IPL : ಕೊಹ್ಲಿ ಪಡೆಗೆ ರೋಚಕ ಜಯ : ಮಿಂಚಿದ ಡಿವಿಲಿಯರ್ಸ್, ಪ್ಲೇ ಆಫ್ ಕನಸು ಜೀವಂತ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ ಟಿ-20 ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 14 ರನ್ ಅಂತರದ ರೋಚಕ ಜಯ ದಾಖಲಿಸಿದೆ. ಇದರೊಂದಿಗೆ ಆರ್ಸೀಬಿ ತನ್ನ ಪ್ಲೇ ಆಫ್ ಕನಸನ್ನು ಇನ್ನೂ ಜೀವಂತವಾಗಿರಿಸಿಕೊಂಡಿದೆ.

ಟಾಸ್ ಗೆದ್ದ ಹೈದ್ರಾಬಾದ್ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಲಿಳಿದ ಆರ್ಸೀಬಿ 20 ಓವರುಗಳಲ್ಲಿ 6 ವಿಕೆಟ್ ಕಳೆದುಕೊಂಡು 218 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿದ ಆರ್ಸೀಬಿಗೆ ಎಬಿ ಡಿವಿಲಿಯರ್ಸ್ ಹಾಗೂ ಮೋಯಿನ್ ಅಲಿ ಅರ್ಧಶತಕ ಬಾರಿಸಿ ನೆರವಾದರು.

ಗುರಿಯನ್ನು ಬೆನ್ನತ್ತಿದ ಹೈದರಾಬಾದ್ 20 ಓವರುಗಳ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 204 ರನ್ ಸೇರಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ SRH ನಾಯಕ ಕೇನ್ ವಿಲಿಯಮ್ಸನ್ 81 ರನ್ ಗಳಿಸಿದರು. ಮನೀಶ್ ಪಾಂಡೆ 62 ಹಾಗೂ ಅಲೆಕ್ಸ್ ಹೇಲ್ಸ್ 37 ರನ್ ಗಳಿಸಿದರಾದರೂ ಜಯ ಒಲಿಯಲಿಲ್ಲ.

Leave a Reply

Your email address will not be published.

Social Media Auto Publish Powered By : XYZScripts.com