BSY ಬಹುಮತ ಯಾಚನೆ ಹಿನ್ನೆಲೆ : ಅಭಿಮಾನಿಗಳಿಂದ ಯಡಿಯೂರು ಸಿದ್ಧಲಿಂಗೇಶ್ವರನಿಗೆ ಪೂಜೆ

ತುಮಕೂರು : ಇಂದು ವಿಧಾಸಭೆಯಲ್ಲಿ ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಿಎಂ ಸ್ಥಾನ ಉಳಿಸಲು ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ. ಯಡಿಯೂರಪ್ಪ ಮನೆದೇವರಾದ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿ ಬಿಎಸ್ವೈ ಯಡಿಯೂರಪ್ಪನವರ ಮನೆ ದೇವರಾದ ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿಗ ಬೆಳಗ್ಗೆ 6 ಗಂಟೆಯಿಂದ ವಿಶೇಷ ಪೂಜೆ ನಡೆಯುತ್ತಿದೆ. ಪೂಜೆ ವೇಳೆ ದೇವರಿಗೆ ವಿಶೇಷ ಅಭಿಷೇಕ, ಸಂಕಲ್ಪ‌ ವ್ರತಗಳು ನಡೆದಿವೆ. ನೂರಾರು ಅಭಿಮಾನಿಗಳಿಂದ ವಿವಿಧ ಪೂಜೆ ಪುನಸ್ಕಾರಗಳನ್ನು ನೆರವೇರಸಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com