Number game : ಕುದುರೆ ವ್ಯಾಪಾರಕ್ಕೆ ಇಳಿದ ರೆಡ್ಡಿ, ಆಡಿಯೋ ಬಿಡುಗಡೆ ಮಾಡಿದ ಉಗ್ರಪ್ಪ

ರಾಜ್ಯದಲ್ಲಿ ನಡೆಯುತ್ತಿರುವ ಬಹುಮತ ಸಾಬಿತುಪಡಿಸುವ ಡೊಂಬರಾಟಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಗಣಿ ಧಣಿ ಜನಾರ್ಧನ ರೆಡ್ಡಿ ಶಾಸಕರನ್ನು ಸೆಳೆಯಲು 150 ಕೋಟಿ ದುಡ್ಡು ಜೊತೆಗೆ ಸಚಿವ ಸ್ಥಾನ, ನೀಡುಬ ಆಮೀಶ ಒಡ್ಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.. ಈ ಸಂಭಂಧ ಆಡಿಯೋ ಬಿಡುಗಡೆ ಮಾಡಿದೆ…

ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕ ಉಗ್ರಪ್ಪ ‘ಕುದುರೆ ವ್ಯಾಪಾರ’ದ ಆಡಿಯೋ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ನಾಯಕ ಜನಾರ್ದನ ರೆಡ್ಡಿ ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡರಿಗೆ ಆಮಿಷ ಒಡ್ಡಿರುವ ಆಡಿಯೋ ಇದು ಎಂದು ಅವರು ಹೇಳಿದ್ದಾರೆ. ಮತ್ತು ಇದನ್ನು ಪತ್ರಿಕಾಗೋಷ್ಠಿಯಲ್ಲೇ ಅವರು ಪತ್ರಕರ್ತರಿಗೆ ಕೇಳಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಚ್ಡಿಕೆ, ಸಿದ್ದರಾಮಯ್ಯ ಭಾಗಿ ಬಿಜೆಪಿ ನಾಯಕರು ನಿನ್ನೆವರೆಗೆ 25 ಕೋಟಿ ರೂಪಾಯಿಯ ಆಮಿಷ ತೋರಿಸುತ್ತಿದ್ದರು. ಇಂದು 150 ಕೋಟಿ ರೂಪಾಯಿಯ ಆಫರ್ ನೀಡುತ್ತಿದ್ದಾರೆ. ಜೊತೆಗೆ ಕೇಳಿದ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಸಚಿವ ಹುದ್ದೆ ನೀಡುವ ಆಮಿಷ ಒಡ್ಡುತ್ತಿದ್ದಾರೆ ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ

ತಮಗೆ ಕುದುರೆ ವ್ಯಾಪಾರ ಮಾಡಲು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಬೆಂಬಲ ಇದೆ ಎಂದು ರೆಡ್ಡಿ ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ ಎಂಬುದಾಗಿ ಉಗ್ರಪ್ಪ ತಿಳಿಸಿದ್ದಾರೆ… ಈ ಬಗ್ಗೆ ರೆಡ್ಡಿಯಾಗಲಿ ಅಥವಾ BJP ಪಕ್ಷ ಇನ್ಜು ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲಾ….

Leave a Reply

Your email address will not be published.

Social Media Auto Publish Powered By : XYZScripts.com