Karnataka Election 2018 : ಕಾಂಗ್ರೆಸ್ – JDS ಕಟ್ಟಿಹಾಕಲು ಎಲ್ಲ ತಂತ್ರ ಬಳಸುತ್ತಿರುವ BJP

ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ರಾಜ್ಯ ಅಧಿಕಾರದ ಗದ್ದುಗೆಗೇರಿರುವ ಬಿಜೆಪಿ ಸರ್ಕಾರ ಬಹುಮತ ಸಾಬೀತು ಪಡಿಸಲು ಅಪರೇಷನ್ ಕಮಲಕ್ಕೆ ಮುಂದಾಗಿದೆ. ಜೊತೆಗೆ ಕಾಂಗ್ರೆಸ್ – JDS ಶಾಸಕರಗಳನ್ನು ಗೈರುಹಾಜರು ಮಾಡುವ ಮೂಲಕ ಬಹುಮತ ಸಾಬೀತು ಪಡಿಸಲು ಹೊರಟಿರುವ ಕಮಲ ಪಾಳಯ ಯಾವುದೆ ಮಟ್ಟಕ್ಕು ಹೊಗಲು ಸಿದ್ದವಿದೆ ಅನ್ನುವುದನ್ನು ತನ್ನ ಕಾರ್ಯಗಳ ಮೂಲಕ ಸಾಬೀತುಪಡಿಸುತ್ತಿದೆ..
ಈ ನಡುವೆ ಬಿಜೆಪಿಯಿಂದ ತಮ್ಮ ಶಾಸಕರನ್ನ ರಕ್ಷಿಸಿಕೊಳ್ಳಲು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಕಸರತ್ತು ನಡೆಸುತ್ತಿದ್ದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಗಳಿಗೆ ಶಾಕ್ ಆಗಿದ. ಕಾರಣ  ಈಗಲ್ ಟನ್ ರೆಸಾರ್ಟ್ ಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನೂ ಗುರುವಾರ ಮಧ್ಯಾಹ್ನ 4.30ರ ವೇಳೆಗೆ ಹಿಂದಕ್ಕೆ ಪಡೆಯಲಾಗಿದೆ. ರೆಸಾರ್ಟ್ ಬಳಿ ಒಂಡು ಡಿಎಆರ್ ತುಕಡಿ ಹಾಗೂ ಇಪ್ಪತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಮುಖ್ಯಮಂತ್ರಿ ಕಾರ್ಯಾಲಯದ ಸೂಚನೆ ಮೇರೆಗೆ ಭದ್ರತೆಯನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಜೊತೆಗೆ  ಕಾಂಗ್ರೆಸ್ – JDS ಶಾಸಕರ ಮೇಲೆ ಕಣ್ಣಿಡಲು ಪೋಲೀಸ್ ‍ಇಲಾಖೆಗೆ ಸರ್ಜರಿ ಮಾಡಿದ್ದಾರೆ.  ಇದು ಕಾಂಗ್ರೆಸ್ – JDS ನಾಯಕರ ನಿದ್ದೆ ಕೆಡಿಸಿದೆ…

ಜೊತೆಗೆ ಕಾಂಗ್ರೆಸ್ – JDS ಶಾಸಕರನ್ನು ಹೈದರಾಬಾದ್ ಗೆ ಶಿಫ್ಟ್  ಮಾಡಲು ಹೊರಟ ನಾಯಕರಿಗೆ ಬಿಜೆಪಿ ಮತ್ತೊಂದು ಹೊಡೆತ ನೀಡಿದೆ… ಕಾಸಗಿ ಫೈಲ್ಟ್ ಮುಖಾಂತರ ಹೊರಟವರಿಗೆ DGCA ಮೂಲಕ ಅನುಮತಿ ನಿರಾಕರಿಸಿದ್ದರಿಂದ ಬಸ್ ಮೂಲಕ ಪ್ರಯಾಣ ಬೆಳೆಸಬೇಕಾಯಿತು.. ವಾಮ ಮಾರ್ಗ ಮೂಲಕ ಅಧಿಕಾರ ಪಡೆದಿರುವ ಬಿಜೆಪಿ ಅದನ್ನು ಉಳಿಸಿಕೊಳ್ಳಲು ಎಲ್ಲ ಬಲವನ್ನು ಬಳಸುತ್ತಿದೆ…

 

Leave a Reply

Your email address will not be published.