ಕೈ ಗೆ ಬಂದ ತುತ್ತು ಯಡಿಯೂರಪ್ಪರಿಗೆ ಬಾಯಿಗೆ ಬರಲಿಲ್ಲ, BJP ಎಡವಿದ್ದು ಎಲ್ಲಿ?

ಏನೇನೆಲ್ಲಾ ಸಾಹಸ ಮಾಡಿದರೂ ಬೇಕಾದ ಸಂಖ್ಯೆಯನ್ನು ಒಗ್ಗೂಡಿಸುವಲ್ಲಿ ವಿಫಲರಾದ ಯಡಿಯೂರಪ್ಪನವರು, ಮಾಡಬೇಕಾದ 1 ಗಂಟೆ ಭಾಷಣವನ್ನು ಮೊಟಕುಗೊಳಿಸಿ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬೇಸರದಿಂದಲೇ ಹೊರನಡೆದರು. ಅತೀಹೆಚ್ಚು ಸ್ಥಾನಗಳನ್ನು ಕರ್ನಾಟಕದ ಜನರು ಗೆಲ್ಲಿಸಿಕೊಟ್ಟರೂ ಸರಕಾರ ಸ್ಥಾಪಿಸಲು ಬಹುಮತವಿಲ್ಲದೆ ರಾಜೀನಾಮೆ ನೀಡುವಂಥ ಪರಿಸ್ಥಿತಿ ಯಡಿಯೂರಪ್ಪನವರಿಗೆ ಬಂದಿದ್ದು ನಿಜಕ್ಕೂ ವಿಪರ್ಯಾಸ, ಅದುವೆ ಪ್ರಜಾಪ್ರಭುತ್ವದ ಸೊಗಸು…

ಒಂದು ಮಾತ್ರ ಸತ್ಯ, ಕರ್ನಾಟಕದ ಜನರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿಯಲ್ಲಿ ವಿಶ್ವಾಸವಿಟ್ಟು ಜನಾದೇಶ ನೀಡಿರಲಿಲ್ಲ.  ಆದರೆ, ಸಂಪೂರ್ಣ ಬಹುಮತವನ್ನು ಕಮಲ ಪಕ್ಷಕ್ಕು ನೀಡಿರಲಿಲ್ಲ.. ಆದರೆ, ಯಡಿಯೂರಪ್ಪನವರಿಗೆ 55 ಘಂಟೆಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವಂಥ ಮತ್ತು ಬಿಜೆಪಿಗೆ ಬಹುಮತ ಬರದಿರುವಂಥ ಪರಿಸ್ಥಿತಿ ಬರಲು ಕಾರಣಗಳೇನು? ಇದಕ್ಕೆ ಯಡಿಯೂರಪ್ಪನವರೇ ಸ್ವತಃ ಕಾರಣರಾದರೆ, ಜನರೇ ಯಡಿಯೂರಪ್ಪನವರಿಗೆ ಕೈಕೊಟ್ಟರೆ? ಅಥವಾ ಪ್ರಾನಿ ಮೋದಿ ಮತ್ತು ಶಾ, ಯಡಿಯೂರಪ್ಪರನ್ನು ಬಿಲಿಪಶುಮಾಡಿದರೆ…

ವಿಶ್ವಾಸಮತ ಯಾಚಿಸುವ ಅಗತ್ಯ ಕಂಡುಬಂದಾಗ, ಬೇಕಾದ ಸೀಟುಗಳನ್ನು ಗಳಿಸಲು ವಾಮಮಾರ್ಗಗಳನ್ನು ಹಿಡಿಯದೆ, ಭಾವನಾತ್ಮಕವಾಗಿ ತಮಗೆ ಬೆಂಬಲ ನೀಡಬಹುದಾದ ವ್ಯಕ್ತಿಗಳನ್ನು ಸೆಳೆಯಲು ಯತ್ನಿಸಿದ್ದರೆ ಯಡಿಯೂರಪ್ಪನವರು ಸ್ವಲ್ಪಮಟ್ಟಿಗಾದರೂ ಯಶಸ್ವಿಗುತ್ತಿದ್ದರೇನೋ. ಆದರೆ, ಅವರು ರಾಜ್ಯದ ಜನರೇ ಅಸಹ್ಯ ಪಟ್ಟುಕೊಳ್ಳುವಂತೆ ನೇರವಾಗಿ ಕುದುರೆ ವ್ಯಾಪಾರಕ್ಕೆ ಇಳಿದರು. ಅದರಲ್ಲಿ ಭಾರೀ ವೈಫಲ್ಯತೆಯನ್ನೂ ಅನುಭವಿಸಿದರು.

