Big breaking : ಸಿದ್ದವಾಗಿದೆ CM BS ಯಡಿಯೂರಪ್ಪನವರ 60 ನಿಮಿಷದ ವಿದಾಯದ ಭಾಷಣ…!

ಕೇವಲ ಎರಡು ದಿನಗಳ ಮುಖ್ಯಮಂತ್ರಿಯಾಗಿರುವ ಅವರು, ರಾಜೀನಾಮೆ ನೀಡಿ ಇತಿಹಾಸದ ಪುಟಗಳನ್ನು ಸೇರಲು ಸಿದ್ಧರಾಗಿದ್ದಾರೆ. ಇದಕ್ಕೂ ಮೊದಲು 13 ಪುಟಗಳ ಭಾವನಾತ್ಮಕ ಭಾಷಣ ಮಾಡಲಿದ್ದಾರೆ ಎಂದು ಕೂಡ ತಿಳಿದುಬಂದಿದೆ. ಸಿದ್ದರಾಮಯ್ಯ ಟ್ವೀಟ್ ಕರ್ನಾಟಕದ ಅಧಿಕಾರದ ಚುಕ್ಕಾಣಿಯನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಗೆ ಬಿಡಲು ಕಷ್ಟಕರ ನಿರ್ಧಾರ ತೆಗೆದುಕೊಂಡಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಇದು ನಿಜವೇ ಆದರೆ, ಯಡಿಯೂರಪ್ಪನವರು ಸಂಜೆ 4 ಗಂಟೆಗೆ ಬಹುಮತ ಸಾಬೀತುಪಡಿಸುವ ಮೊದಲೇ ರಾಜೀನಾಮೆ ಸಲ್ಲಿಸಲಿದ್ದಾರೆ. ಹೀಗಾದರೆ, ಎಚ್ ಡಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಖಚಿತವಾಗಿದೆ..

ಬಹುಮತ ಸಾಭೀತು ಪಡಿಸಲು ಅಪರೇಷನ್ ಕಮಲಕ್ಕೆ ಮುಂದಾಗಿರುವ ಬಿಜೆಪಿಯ ನಾಯಕರು ಹಲವು ಕಾಂಗ್ರೆಸ್ ಶಾಸಕರಿಗೆ ಕರೆ ಮಾಡಿ ಆಫರ್ ಕೊಟ್ಟಿರುವ ಬಗ್ಗೆ ಕಾಂಗ್ರೆಸ್ ನಾಯಕರು ಆಡಿಯೋ ಬಿಡುಗಡೆ ಮಾಡಿದ್ದಾರೆ. ಕೈ ನಾಯಕ ಉಗ್ರಪ್ಪ ಕಮಲ ಪಾಳುಯದ ಜನಾರ್ಧನ ರೆಡ್ಡಿ, ಸಿಎಂ ಬಿಎಸ್ ಯಡಿಯೂರಪ್ಪ ಮಗ ವಿಜೀಂಯದ್ರ ಮತ್ತು ಪುಟ್ಟಸ್ವಾಮಿ ಆಡಿಯೋ ಬಿಡುಗಡೆ ಮಾಡಿ BJP ಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರು…

ಇನ್ನು ನೂತನ ಸಿಎಂ ಆಗಿ ಅಧಿಕಾರ ಸ್ವೀಕರಿಸಿರುವ ಬಿಎಸ್ ಯಡಿಯೂರಪ್ಪ ಅವರೇ ಹಿರೆಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ ಪಾಟೀಲ್ ಗೆ ಕರೆ ಮಾಡಿ ಆಮಿಷ ಒಡ್ಡಿದ್ದು, ಇದೀಗ ಆಡಿಯೋ ಬಿಡುಗಡೆಯಾಗಿದೆ. ಇದು ಬಿಡುಗಡೆ ಆದ ನಂತರ ಸಿಎಂ ಬಿಎಸ್ ಯಡಿಯೂರಪ್ಪ ಬಹುಮತ ಸಾಭೀತು ಪಡಿಸಲು ಸಾಧ್ಯವಿಲ್ಲವೆಂದು ಅರಿತು ರಾಜೀನಾಮೆಗೆ ಮುಂದಾಗದ್ದಾರೆ…

