ದೇವೇಗೌಡರ ಜನ್ಮದಿನ : ಶುಭಾಶಯ ಕೋರಿದ ಮೋದಿ, ರಾಹುಲ್ ಗಾಂಧಿ

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ 85ನೇ ಜನ್ಮದಿನದ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಶುಭ ಕೋರಿದ್ದಾರೆ.

ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ್ ಟ್ವೀಟ್ ಮಾಡಿರುವ ಮೋದಿ, ‘ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದೇನೆ. ಅವರ ಉತ್ತಮ ಆರೋಗ್ಯಕ್ಕಾಗಿ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆ ‘ ಎಂದು ಬರೆದುಕೊಂಡಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ದೂರವಾಣಿಯ ಮೂಲಕ ಮಾತನಾಡಿ ದೇವೇಗೌಡರಿಗೆ ಶುಭ ಕೋರಿದ್ದಾರೆ. 10 ನಿಮಿಷಗಳ ಕಾಲ ನಡೆದ ಇಬ್ಬರ ಸಂಭಾಷಣೆಯಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯನ್ನು ಮುಂದುವರೆಸುವುದರ ಕುರಿತು ಚರ್ಚಿಸಲಾಗಿದೆ. ಚುನಾವಣಾ ಪ್ರಚಾರದ ಸಮಯದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿಯ ‘ಬಿ’ ಪಕ್ಷವೆಂದು ಕರೆದಿದ್ದ ರಾಹುಲ್ ಗಾಂಧಿ, ದೇವೇಗೌಡರ ಕ್ಷಮೆ ಕೋರಿದ್ದಾರೆ.

Leave a Reply

Your email address will not be published.