IPL : ಜೈಪುರದಲ್ಲಿಂದು RR vs RCB ಹೈ ವೋಲ್ಟೇಜ್ ಪಂದ್ಯ : ಪ್ಲೇ ಆಫ್ ಕನಸಿಗೆ ಜಯವೊಂದೇ ದಾರಿ

ಜೈಪುರದ ಸವಾಯಿ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಐಪಿಎಲ್ ಟಿ-20 ಪಂದ್ಯ ನಡೆಯಲಿದೆ. ಪ್ಲೇ ಆಫ್ ನಲ್ಲಿ ಸ್ಥಾನ ಗಿಟ್ಟಿಸಲು ಉಭಯ ತಂಡಗಳಿಗೂ ಜಯ ಅನಿವಾರ್ಯವಾಗಿದೆ.

ತವರಿನಂಗಳದಲ್ಲಿ ನಡೆದ ಕಳೆದ ಪಂದ್ಯದಲ್ಲಿ ಬಲಿಷ್ಠ ಸನ್ ರೈಸರ್ಸ್ ತಂಡವನ್ನು 14 ರನ್ ಗಳಿಂದ ಮಣಿಸಿ ವಿಶ್ವಾಸದಲ್ಲಿರುವ ಆರ್ಸೀಬಿ, ರಾಯಲ್ಸ್ ವಿರುದ್ಧ ಗೆದ್ದು ಪ್ಲೇ ಆಫ್ ಹಂತಕ್ಕೆ ಕಾಲಿಡುವ ತವಕದಲ್ಲಿದೆ.

ಆರ್ಸೀಬಿಯ ಪ್ರಮುಖ ಬ್ಯಾಟ್ಸಮನ್ ಗಳಾದ ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ, ಮೋಯಿನ್ ಅಲಿ ಅವರ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ವೇಗಿಗಳಾದ ಟಿಮ್ ಸೌದಿ, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್ ಹಾಗೂ ಲೆಗ್ ಸ್ಪಿನ್ನರ್ ಚಹಲ್ ರಾಯಲ್ಸ್ ಬ್ಯಾಟ್ಸಮನ್ ಗಳನ್ನು ಕಟ್ಟಿಹಾಕಬೇಕಿದೆ.

13 ಪಂದ್ಯಗಳನ್ನಾಡಿ 12 ಅಂಕ ಪಡೆದಿರುವ ಆರ್ಸೀಬಿ 5 ಸ್ಥಾನದಲ್ಲಿದ್ದರೆ, 13 ಪಂದ್ಯಗಳನ್ನಾಡಿ 12 ಅಂಕಗಳನ್ನು ಪಡೆದಿರುವ ರಾಜಸ್ಥಾನ್ ರಾಯಲ್ಸ್ 6ನೇ ಸ್ಥಾನದಲ್ಲಿದೆ. ಆರ್ಸೀಬಿಯ ನೆಟ್ ರನ್ ರೇಟ್ ಉತ್ತಮವಾಗಿರುವುದರಿಂದ ಪಾಯಿಂಟ್ಸ್ ಟೇಬಲ್ ನಲ್ಲಿ ರಾಯಲ್ಸ್ ಗಿಂತ ಮೇಲಿನ ಸ್ಥಾನದಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com