ಮೌನಕ್ಕೆ ಶರಣಾಗಿರುವ ಯಡಿಯೂರಪ್ಪನವರ ಮುಖವೇ ಹಲವಾರು ಕಥೆಗಳನ್ನು ಹೇಳುತ್ತಿದೆ. ಆದರೆ, ಮತ್ತೊಂದು ಬದಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಸದನದಲ್ಲಿ ವಿಜಯೋತ್ಸಾಹದ ಮೂಡ್ ನಲ್ಲಿ ಇದ್ದಾರೆ. ಶಾಸಕರು ಪ್ರಮಾಣ ವಚನ ಸ್ವೀಕರಿಸುತ್ತಿದ್ದ ಸಮಯದಲ್ಲಿಯೇ ಯಡಿಯೂರಪ್ಪನವರು ಸದನದಿಂದ ಹೊರನಡೆದಿದ್ದಾರೆ.
ರಾಜ್ಯದ ಮತದಾರರು ಉಳಿದೆರಡು ಪಕ್ಷಗಳನ್ನು ತಿರಸ್ಕರಿಸಿದರೂ, ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡಿರುವ ಮೈತ್ರಿಯಿಂದಾಗಿ ಸರಕಾರ ರಚಿಸಲು ಸಾಧ್ಯವಾಗಲಿಲ್ಲ ಎಂಬ ದುಃಖ ಯಡಿಯೂರಪ್ಪನವರ ಮುಖದಲ್ಲಿ ಮಡುಗಟ್ಟಿದೆ. ಬಿಜೆಪಿ 104, ಕಾಂಗ್ರೆಸ್ 78 ಮತ್ತು ಜೆಡಿಎಸ್ 37 ಸ್ಥಾನಗಳನ್ನು ಗೆದ್ದಿದ್ದರೆ, ಎರಡು ಪಕ್ಷೇತರರ ಪಾಲಾಗಿವೆ. ಜಯನಗರ ಮತ್ತು ರಾಜರಾಜೇಶ್ವರಿ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದ್ದರೆ, ಕುಮಾರಸ್ವಾಮಿಯವರು ಎರಡು ಕ್ಷೇತ್ರಗಳಿಂದಲೂ ಗೆದ್ದಿದ್ದರಿಂದ ಒಂದಕ್ಕೆ ಮತ್ತೆ ಚುನಾವಣೆ ನಡೆಯಬೇಕು.

ಏನೇ ಪ್ರಯತ್ನಗಳನ್ನು ಮಾಡಿದರೂ ಬಹುಮತಕ್ಕೆ ಬೇಕಾಗಿರುವ ಸಂಖ್ಯೆ ಒಗ್ಗೂಡಿಸಲು ಸಾಧ್ಯವಾಗದ ಕಾರಣ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರಾ? ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿರುವ ಮಾಹಿತಿಯೇನೆಂದರೆ, ಇಲ್ಲಸಲ್ಲದ ‘ಕುದುರೆ ವ್ಯಾಪಾರ’ದ ಆರೋಪಗಳನ್ನು ಎದುರಿಸುವ ಬದಲು,  ರಾಜೀನಾಮೆ ನೀಡಿಲು ಸಿದ್ದರಾಗಿದ್ದಾರೆ.. ಈ ಸಂದರ್ಭದಲ್ಲಿ 13 ಪುಟಗಳ 60 ನಿಮಿಷದ ಭಾವನಾತ್ಮಕ ಭಾಷಣ  ಮಾಡಲಿದ್ದಾರೆ ಎಂದು  ತಿಳಿದುಬಂದಿದೆ..

 

Leave a Reply

Your email address will not be published.

Social Media Auto Publish Powered By : XYZScripts.com