ವಿಶ್ವಾಸ ಮತ ಸಾಬೀತು ಪಡಿಸಲು ಸುಪ್ರೀಂ ಕೋರ್ಟ್ ಸೂಚನೆ ಸ್ವಾಗತಾರ್ಹ : ಸಂತೋಷ್ ಹೆಗಡೆ

‘ ಅತಿದೊಡ್ಡ ಪಕ್ಷಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಅವಕಾಶ ನೀಡಿದ್ದು ಸರಿಯಾಗಿದೆ. ಆದರೆ 15 ದಿನಗಳ ಕಾಲವಕಾಶ ನೀಡಿದ್ದು ನನಗೆ ವೈಯಕ್ತಿಕವಾಗಿ ಸರಿಕಾಣುತ್ತಿಲ್ಲ. ಇದು ಶಾಸಕರ ಕುದುರೆ ವ್ಯಾಪರಕ್ಕೆ ಆಸ್ಪದ ನೀಡಿದಂತಾಗಲಿದೆ. ಸುಪ್ರೀಂ ಕೋರ್ಟ್ ನಾಳೆ ಸಂಜೆ ಒಳಗಾಗಿ ಮಹುಮತ ಸಾಭೀತಿಗೆ ಸೂಚಿಸಿರೋದು ಸ್ವಾಗತರ್ಹ ವಿಚಾರ. ಎಸ್.ಆರ್. ಬೊಮ್ಮಾಯಿ ಪ್ರಕರಣದ ತೀರ್ಪೀನಂತೆ ರಾಜ್ಯಪಾಲರು ಕ್ರಮ ವಹಿಸಿದ್ದಾರೆ ‘ ಮೈಸೂರಿನಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿಕೆ ನೀಡಿದ್ದಾರೆ.

‘ ರೆಸಾರ್ಟ್ ರಾಜಕಾರಣದಿಂದ ಏನು ಆಗೋಲ್ಲ. ಕೇವಲ ರೆಸಾರ್ಟ್ ಮಂದಿಗೆ ದುಡ್ಡಾಗಲಿದೆ ಅಷ್ಟೇ. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹಗ್ಡೆ ಹೇಳಿದ್ದಾರೆ.

‘ ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸುವ ಬಗ್ಗೆ ನನಗೆ ವಿಶ್ವಾಸ ಇಲ್ಲ. ನಾನು ನೀಡಿದ ವರದಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತರಲಿಲ್ಲ. ಜಾರಿಗೆ ತರುತ್ತೇವೆ ಎಂದು ಬಳ್ಳಾರಿ ತನಕ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದವರೂ ಮಾಡಲಿಲ್ಲ. ಬದಲಿಗೆ ಲೋಕಾಯುಕ್ತದ ಪ್ರಮುಖ ಎರಡು ಅಧಿಕಾರದ ಪೈಕಿ ಒಂದನ್ನು ಮೊಟಕು ಮಾಡಿದ್ದಾರೆ. ಹೊಸ ಸರ್ಕಾರ ಯಾರೇ ಬರಲಿ ಲೋಕಾಯುಕ್ತ ಸಂಸ್ಥೆ ಬಲಪಡಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರಗಳ ಆಡಳಿತ ಶುದ್ಧವಾಗಿರಬೇಕಾದ್ರೆ ರಾಜ್ಯದಲ್ಲಿ ಲೋಕಾಯುಕ್ತ, ಕೇಂದ್ರದಲ್ಲಿ ಲೋಕಪಾಲ ಸಧೃಡವಾಗಿರಬೇಕು. ಮೈಸೂರಿನಲ್ಲಿ ಸಂತೋಷ್ ಹೆಗ್ಡೆ ಅಭಿಮತವನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published.