ತಮಗೆ ಬಹುಮತ ಸಿಕ್ಕಿಲ್ಲ, ಬಹುಮತಕ್ಕೆ ಬೇಕಾದ ಸಂಖ್ಯೆಗಳನ್ನು ಸೇರಿಸುವ ಸಾಧ್ಯತೆಯೂ ಇಲ್ಲವೆಂದು ತಿಳಿದುಬಂದಾಗ, ತಟಸ್ಥವಾಗಿ ಉಳಿದುಕೊಂಡು, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಯಡಿಯೂರಪ್ಪನವರು ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟಿದ್ದರೆ ರಾಜ್ಯದ ಜನರ ದೃಷ್ಟಿಯಲ್ಲಿ ದೊಡ್ಡವರಾಗುತ್ತಿದ್ದರು. ಅವರ ಮೇಲಿನ ಪ್ರೀತಿ ಕೂಡ ಇನ್ನೂ ಬೆಟ್ಟದಷ್ಟು ಬೆಳೆಯುತ್ತಿತ್ತು. ಅದನ್ನು ಮಾಡದೆ ಹೈಕಮಾಂಡ ಮಾತು ಕೇಳಿ  ಸರಕಾರ ಮಾಡೇ ತೀರುತ್ತೇನೆ ಎಂದು ಹೋರಟಿದ್ದು…


ಮತ್ತೊಂದು ದೊಡ್ಡ ತಪ್ಪೆಂದರೆ, ರಾಜ್ಯಪಾಲರನ್ನು ಸಂಪರ್ಕಿಸಿ ಬಹುಮತದ ಸಂಖ್ಯೆಗಳಿಲ್ಲದಿದ್ದರೂ ತಾವೇ ಸರಕಾರ ರಚಿಸುತ್ತೇವೆಂದು ಹೊರಟು, ಕಾನೂನು ಸಮರಕ್ಕೆ ಅವಕಾಶ ಮಾಡಿಕೊಟ್ಟಿದ್ದು BJPಗೆ ಭಾರೀ ಹಿನ್ನಡೆಯಾಯಿತು.  ಈ ನಡೆ ಇಡೀ ದೇಶದಲ್ಲಿ ಪ್ರತಿಧ್ವನಿಸುವಂತಾಗಿ, ಇತರ ರಾಜ್ಯಗಳಲ್ಲಿಯೂ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ತಿರುಗಿಬೀಳುವಂತಾಯಿತು. ಇದು ಲೋಕಸಭೆ ಚುನಾವಣೆಯ ಮೇಲೆ ಹೊಡೆತ ಕೊಟ್ಟರೂ ಅಚ್ಚರಿಯಿಲ್ಲ.

ಮೊದಲನೆಯದಾಗಿ, ಪರಿವರ್ತನಾ ಯಾತ್ರೆಯನ್ನು ಬೆಂಗಳೂರಿನಿಂದ ಆರಂಭಿಸಿದಾಗ, ಎಲ್ಲ ನಾಯಕರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳದೆ, ತಾನೊಬ್ಬನೇ ಜೈಸುತ್ತೇನೆ ಎಂದು ಯಡಿಯೂರಪ್ಪ ಹೊರಟರು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಇತರ ನಾಯಕರ ಸಲಹೆಗಳಿಗೆ, ಆಯ್ಕೆಗಳಿಗೆ ಮನ್ನಣೆ ನೀಡದೆ ತಮಗೆ ಬೇಕಾದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು  ಕೂಡಾ BJP ಮಾಡಿದ ದೊಡ್ಡ ತಪ್ಪು…

3 thoughts on “ಕೈ ಗೆ ಬಂದ ತುತ್ತು ಯಡಿಯೂರಪ್ಪರಿಗೆ ಬಾಯಿಗೆ ಬರಲಿಲ್ಲ, BJP ಎಡವಿದ್ದು ಎಲ್ಲಿ?

Leave a Reply

Your email address will not be published.

Social Media Auto Publish Powered By : XYZScripts.com