ಆತ್ಮಸಾಕ್ಷಿಯ ಮೊರೆ ಹೋಗುತ್ತಿದ್ದೇವೆ ಎಂದ ಸಿ.ಟಿ ರವಿ : ಪರೋಕ್ಷವಾಗಿ ಸೋಲೊಪ್ಪಿಕೊಂಡ ಬಿಜೆಪಿ

ಬಿಜೆಪಿ ಪರೋಕ್ಷವಾಗಿ ನಾಳಿನ ಬಹುಮತದ ಸೋಲು ಒಪ್ಪಿಕೊಂಡಿದೆ. ‘ ನಾವು ಆತ್ಮಸಾಕ್ಷಿ ಮತದ ಮೊರೆ ಹೋಗುತ್ತಿದ್ದೇವೆ. ಸ್ಪಷ್ಟ ಬಹುಮತ ಸಿಗದಿದ್ದರೆ, ರಾಜೀನಾಮೆ ಕೊಟ್ಟು ಹೊರಬರುತ್ತೇವೆ ಎಂದು ಸಿಟಿ ರವಿ ಹೇಳಿದ್ದಾರೆ.

ಆದ್ರೆ ಬೆಳಿಗ್ಗೆ ಶೋಭ ಕರಂದ್ಲಾಜೆ 12 ಕ್ಕೂ ಅಧಿಕ ಶಾಸಕರು ನಮ್ಮೊಂದಿಗೆ ಬರುತ್ತಾರೆ ಎಂಬ ಹೇಳಿಕೆ ನೀಡಿದ್ದರು. ಆದರೆ ಇದೀಗ ಬಹುಮತವಿಲ್ಲದೇ ರಾಜೀನಾಮೆ ನೀಡಿದ ಮಾಜಿ ಪ್ರಧಾನಿ ವಾಜಪೇಯಿಯವರನ್ನು ಸಿಟಿ ರವಿ ನೆನೆಸಿಕೊಂಡಿದ್ದಾರೆ.

ಬಹುಮತ ಸಿಗದಿದ್ದರೆ ರಾಜೀನಾಮೆ ಕೊಟ್ಟು ಹೊರಬರೋ ಹೇಳಿಕೆ ನೀಡಿರುವುದರಿಂದ, ಬಿಜೆಪಿಗೆ ಬಹುಮತ ಸಾಬೀತಿನ ಬಿಸಿ ತಟ್ಟಿದೆ ಎಂದ ಹೇಳಬಹುದು.

Leave a Reply

Your email address will not be published.