ಯಡಿಯೂರಪ್ಪ ನಾಳೆ ಸದನದಲ್ಲಿ ಬಹುಮತ ಸಾಬೀತು ಮಾಡಲಿದ್ದಾರೆ : ಕೆ.ಎಸ್ ಈಶ್ವರಪ್ಪ

ಶಿವಮೊಗ್ಗ- ನಾಳೆ ಬಹುಮತ ಸಾಬೀತು ಕುರಿತು ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದು ‘ ನಾಳೆ ಸದನದಲ್ಲಿ ಸಿಎಂ ಯಡಿಯೂರಪ್ಪ ಬಹುಮತ ‌ಸಾಬೀತು ಮಾಡಲಿದ‌್ದಾರೆ ‘ ಎಂದಿದ್ದಾರೆ. ‘ ಕರ್ನಾಟಕ ರಾಜ್ಯದ ರಾಜಕಾರಣದಲ್ಲಿ ಈ ರೀತಿಯ ಪರಿಸ್ಥಿತಿ ಹಿಂದೆ ಬಂದಿರಲಿಲ್ಲ. 104 ಸ್ಥಾನ ಪಕ್ಷಕ್ಕೆ ಸಿಎಂ ಅಭ್ಯರ್ಥಿಯ ವಿರುದ್ದವಾಗಿ ಜೆಡಿಎಸ್ ನ ಕುಮಾರ ಸ್ವಾಮಿರನ್ನು ಸಿಎಂ ಮಾಡಲು ಕಾಂಗ್ರೆಸ್ ಬೆಂಬಲ ನೀಡುತ್ತಿರುವುದು ಪ್ರಜಾ ಪ್ರಭುತ್ವದ ಅಣಕ ‘

‘ಕಾಂಗ್ರೆಸ್ ವಿರುದ್ದ ಜನ ತೀರ್ಪು ನೀಡಿದ್ದಾರೆ. ಇದರಿಂದ ಕಾಂಗ್ರೆಸ್ ವಿರೋಧ ಪಕ್ಷದಲ್ಲಿ ಕುಳಿತು ಕೊಳ್ಳಬೇಕಿತ್ತು. ಕಾಂಗ್ರೆಸ್ ಗೆ ಖುರ್ಚಿಯಲ್ಲಿ ಕೂರುವ ಆಸೆ ಪಡುತ್ತಿದ್ದಿದೆ. ಇದನ್ನು ರಾಜ್ಯದ ಜನ ನೋಡುತ್ತಿದ‌್ದಾರೆ. ಕಾಂಗ್ರೆಸ್ ನಾಟಕದ ಬಗ್ಗೆ ‌ಜನ ನೋಡುತ್ತಿದ್ದಾರೆ. ಕಾಂಗ್ರೆಸ್ ನ ನಿರಾಸೆಯ ಶಾಸಕರು ಬಿಜೆಪಿಗೆ ಬೆಂಬಲ ನೀಡಲು ಮುಂದೆ ಬಂದಿದ್ದಾರೆ. ವಿರೋಧ ಪಕ್ಷಗಳು ಅವರ ಶಾಸಕರನ್ನು ಕುದುರೆಗೆ ಹೋಲಿಸುವುದು ಸರಿಯಲ್ಲ. ಯಾವ ಕುದುರೆ ವ್ಯಾಪಾರನು ನಡೆಸಿಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.