WATCH : ಬೌಂಡರಿ ಲೈನ್ ಬಳಿ ಡಿವಿಲಿಯರ್ಸ್ ಅದ್ಭುತ ಕ್ಯಾಚ್ : ABD ಬಗ್ಗೆ ಕೊಹ್ಲಿ ಹೇಳಿದ್ದೇನು.?

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಗುರುವಾರ ನಡೆದ ಲೀಗ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಆರ್ಸೀಬಿ 14 ರನ್ ಅಂತರದಿಂದ ಗೆದ್ದಿದೆ. ಕೊನೆಯ ಓವರ್ ವರೆಗೂ ತಲುಪಿದ ಈ ರೋಚಕ ಹಣಾಹಣಿ ಕ್ರಿಕೆಟ್ ಪ್ರಿಯರಿಗೆ ಅಪಾರ ಮನರಂಜನೆ ಒದಗಿಸಿತು.

ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಆರ್ಸೀಬಿ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ಅರ್ಧಶತಕ ಬಾರಿಸಿದರು. 69 ರನ್ ಗಳಿಸಿದ ಡಿವಿಲಿಯರ್ಸ್ 12 ಬೌಂಡರಿ ಹಾಗೂ 1 ಭರ್ಜರಿ ಸಿಕ್ಸರ್ ಸಿಡಿಸಿದರು. ಅಷ್ಟೇ ಅಲ್ಲದೇ ಹೈದರಾಬಾದ್ ಇನ್ನಿಂಗ್ಸ್ ವೇಳೆಯಲ್ಲಿ ಎಬಿಡಿ ಅದ್ಭುತ ಕ್ಯಾಚನ್ನು ಕೂಡ ಪಡೆದರು. ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಎಬಿಡಿ, ಅಲೆಕ್ಸ್ ಹೇಲ್ಸ್ ಬಾರಿಸಿದ ಚೆಂಡನ್ನು ನಂಬಲಸಾಧ್ಯವಾದ ರೀತಿಯಲ್ಲಿ ವಶಕ್ಕೆ ಪಡೆದರು.

ಪಂದ್ಯದ ನಂತರ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ‘ ಎಬಿಡಿ ಕ್ಯಾಚ್ ಅದ್ಭುತವಾಗಿತ್ತು, ಸ್ಪೈಡರ್ ಮ್ಯಾನ್ ನಂತಹ ಸೂಪರ್ ಹೀರೋಗಳು ಮಾಡುವ ಕೆಲಸವಾಗಿದೆ, ಸಾಮಾನ್ಯ ಮನುಷ್ಯರು ಇದನ್ನು ಮಾಡಲು ಸಾಧ್ಯವಿಲ್ಲ ‘ ಎಂದು ಹೇಳಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ ‘ ಇವತ್ತು ಸ್ಪೈಡರ್ ಮ್ಯಾನ್ ನನ್ನು ಲೈವ್ ನೋಡಿದೆ ‘ ಎಂದು ಬರೆದುಕೊಂಡಿದ್ದಾರೆ.

 

Leave a Reply

Your email address will not be published.