ಅಮಿತ್ ಷಾ, ನರೇಂದ್ರ ಮೋದಿ ಮತ್ತು ಬಿಜೆಪಿ ಯಡಿಯುರಪ್ಪರವರನ್ನು ಬಲಿಕೊಟ್ಟರೆ….!

ಹಿರಿಯ ರಾಜಕಾರಣಿ   ಕರ್ನಾಟಕದಲ್ಲಿ ಬಿಜೆಪಿ ಕಟ್ಟಿಬೆಳೆಸಿದ  ಯಡಿಯುರಪ್ಪನವರನ್ನು ಟೆಸ್ಟ್ ರೈಡ್ ಗೆ  ಬಳಸಿಕೊಂಡು  ಈ ರೀತಿ ಬಲಿಪಶುಮಾಡಬೇಕೆಂದು    ಪೂರ್ವಯೊಜಿತ ತಾಯರಿ ನಡೆದಿತ್ತೇನೊ ಅನಿಸುತ್ತಿದೆ,   2019ರ ಲೋಕಸಭಾ ಚುನಾವಣೆಗೆ  ಲಿಂಗಾಯತ ಮತಗಳನ್ನು  ತಮ್ಮೆಡೆಗೆ ಒಲಿಸಿಕೊಳ್ಳುವ ಒಂದೆ  ಮೂಲ ಉದ್ದೇಶಕ್ಕೆ  ಯಡಿಯುರಪ್ಪನವರನ್ನು ಮೂರುದಿನದ  ಮುಖ್ಯಮಂತ್ರಿ ಮಾಡಿ  ಬಹುಮತ ಪರಿಕ್ಷಿಸುವ ಮೊದಲೆ ರಾಜಿನಾಮೆ ನೀಡಿಸಿದರು ಹೀಗೆ ಆಗುತ್ರೆ ಎಂಬುದು ಜನ ಸಾಮಾನ್ಯರಿಗೆ ತಿಳಿದಿರುವಾಗ ದೇಶ ಆಳುವ ನಾಯಕರಿಗೆ ತಿಳಿದಿರಲಿಲ್ಲವೆ ? ಮೇಲಿನ ಅಂಶಗಳಿಗೆ ಗಳಿಗೆ  ಪೂರಕವಾದ ಸಂಗತಿಗಳು.
1).  ಬಿಜೆಪಿ  ಗಳಿಸಿದ್ದು 104 ಸೀಟು  ಯಾವುದೆ ಪಕ್ಷ ಅಥವಾ ಸ್ವತಂತ್ರವಾಗಿ ಗೆದ್ದವರು ಬೆಂಬಲ ನೀಡಿರಲಿಲ್ಲ, ಆದರು   ಸರ್ಕಾರ ರಚಿಸಲು ಯಡಿಯುರಪ್ಪರವರಿಗೆ  ಪಕ್ಷ ಸೂಚಿಸಿತು.
2).ಪಲಿತಾಂಶ ಬಂದೊಡನೆಯೆ ಕಾಂಗ್ರೆಸ್ ಬೆಷರತ್ತಾಗಿ ಜೆಡಿಎಸ್ ಬೆಂಬಲಿಸಿತು  ಎರಡು ಪಕ್ಷಗಳಿಂದ  ಒಟ್ಟು 116 + ಪಕ್ಷೇತರರು 2  ಒಂದೆಡೆ ಇರುವುದು ತಿಳಿದಾಗಿಯು   ಜೆಡಿಎಸ್ ಗವರ್ನರ್  ಬೇಟಿಗೆ ಅನುಮತಿ ಕೇಳುತ್ತಿದ್ದಂತೆಯೆ  ಬಿಜೆಪಿಯಿಂದ ಸರ್ಕಾರ ರಚಿಸುವ ಹಕ್ಕೊತ್ತಾಯ ಸಲ್ಲಿಸಿದ್ದು,
3).  ಚುನಾವಣೆ ನಂತರ  ಪಕ್ಷ ಸರ್ಕಾರ ರಚನೆಗೆ  ಹಕ್ಕೊತ್ತಾಯ ಸಲ್ಲಿಸಿದರು ಅಮಿತ್ ಷಾ   ಕರ್ನಾಟಕಕ್ಕೆ  ಬರಲಿಲ್ಲವೆಂದರೆ ಅವರಿಗೆ ಸ್ಪಷ್ಟವಾಗಿ ಗೊತ್ತಿತ್ತು ಬಹುಮತ ಸಾದ್ಯವಿಲ್ಲವೆಂದು.
