Number game : Magic number ಗಾಗಿ BJPಯ ತಂತ್ರದ details ಇಲ್ಲಿದೆ..

ದಕ್ಷಿಣ ಭಾರತದ ಅತಿ ದೊಡ್ಡ ರಾಜ್ಯ ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳುವಂತೆ ಮಾಡುವಲ್ಲಿ ಅರ್ದ ಯಶಸ್ವಿಯಾದ ಭಾರತೀಯ ಜನತಾ ಪಕ್ಷ ಕ್ಕೆ ಈಗ ಅಗ್ನಿಪರೀಕ್ಷೆ .  ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ವಿಶ್ವಾಸಮತ ಯಾಚನೆಗೆ ಸಜ್ಜಾಗುತ್ತಿದ್ದಾರೆ. ಶನಿವಾರ ಸಂಜೆ 4 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.

ಪಕ್ಷಗಳ ಬಲಾಬಲ :

ವಿಧಾನಸಭೆಯಲ್ಲಿ ಶಾಸಕರ ಸಂಖ್ಯಾಬಲ 221*/224

ಬಹುಮತಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆ 111.

ಬಿಜೆಪಿಯ ಬಳಿ ಇರುವ ಶಾಸಕರು: 104

ಕಾಂಗ್ರೆಸ್ 78

ಜೆಡಿಎಸ್ ಪ್ಲಸ್:37*

ಇತರೆ: 2

ಪ್ರತಿಪಕ್ಷದ ಸಂಖ್ಯಾಬಲ 117.

ಕುಮಾರಸ್ವಾಮಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದಿದ್ದು, ಒಂದು ಕ್ಷೇತ್ರವನ್ನು ಪರಿಗಣಿಸಲಾಗುತ್ತದೆ. ಹೀಗಾಗಿ ತನ್ನ ಬಳಿ ಇರುವ ಎಲ್ಲಾ ಶಾಸಕರು ನಾಳೆ ಸದನಕ್ಕೆ ಹಾಜರಾಗುವಂತೆ ನೋಡಿಕೊಳ್ಳಬೇಕು.  ಬೆಳಗ್ಗೆ ಚುನಾಯಿತ ಪ್ರತಿನಿಧಿಗಳು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಬೇಕು.  ನಂತರ ಮುಖ್ಯ ಸಚೇತಕ ಅವರು ಬಿಜೆಪಿ ಶಾಸಕರಿಗೆ ವಿಪ್ ಜಾರಿಗೊಳಿಸಿ ಸಂಜೆ 4 ಗಂಟೆಗೆ ವಿಶ್ವಾಸಮತ ಯಾಚನೆ ಅಧಿವೇಶನಕ್ಕೆ ಹಾಜರಾಗುವಂತೆ ಸೂಚಿಸಲಿದ್ದಾರೆ.

