ರಾಷ್ಟ್ರಗೀತೆ ಮಧ್ಯೆ ಹೊರ ನಡೆದ BSY, ಪ್ರಜಾಪ್ರಭುತ್ವಕ್ಕೆ ಸಂದ ಜಯ ಎಂದ ರಾಹುಲ್ ಗಾಂಧಿ..

ರಾಷ್ಟ್ರಗೀತೆ ನುಡಿಸುತ್ತಿರುವಾಗ ಬಿಎಸ್ ಯಡಿಯೂಪ್ಪ  ಸದನದಿಂದ ಹೊರನಡೆದಿದ್ದು ಅವರ ನಡತೆಯನ್ನು ತೋಎಇಸುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ..ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡೇ ದಿನಕ್ಕೆ ಬಿಜೆಪಿ ಸರ್ಕಾರ ಉರುಳಿದ್ದು ಈ ಮೂಲಕ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಜಯ ಸಿಕ್ಕಂತಾಗಿದೆ ಎಂದ  ಅಧ್ಯಕ್ಷ ರಾಹುಲ್ ಗಾಂಧಿ, ಇದು ಕರ್ನಾಟಕದಲ್ಲಿ ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ ಎಂದು ಬಣ್ಣಿಸಿದರು..


ನವದೆಹಲಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ ಯಡಿಯೂಪ್ಪ ಬಹುಮತ ಸಾಭೀತು ಪಡಿಸಲು ಆಗಲಿಲ್ಲ. ಹೀಗಾಗಿ ಮೂರು ದಿನಗಳಲ್ಲೇ ಸರ್ಕಾರ ಬಿದ್ದಿದೆ. ರಾಷ್ಟ್ರಗೀತೆಗೂ ಮೊದಲೇ ಬಿಎಸ್ ಯಡಿಯೂರಪ್ಪ ಸದನದಿಂದ ಹೊರನಡೆದಿದ್ದು ಮುಖ್ಯಮಂತ್ರಿಯಾದವರಿಗೆ ಶೋಭೆತರುವಂತದಲ್ಲ ವೆಂದರು.
ಹಾಗೆಯೇ ಕೇಂದ್ರ ಸರ್ಕಾರ ಸಾಂವಿಧಾನಿಕ ಸಂಸ್ಥೆಗಳನ್ನ ದುರುಪಯೋಗ ಪಡಿಸಿಕೊಳ್ಳಲು ಮುಂದಾದರು. ನಮ್ಮ ಶಾಸಕರನ್ನ ಖರೀದಿಸುವ ಯತ್ನ ನಡಿಸಿದರು. ಈ ಮೂಲಕ ಪ್ರಜಾಪ್ರಭುತ್ವ ಗೌರವ ಕಳೆಯಲು ಮುಂದಾಗಿದ್ದರು. ಆದರೆ ಅದು ನಡೆಯಲಿಲ್ಲ. ವಿಪಕ್ಷದವರೆಲ್ಲರೂ ಸೇರಿ ಪ್ರಧಾನಿ ಮೋದಿ ಅವರನ್ನ ಸೋಲಿಸಿದ್ದೇವೆ ಎಂದು ರಾಹುಲ್ ಗಾಂಧಿ ತಿಳಿಸಿದರು.

ಪ್ರಧಾನಿ ಮೋದಿ ಭ್ರಷ್ಠಾಚಾರವನ್ನ ಉತ್ತೇಜಿಸಿದ್ದಾರೆ. ಬಿಜೆಪಿಯಿಂದ ಪ್ರಜಾಪ್ರಭುತ್ವದ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕೇಂದ್ರದ ಸಂವಿಧಾನಿಕ ಸಂಸ್ಥೆಗಳನ್ನ ದುರುಪಯೋಗಪಡಿಸಿಕೊಳ್ಳಲು ಮುಂದಾಗಿದ್ದಾರೆ. ಆದರೆ ನಾವು ಜನರ ದನಿಯನ್ನ ರಕ್ಷಿಸುತ್ತೇವೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com