3). ಈಶ್ವರಪ್ಪ ಕೈಗೆ ಸಿಕ್ಕ  ರಾಣೆಬೆನ್ನೂರು ಶಾಸಕ ರಮೇಶರವರನ್ನು  ಕೈಚೆಲ್ಲಿ,   ಯಡ್ಡಿಯರಪ್ಪರವರ ಪ್ರಮಾಣವಚನ ಸ್ವಿಕಾರ ಮುಗಿದ ಕೂಡಲೆ ಶಿವಮೊಗ್ಗಕ್ಕೆ  ವಾಪಾಸ್ಸು ಬಂದಿದ್ದು.
4). ಪ್ರಮಾಣವಚನ ಸ್ವೀಕಾರ ಸಮಯದಲ್ಲಿ  ಮೋದಿ ಅಮಿತ್ ಷಾ ಬರಲೆ ಇಲ್ಲಾ  ಕಾರಣ  ಹೇಗಿದ್ದರು  ಸರ್ಕಾರ ನಡೆಸಲು ಆಗದು  ಇದರಿಂದ ನಮ್ಮ ಇಮೇಜಿಗೆ ಡ್ಯಾಮೇಜ್ ಎಂದು,  ಒಟ್ಟಿನಲ್ಲಿ  ರಾಜ್ಯದ  ದೊಡ್ಡ  ಜನಾಂಗಕ್ಕೆ  ಅವಕಾಶ ಕೊಟ್ಟ ಕ್ರೆಡಿಟ್ ಬೇಕು  ಆದರೆ ಡ್ಯಾಮೇಜ್  ಯಡಿಯುರಪ್ಪನವರಿಗೆ ಮಾತ್ರ ಆಗಬೇಕು. ಮತ್ತು ಮುಂದೆ ಯಡಿಯುರಪ್ಪ ಇನ್ಬೇನನ್ನು ಕೇಳಬಾರದು.
5).ಯಡಿಯುರಪ್ಪ ಮೇಲೆ ಅಷ್ಟೊಂದು ವಿಶ್ವಾಸ ವಿದ್ದಿದ್ದರೆ  MP ಆಗಿದ್ದ ಇವರಿಗೆ  ಒಂದು ಮಂತ್ರಿಗಿರಿಯನ್ನು ಕೊಡಲಿಲ್ಲವೇಕೆ?  ದಕ್ಷಿಣ ಭಾರತದಲ್ಲಿ ಮೊದಲಬಾರಿ ಬಿಜೆಪಿ ಅಧಿಕಾರಕ್ಕೆ ತಂದ ಯಡಿಯುರಪ್ಪ  ಸ್ಮೃತಿ ಇರಾನಿಗಿಂತ ಕೇವಲವೆ?
6). ಕರ್ನಾಟಕದಲ್ಲಿ  ಪೂರ್ಣಪ್ರಮಾಣದ ಬಹುಮತ ಬಂದಿದ್ದರೆ  ಆಗಲು ಯಡಿಯುರಪ್ಪರವರನ್ನೆ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡುತ್ತಿದ್ದರೆ ಎಂಬುದು  ಹಲವರ ಪ್ರಶ್ನೆ
  ಒಟ್ಟಿನಲ್ಲಿ   ಬಿಜೆಪಿ ಹಿರಿಯ ರಾಜಕರಣಿಯೊಬ್ಬರ  ರಾಜಕೀಯ ಭವಿಷ್ಯಕ್ಕೆ ತಿಲಾಂಜಲಿ ಹಾಡುವ ಮೂಲಕವೇ  ಮುಂದಿನ ಚುನಾವಣೆಗೆ  ಬಲಿಷ್ಠ ಕೋಮಿನ ಬೆಂಬಲ ಪಡೆಯುವ ಪ್ರಯತ್ನಮಾಡಿದೆ.
ಕೆ.ಪಿ.ಶ್ರೀಪಾಲ್ ಅವರ ವಾಲ್ ನಿಂದ….

Leave a Reply

Your email address will not be published.