111 ಮ್ಯಾಜಿಕ್ ನಂಬರ್ ದಾಟಲು ಬಿಜೆಪಿಗೆ ಇರುವ ಏಕೈಕ ಮಾರ್ಗವೆಂದರೆ ಕೆಲ ಕಾಂಗ್ರೆಸ್ ಶಾಸಕರನ್ನು ನಾಳೆ ಮತದಾನ ಮಾಡದಂತೆ ತಡೆಯುವುದು ಅಥವಾ ನಾಳೆ ಆ ಶಾಸಕರು ಪ್ರಮಾಣವಚನ ಸ್ವೀಕರಿಸದಂತೆ ನೋಡಿಕೊಳ್ಳುವುದು. ಅಂದರೆ ಸದನದಲ್ಲಿ ಪ್ರತಿಪಕ್ಷ ಸದಸ್ಯರ ಹಾಜರಾತಿ ಸಂಖ್ಯೆ ಇಳಿಮುಖ ಮಾಡುವುದು ಬಿಜೆಪಿಯ ಟಾರ್ಗೆಟ್.  ಒಮ್ಮೆ ಶಾಸಕರು ಪ್ರಮಾಣ ವಚನ ಸ್ವೀಕರಿಸಿದರೆ ಕಾಂಗ್ರೆಸ್/ಜೆಡಿಎಸ್ ಕೂಡಾ ವಿಪ್ ಜಾರಿಗೊಳಿಸಲಿದೆ.  ವಿಪ್ ಉಲ್ಲಂಘಿಸಿ ಅಡ್ಡಿ ಮತದಾನ ಮಾಡಲು ಜೆಡಿಎಸ್ /ಕಾಂಗ್ರೆಸ್ ಶಾಸಕರು ಸಿದ್ಧರಾಗಿಲ್ಲ. ಅಡ್ಡ ಮತದಾನ ಮಾಡಿದರೆ ಅಂಥ ಶಾಸಕರು ಅನರ್ಹಗೊಳ್ಳಲಿದ್ದು, 6 ವರ್ಷ ಯಾವುದೇ ಚುನಾವಣೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ.  ಜೆಡಿಎಸ್ ಶಾಸಕರು ಯಾವುದೇ ಕಾರಣಕ್ಕೂ ಅಡ್ಡ ಮತದಾನ, ಮತದಾನಕ್ಕೆ ಗೈರು ಅಥವಾ ರಾಜೀನಾಮೆ ನೀಡಲು ಸಿದ್ಧರಿಲ್ಲ.  ನಾಳೆ ಕಾಂಗ್ರೆಸ್ ಶಾಸಕರನ್ನು ಗೈರು ಹಾಜಾರಾಗುವಂತೆ ಮಾಡಲು ವೀರಶೈವ ಮಠ ಮಾನ್ಯಗಳ ಸಹಾಯವನ್ನು ಬಿಜೆಪಿ ಪಡೆದುಕೊಂಡಿದೆ.  ಆದರೆ, ಸರ್ಕಾರ ರಚನೆ ಮಾಡುವ ಪಕ್ಷಕ್ಕೆ ಶಾಸಕರು ಬೆಂಬಲ ವ್ಯಕ್ತಪಡಿಸಲಿದ್ದಾರೆ ಎಂಬುದು ನಿರೀಕ್ಷಿತ. ಇದೆಲ್ಲದರ ಜತೆಗೆ ಜೆಡಿಎಸ್ ಅಥವಾ ಕಾಂಗ್ರೆಸ್ ಪಕ್ಷದಿಂದ ಮೂರನೇ ಎರಡರಷ್ಟು ಮಂದಿಯನ್ನು ತಮ್ಮತ್ತ ಸೆಳೆದುಕೊಳ್ಳಬೇಕು. ಅಂದರೆ ಜೆಡಿಎಸ್ ನ 26 (37) ಅಥವಾ ಕಾಂಗ್ರೆಸ್ಸಿನ 52(78) ಮಂದಿ ಬಿಜೆಪಿಗೆ ಬೆಂಬಲಿಸಬೇಕು.

ಬಿಜೆಪಿ ಕಡೆಯಿಂದ ಜೇಷ್ಠತೆಯ ಆಧಾರದ ಮೇಲೆ ನೇಮಕವಾಗಿರುವ ಸ್ಪೀಕರ್ (ಕೆ.ಜಿ ಬೋಪಯ್ಯ) ಅವರು ನಾಳೆ ಪ್ರಮಾಣ ವಚನ ಬೋಧನೆ ಮಾಡಲಿದ್ದಾರೆ. ಸಂಜೆ ವಿಶ್ವಾಸಮತ ಯಾಚನೆ ಯಾವ ರೀತಿ ನಡೆಯಬೇಕು.  ಸದನದ ವಿಧಿ ವಿಧಾನ, ಪ್ರಕ್ರಿಯೆ ಬಗ್ಗೆ ಸೂಚನೆ ನೀಡಲಿದ್ದಾರೆ. ಈಗಾಗಲೇ ಸುಪ್ರೀಂಕೋರ್ಟ್ ನಿರ್ದೇಶನದಂತೆ ಗುಪ್ತ ಮತದಾನ ಆಯ್ಕೆ ಮಾಡುವಂತಿಲ್ಲ. ಹೀಗಾಗಿ, ನಾಳೆ ಸದನಕ್ಕೆ ಹಾಜರಾಗುವ ಎಲ್ಲಾ ಶಾಸಕರ ತಲೆಗಳನ್ನು ಎಣಿಕೆ ಮಾಡಿ, ಹಾಜರಾತಿ ಸಂಖ್ಯೆ ಘೋಷಿಸಲಾಗುತ್ತದೆ.

Leave a Reply

Your email address will not be published.

Social Media Auto Publish Powered By : XYZScripts.com