ನಾಳೆ ವಿಶ್ವಾಸಮತ ಸಾಬೀತು ಪಡಿಸಲು BSY ಗೆ ಸೂಚಿಸಿದ ಸುಪ್ರೀಂ ಕೋರ್ಟ್

ಗುರುವಾರ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್ ಯಡಿಯೂರಪ್ಪ ಸದನದಲ್ಲಿ ಶನಿವಾರ ವಿಶ್ವಾಸಮತ ಸಾಬೀತು ಪಡಿಸಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಶನಿವಾರ ಸಂಜೆ 4 ಗಂಟೆಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

‘ ನಾಳೆ ವಿಶ್ವಾಸಮತ ಸಾಬೀತ ಪಡಿಸಲು ಸೂಚಿಸಬೇಕೆ ಅಥವಾ ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ ರಾಜ್ಯಪಾಲ ವಜೂಭಾಯಿ ವಾಲಾ ಅವರ ನಿರ್ಧಾರವನ್ನು ವಿಚಾರಣೆಗೆ ಒಳಪಡಿಸಬೇಕೆ ‘ ಎಂದು ಸುಪ್ರೀಂ ಕೋರ್ಟ್ ಎರಡು ಆಯ್ಕೆಗಳನ್ನು ಎರಡೂ ಕಡೆಯ ವಕೀಲರ ಎದುರು ಮುಂದಿಟ್ಟಿತು.

ನಾಳೆಯೇ ವಿಶ್ವಾಸ ಮತ ಪಡಿಸುವಂತೆ ಸೂಚಿಸಲು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದ ವಕೀಲರು ತಿಳಿಸಿದರು. ನಂತರ ಬಿಜೆಪಿ ಪರ ವಕೀಲರು ವಿಶ್ವಾಸಮತ ಸಾಬೀತು ಪಡಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com