Karnataka election : ಜಯನಗರ – ಬಿಜೆಪಿ ಟಿಕೆಟ್ ಗಾಗಿ ಹೆಚ್ಚಾದ ಪೈಪೋಟಿ….!

ಬಿಜೆಪಿ ಶಾಸಕರಾಗಿದ್ದ ಬಿ ಎನ್ ವಿಜಯಕುಮಾರ್ ಅವರ ಅಕಾಲಿಕ ನಿಧನದಿಂದ ಮುಂದೂಡಲ್ಪಟ್ಟ ಬೆಂಗಳೂರು, ಜಯನಗರ ಕ್ಷೇತ್ರದ ಚುನಾವಣೆಗೆ ಮಹೋರ್ತ ಫಿಕ್ಸ್  ಆಗಿದೆ.. ಜೂನ್ ಹನ್ನೊಂದಕ್ಕೆ ನಿಗದಿಯಾಗಿದೆ. ಕ್ಷೇತ್ರದ ಬಿಜೆಪಿ ಟಿಕೆಟಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸದ್ಯ, ಎಸ್ ಕೆ ನಟರಾಜ್, ತೇಜಸ್ವಿ ಸೂರ್ಯ ಮತ್ತು ಸಿ ಕೆ ರಾಮಮೂರ್ತಿ ಮತ್ತು ಸಂಸದ ಅನಂತಕುಮಾರ ಪತ್ನಿ ತೇಜಸ್ವಿನಿ ಹೆಸರು ಚಾಲ್ತಿಯಲ್ಲಿದ್ದು, ಅದರಲ್ಲಿ ರಾಮಮೂರ್ತಿ ಹೆಸರು ಮಂಚೂಣಿಯಲ್ಲಿ ಕೇಳಿಬರುತ್ತಿದೆ.

ಬ್ರಾಹ್ಮಣ ಸಮುದಾಯದ ಮತ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವುದರಿಂದ, ರಾಮಮೂರ್ತಿ ಹೆಸರು ಅಂತಿಮವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜೂನ್‌ 11ಕ್ಕೆ ಜಯನಗರ ವಿಧಾನಸಭಾ ಕ್ಷೇತ್ರ ಚುನಾವಣೆ ವಿಜಯ್ ಕುಮಾರ್ ಅವರ ನಿಕಟವರ್ತಿ ಮತ್ತು ಕಳೆದ ಎರಡು ಚುನಾವಣೆಯಲ್ಲಿ ಬಿ ಎನ್ ವಿಜಯಕುಮಾರ್ ಗೆಲುವಿಗೆ ಬೆನ್ನೆಲುಬಾಗಿ ನಿಂತಿದ್ದ ಜೊತೆಗೆ, ಕ್ಷೇತ್ರದಲ್ಲಿ ಚಿರಪರಿಚಿತರಾಗಿರುವ ರಾಮಮೂರ್ತಿ ಅವರೇ ಅಭ್ಯರ್ಥಿಯಾಗಬೇಕು ಎನ್ನುವುದು ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿರುವ ಮಾತು. 1999ರಿಂದ ಇದುವರೆಗೆ ಬ್ರಾಹ್ಮಣ ಸಮುದಾಯದ ಬಿ ಎನ್ ವಿಜಯ್ ಕುಮಾರ್ ಅವರಿಗೇ ಬಿಜೆಪಿ ಟಿಕೆಟ್ ನೀಡಿತ್ತು ಮತ್ತು ಅವರು ಸತತವಾಗಿ ಎರಡು ಬಾರಿ ಉತ್ತಮ ಅಂತರದಿಂದ ಗೆದ್ದು ಬಂದಿದ್ದರು.

ಕೆಲವು ತಿಂಗಳ ಹಿಂದೆಯಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣ ರೆಡ್ಡಿ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ತೀವ್ರ ಲಾಬಿಯ ನಂತರ ಕಾಂಗ್ರೆಸ್ ಟಿಕೆಟ್ ರಾಮಲಿಂಗ ರೆಡ್ಡಿಯವರ ಪುತ್ರಿ ಸೌಮ್ಯ ರೆಡ್ಡಿಗೆ ಒಲಿದಿತ್ತು. ಜೊತೆಗೆ, ಜೆಡಿಎಸ್ ನಿಂದ ಕಾಳೇಗೌಡ ಕಣದಲ್ಲಿದ್ದರೂ, ಕಾಂಗ್ರೆಸ್ಸಿಗೆ ಬೆಂಬಲ ಸೂಚಿಸಲಿದ್ದಾರೆ.

ಬ್ರಾಹ್ಮಣ ಸಮುದಾಯದ ಮತ ಈ ಕ್ಷೇತ್ರದಲ್ಲಿ ನಿರ್ಣಾಯಕ ಜಯನಗರ ಕ್ಷೇತ್ರದಲ್ಲಿ ಸುಮಾರು 53ಸಾವಿರ ಮುಸ್ಲಿಮರು, 45 ಸಾವಿರ ಬ್ರಾಹ್ಮಣರು, 43 ಸಾವಿರ   ಒಕ್ಕಲಿಗರು , 20 ಸಾವಿರ ಎಸ್ಸಿ/ಎಸ್ಟಿ ಮತ್ತು ಇತರರು ಸುಮಾರು 20ಸಾವಿರ ಸಂಖ್ಯೆಯಲ್ಲಿದ್ದಾರೆ.

ತಮ್ಮ ಮಗಳು ಕಣದಲ್ಲಿರುವುದರಿಂದ, ಕ್ಷೇತ್ರದಲ್ಲಿ ಜಯಗಳಿಸಲು ರಾಮಲಿಂಗ ರೆಡ್ಡಿಯವರು ತಮ್ಮ ರಾಜಕೀಯ ಅನುಭವವನ್ನೆಲ್ಲಾ ಬಳಸಿಕೊಳ್ಳಬಹುದು. ಅವರಿಗೆ ವಿಜಯ್ ಕುಮಾರ್ ನಂತರ ಕ್ಷೇತ್ರದಲ್ಲಿ ಪ್ರಭಲವಾಗಿ ಪ್ರತಿಸ್ಪರ್ಧೆ ನೀಡಬಲ್ಲವರೆಂದರೆ ಅದು ರಾಮಮೂರ್ತಿ ಎನ್ನುವುದು ಇಲ್ಲಿನ ಕಾರ್ಯಕರ್ತರ ಮಾತು. ಜೊತೆಗೆ, ಇವರು ಜಯನಗರ ಕ್ಷೇತ್ರದವರು ಎನ್ನುವ ಪ್ಲಸ್ ಪಾಯಿಂಟ್ ಬೇರೆ ಇದೆ.  ಇವರಿಗೆ ಸಂಸದ ಅನಂತಕುಮಾರ ಪತ್ನಿ ತೇಜಸ್ವಿನಿ ಅವರು ಫೈಪೋಟಿ ನೀಡುತ್ತದ್ದಾರೆ..

Leave a Reply

Your email address will not be published.

Social Media Auto Publish Powered By : XYZScripts.com