WATCH : ವಾಂಖೇಡೆಯಲ್ಲಿ ಕ್ರಿಕೆಟಿಗರ Bromance : ಜೆರ್ಸಿ ಬದಲಿಸಿಕೊಂಡ ರಾಹುಲ್-ಹಾರ್ದಿಕ್

ಫುಟ್ಬಾಲ್ ಆಟದಲ್ಲಿ ಪಂದ್ಯವೊಂದು ಮುಗಿದ ನಂತರ ಎದುರಾಳಿ ತಂಡದ ಆಟಗಾರರು ಪರಸ್ಪರ ತಮ್ಮ ಜೆರ್ಸಿಯನ್ನು ಬದಲಿಸಿಕೊಳ್ಳುವುದು ವಾಡಿಕೆ. ಆದರೆ ಈ ಶರ್ಟ್ ಬದಲಿಸಿಕೊಳ್ಳುವ ಸಂಪ್ರದಾಯ ಇದೀಗ ಕ್ರಿಕೆಟ್ ನಲ್ಲಿಯೂ ಅಡಿಯಿಟ್ಟಿದೆ. ವಾಂಖೇಡೆ ಮೈದಾನದಲ್ಲಿ ಬುಧವಾರ ಟೀಮ್ ಇಂಡಿಯಾದ ಯುವ ಕ್ರಿಕೆಟಿಗರಿಬ್ಬರ Bromance ನೋಡಲು ಸಿಕ್ಕಿದೆ.

ಬುಧವಾರ ವಾಂಖೇಡೆ ಮೈದಾನದಲ್ಲಿ ನಡೆದ ಐಪಿಎಲ್ ಟಿ-20 ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ 3 ರನ್ ಗಳ ರೋಚಕ ಜಯಗಳಿಸಿತು. ಈ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ ಕೆ.ಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. 60 ಎಸೆತಗಳನ್ನು ಎದುರಿಸಿದ ರಾಹುಲ್, 10 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ 94 ರನ್ ಗಳಿಸಿದರು.

Image result for Hardik pandya KL rahul T shirt

ಪಂದ್ಯದ ನಂತರ ಪಂಜಾಬ್ ತಂಡದ ಬ್ಯಾಟ್ಸಮನ್ ಕೆ.ಎಲ್ ರಾಹುಲ್ ಹಾಗೂ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪರಸ್ಪರರ ಟಿ-ಶರ್ಟ್ ಗಳನ್ನು ಬದಲಿಸಿಕೊಂಡಿದ್ದಾರೆ. ಈ ವಿಡಿಯೋವನ್ನಯ ಸ್ವತಃ ಹಾರ್ದಿಕ್ ಪಾಂಡ್ಯ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com