂದು ಕಿಡಿಕಾರಿದರು.

ಪ್ರಧಾನಿ ಮೋದಿ ಮತ್ತು ಶಾ  ಅವರನ್ನು ಹುಟ್ಲರ್ ಮತ್ತು ಗೋಬೆಲ್ಸ್ ಗೆ ಹೊಲಿಸಿದ ಮಾಜಿ ಮುಖ್ಯಮಂತ್ತಿ ಸಿದ್ದರಾಮಯ್ಯ ಕೇಂದ್ರದ ವಿರುದ್ದವೂ ವಾಗ್ದಾಳಿ ನಡೆಸಿದರು, ಕೇಂದ್ರ ಸರ್ಕಾರದ ಸಂಸ್ಥೆಗಳನ್ನ ದುರುಪಯೋಗವನ್ನ ಮಾಡಿಕೊಂಡಿದೆ. ಹಾಗೆಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಐಟಿ ಮತ್ತು ಇಡಿ ಚೂ ಬಿಡುವ ಬೆದರಿಕೆ ಹಾಕಿ ತಮ್ಮತ್ತ ಸೆಳೆಯಲು ಯತ್ನಿಸಿದರು. ಆದರೆ ನಮ್ಮ ಶಾಸಕರು ಯಾವುದೇ ಆಮಿಷಕ್ಕೆ ಒಳಗಾಗದೇ ತಮ್ಮ ಪಕ್ಷದ ನಿಷ್ಠೆ ತೋರಿದರು. ಹೀಗಾಗಿ ಜೆಡಿಎಸ್ ಕಾಂಗ್ರೆಸ್ ಶಾಸಕರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ತಿಳಿಸಿದರು.

Leave a Reply

Your email address will not be published.