3ನೇ ಬಾರಿ CM ಆಗಿ 3ರೆ ದಿನಕ್ಕೆ ರಾಜೀನಾಮೆ ನೀಡಿದ BSY ಭಾಷಣದ ಸಂಪೂರ್ಣ ವಿವರ..

ಈ ಮೊದಲುವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ವೇಳೆ ಬಹುಮತ ಸಾಬೀತು ಪಡಿಸುವಲ್ಲಿ ಬಿ.ಎಸ್ ಯಡಿಯೂರಪ್ಪ ವಿಫಲರಾಗಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ಯಡಿಯೂರಪ್ಪ, ಶಾಸಕರಿಂದ ವಿಶ್ವಾಸಮತವನ್ನೂ ಕೂಡ ಯಾಚಿಸದೇ ನೇರವಾಗಿ ರಾಜೀನಾಮೆ ನೀಡಿ ಹೊರನಡೆದಿದ್ದಾರೆ. ಶನಿವಾರ ಸಾಯಂಕಾಲ 4 ಗಂಟೆಗೆ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಯಡಿಯೂರಪ್ಪನವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿತ್ತು.

ಈ  ಸಂದರ್ಭದಲ್ಲಿ  ಬಹುಮತ ಸಾಬೀತು ಪಡಿಸಲು ಪ್ರಸ್ತಾವನೆ ಸಲ್ಲಿಸಿ ಮಾತನಾಡಿದ ಯಡಿಯೂರಪ್ಪ  ಪರಿವರ್ತನಾ ಸಮಾವೇಶದಲ್ಲಿ ಸಿಕ್ಕಂತ ಬೆಂಬಲ ಮರೆಯಲು ಸಾಧ್ಯವಿಲ್ಲ, ಹಿಂದಿನ ಸರ್ಕಾರದ ವೈಪಲ್ಯ ಖಂಡಿಸಿ ಜನರು ನಮ್ಮಗೆ ಬೆಂಬಲ ನೀಡಿದರು ಎಂದು ಅಭಿಪ್ರಾಯಪಟ್ಟರು.  ಜನಾದೇಶ ಎರಡು ಪಕ್ಷಗಳಿಗೆ ವಿರುದ್ದವಾಗಿದೆ, ಅವರಾಪ್ಪನಾಣೆಗೂ ಮುಖ್ಯ ಮಂತ್ರಿಯಾಗಲ್ಕ ಎಂಬ ಹೇಳಿಕೆ ನೀಡಿರುವುದನ್ನು ರಾಜ್ಯದ ಜನ ಗಮನಿಸಿದ್ದಾರೆ ಎಂದ BSY ಆದರೆ ಈಗ ಅಪವಿತ್ರ ಮೈತ್ರಿಗೆ ಮುಂದಾಗಿದ್ದಾರೆ ಎಂದು ಕಟುಕಿದು.

ಈ ನಾಡಿನ ಜನರಿಗೆ ಬದುಕಿನ ಕೊನೆ ಉಸಿರುವವರೆಗೂ ರೈತನ ಹಿತ ರಕ್ಷಣೆಗಾಗಿ ಹೋರಾಟ ಮಾಡುತ್ತೆನೆ ಎಂದು ಭಾವುಕರಾದ ಯಡಯೂರಪ್ಪ , ಕಳೆದ ಐದು ವರ್ಷಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ ಅದರ ಮಧ್ತಯೂ  ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇನೆ ,ನನ್ನ ಜೀವವನ್ನು ರೈತರಿಗೆ ಮುಂಡಾಪಾಗಿ ಇಟ್ಟಿರುತ್ತೆನೆ ಎಂದರು…

ರೈತರ, ನೇಕಾರರ ಸಾಲ ಮನ್ನಾ ಮಾಡಬೇಕು, ರೈತರಿಗೆ ೫ ಸಾವಿರ ಕೋಟಿ ಆವರ್ತನಿಧಿ ಸ್ಥಾಪಸಬೇಕು ಅಂದುಕೊಂಡಿದ್ದೆ, ಶಾಶ್ವತ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು, ಕೇಂದ್ರದಿಂದ ಹೆಚ್ಚುವರಿ ಅನುದಾನ ತಂದು ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಬೇಕು ಎಂಬ ಉದ್ದೇಶ ಹೊಂದಿದ್ದೆ, ಎಂದ BJP ನಾಯಕ ತಮ್ಮ ಜೀವನದಲ್ಲಿ ಅನೇಕ ಬಾರಿ ಅಗ್ನಿ ಪರೀಕ್ಷೆ ಎದುರಿಸಿದ್ದನೆ, ರಾಜ್ಯದ ಜನ ೧೧೩ ಸೀಟು ಕೊಟ್ಟಿದ್ದರೆ ರಾಜ್ಯವನ್ನು ಬದಲಾಯಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.

ಮುಂಬರುವ  ಲೋಕಸಭಾ ಚುನಾವಣೆಯಲ್ಲಿ ೨೮ ಕ್ಕೂ ಹೆಚ್ಚು ಸ್ಥಾನವನ್ನು ‌ಗೆಲ್ಲಿಸಲು ಪ್ರಯತ್ನಿಸಲಾಗುವುದು, ಶಾಸಕರನ್ನು ಕೂಡಿ ಹಾಕಿ,ಕುಟುಂಬದವರಿಗೆ ಸಿಗದೇ ಹಾಗೇ ಮಾಡಿದ ಕುಮಾರಸ್ವಾಮಿಯವರೇ ನನ್ನ ಕೊನೆಯ ಜೀವ ಇರುವವರೆಗೂ ಹೋರಾಟ ಮಾಡುತ್ತೆನೆ ಎಂದ ಯಡೂಯರಪ್ಪ Operation ಕಮಲ ಮಾಎಲು ಪ್ರಯತ್ನಿಸಿದ್ದು ನಿಜ ಎಂದ ಅವರು  ವಿಶ್ವಾಸ ಮತಯಾಚನೆಗೆ ಮುಂದಾಗದೇ ನನ್ನ ಸ್ಥಾನಕ್ಕೆ ರಾಜ್ಯಪಾಲರಿಗೆ ರಾಜೀನಾಮೆ ನೀಡುತ್ತಿದ್ದಿನೆ ಎಂದು ಸದನದಿಂದ ಹೊರನಡೆದರು..

2 thoughts on “3ನೇ ಬಾರಿ CM ಆಗಿ 3ರೆ ದಿನಕ್ಕೆ ರಾಜೀನಾಮೆ ನೀಡಿದ BSY ಭಾಷಣದ ಸಂಪೂರ್ಣ ವಿವರ..

Leave a Reply

Your email address will not be published.

Social Media Auto Publish Powered By : XYZScripts.com