ನಾಳೆ ಪೊಲಿಟಿಕ್ಸ್ vs ಕ್ರಿಕೆಟ್ ಹೈಡ್ರಾಮಾ : BSYಗೆ ಕುರ್ಚಿ ಚಿಂತೆ, RCBಗೆ ಪ್ಲೇ ಆಫ್ ಚಿಂತೆ

ಅಖಾಡ ಸಜ್ಜಾಗಿದೆ.. ಪಕ್ಷಗಳು, ತಂಡಗಳು ಸಹ ರೆಡಿಯಾಗಿವೆ..  ಕರ್ನಾಟಕದ ಜನ ಪ್ರತಿ ನಿಮಿಷಕ್ಕಮ್ಮೆ ಕೈಯಲ್ಲಿನ ಗಡಿಯಾರ ನೋಡುವ ಪರಿಸ್ಥಿತಿ ಬಂದೊದಗಿದೆ. ಅದ್ರಲ್ಲೂ ನಾಲ್ಕು ಗಂಟೆ ಯಾವಗ ಆಗುತ್ತಪ್ಪ.. ಯಾವ ಚಾನೆಲ್​ ಹಚ್ಚಬೇಕು.. ಸ್ಥಳೀಯ ಸುದ್ದಿವಾಹಿನಗಳನ್ನು ಹಾಕಬೇಕೋ.. ಅಥವಾ ರಾಷ್ಟ್ರೀಯ ವಾಹಿನಿಗಳನ್ನು ಹಾಕಬೇಕೋ ಎನ್ನುವ ಲೆಕ್ಕಾಚಾರ ಆರಂಭವಾಗಿದೆ. ಇದರ ಬೆನ್ನಲ್ಲೆ ನಾಲ್ಕು ಗಂಟೆ ಬೇರೆ ಚಾನೆಲ್​​ಗಳನ್ನು ನೋಡಲು ಅವಕಾಶನೇ ಇಲ್ಲ, ಏನಿದ್ರೂ ಆರ್​ಸಿಬಿ ಮ್ಯಾಚ್​ ಮಾತ್ರ ನೋಡೋದು ಎಂಬ ಡವ ಡವ..

Image result for bs yeddyurappa
ಒಂದೇ ದಿನ.. ಒಂದೇ ಸಮಯ.. ಒಂದೇ ಮನಸ್ಥಿತಿಯ ಎರಡು ರಂಗಗಳ ಆಟ ಅಭಿಮಾನಿಗಳನ್ನು ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ. ರಾಜ್ಯದಲ್ಲಿ ನಡೆದ ವಿಧಾನಸಬಾ ಚುನಾವಣೆಯ ವೇಳೆ ಅತಿ ದೊಡ್ಡ ಪಕ್ಷ ಎಂಬ ಹಣೆ ಪಟ್ಟಿಯನ್ನು ಹೊಂದಿರುವ ಬಿಜೆಪಿಗೆ, ರಾಜ್ಯಪಾಲರು ಸರ್ಕಾರ ರಚನೆಯ ಅವಕಾಶ ನೀಡಿದ್ರು. ಇದ್ರ ಬೆನ್ನಲ್ಲೆ ಯಡಿಯೂರಪ್ಪ ರಾಜ್ಯದ 24ನೇ ಮುಖ್ಯ ಮಂತ್ರಿಯಾಗಿ ಬೆಳಗ್ಗೆ 9 ಗಂಟೆಗೆ ಅಧಿಕಾರ ವಹಿಸಿಕೊಂಡ್ರು. ಇತ್ತ ರಾತ್ರಿ 9 ಗಂಟೆಗೆ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸುತ್ತಾ.. ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮನೆ ಮಾಡಿದ್ದಂತೂ ಸುಳ್ಳು ಅಲ್ಲವೇ ಅಲ್ಲ.

Image result for virat kohli rcb

ವಿಧಾನ ಸಭೆಯಲ್ಲಿ ಶನಿವಾರ ರಾಜ್ಯ ಸರ್ಕಾರದ ಅಳಿವು ಉಳಿವಿನ ನಿರ್ಣಯ ನಾಳೆ 4 ಗಂಟೆಗೆ ನಿರ್ಧಾರವಾದ್ರೆ, ಇತ್ತ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಮೊದಲ ಪಂದ್ಯದಲ್ಲಿ ಸರಿಯಾಗಿ ನಾಲ್ಕು ಗಂಟೆಗೆ ರಾಜಸ್ಥಾನ ಸವಾಲು ಎದುರಿಸಲಿದೆ. ರಾಜ್ಯದ ಜನತೆಗೆ ಡಬಲ್​ ಡವ ಡವ ಆರಂಭವಾಗಿದ್ದಂತೂ ಸುಳ್ಳು ಅಲ್ಲವೇ ಅಲ್ಲ.
ಒಂದಂತೂ ನಿಶ್ಚಿತ ವಿಶ್ವಾಸ ಮತದಲ್ಲಿ ಬಿಎಸ್​ವೈ ಗೆದ್ದರೆ ಸಿಎಂ ಗಾದಿಯಲ್ಲಿ ಕುಳಿತುಕೊಳ್ಳಲು ಅರ್ಹರಾಗುತ್ತದೆ. ಇತ್ತ ಆರ್​ಸಿಬಿ ಸಹ ರಾಜಸ್ಥಾನ ವಿರುದ್ಧದ ಪಂದ್ಯ ಗೆದ್ದರೆ ಮಾತ್ರ ಪ್ಲೇ ಆಫ್​ ರೇಸ್​​ನಲ್ಲಿ ಸ್ಥಾನ ಪಡೆಯುತ್ತದೆ. ನಿಜ ಹೇಳಬೇಕಂದ್ರೆ ಶನಿ ಯಾರಿಗೆ ಕಾಟ ನೀಡಲಿದ್ದಾನೆ.. ಶನಿಯ ವಕ್ರ ದೃಷ್ಟಿಯಿಂದ ಬಿಜೆಪಿ ಹಾಗೂ ಆರ್​ಸಿಬಿ ಪಾರಾಗುತ್ತಾ ಎಂಬುದು ಮಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. 

Leave a Reply

Your email address will not be published.