ಕಾಂಗ್ರೆಸ್‌ -JDSಗೆ ಹಿನ್ನಡೆ ; ನಿರ್ವಿಘ್ನವಾಗಿ ಸಾಗಿದ ಪ್ರಮಾಣ ವಚನ, ಆರಂಭವಾದ ಕುದುರೆ ವ್ಯಾಪಾರ..

ರಾಜ್ಯಪಾಲರ ಕರ್ತವ್ಯದಲ್ಲಿ ಕೋರ್ಟ್‌ ಹಸ್ತಕ್ಷೇಪ ಸಾಧ್ಯವಿಲ್ಲ : ತ್ರಿಸದಸ್ಯ ಪೀಠ  ಸ್ಪಷ್ಟ ಅಭಿಪ್ರಾಯ
ನವದೆಹಲಿ: ಇಂದು ಬೆಳಗ್ಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿ.ಜೆ.ಪಿ.ಯ ಶಾಸಕಾಂಗ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಅವರ ಪ್ರಮಾಣವಚನ ಸಮಾರಂಭಕ್ಕೆ ತಡೆ ನೀಡಬೇಕೆಂದು ಕೋರಿ ಕಾಂಗ್ರೆಸ್‌ ಮತ್ತು ಜೆ.ಡಿ..ಎಸ್‌. ಜಂಟಿಯಾಗಿ ಸುಪ್ರೀಂ ಕೋರ್ಟ್‌ ಗೆ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ನಡೆಸಿದ ತ್ರಿ ಸದಸ್ಯ ಪೀಠ ಈ ಅರ್ಜಿಯನ್ನು ತಿರಸ್ಕರಿಸಿ ಪ್ರಮಾಣವಚನ ಸಮಾರಂಭಕ್ಕೆ ತಡೆ ನೀಡಲು ನಿರಾಕರಿಸಿದೆ. ರಾಜ್ಯಪಾಲರ ಕರ್ತವ್ಯದಲ್ಲಿ ಕೋರ್ಟ್‌ ಹಸ್ತಕ್ಷೇಪ ಸಾಧ್ಯವಿಲ್ಲ ಎಂದು ಸುಪ್ರಿಂ ಕೋರ್ಟ್‌ ತ್ರಿಸದಸ್ಯ ಪೀಠ ಒಮ್ಮತದ ಅಭಿಪ್ರಾಯಪಟ್ಟಿದೆ.
ಬಿ.ಎಸ್‌.ವೈ. ಪ್ರಮಾಣವಚನ ಸಮಾರಂಭ ತಡೆ ಕೋರಿ ಕಾಂಗ್ರೆಸ್‌ – ಜೆ.ಡಿ.ಎಸ್‌. ಬುಧವಾರ ತಡರಾತ್ರಿ ಸಲ್ಲಿಸಿದ್ದ ತುರ್ತು ಅರ್ಜಿಯ ವಿಚಾರಣೆ ನಡೆಸಿದ ಸುಪ್ರಿಂ ಕೋರ್ಟ್‌ ನ ತ್ರಿಸದಸ್ಯ ಪೀಠ ಗುರುವಾರ 3.00 ಗಂಟೆಯ ಹೊತ್ತಿಗೆ ತನ್ನ ತೀರ್ಪನ್ನು ನೀಡಿತು.
ಇದಕ್ಕೂ ಮೊದಲು ತನ್ನ ವಾದವನ್ನು ಮಂಡಿಸಿದ ಅರ್ಜಿಯ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರು, ಬಹುಮತವಿಲ್ಲದ ಬಿ.ಜೆ.ಪಿ.ಗೆ ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟಿರುವುದು ಟೀಕಾಸ್ಪದ ಎಂದು ತಮ್ಮ ವಾದವನ್ನು ಮಂಡಿಸಿದರು. ಮಾತ್ರವಲ್ಲದೇ ಇಂತಹುದೇ ಪ್ರಕರಣವೊಂದರಲ್ಲಿ ಈ ಹಿಂದೆ ಸುಪ್ರಿಂ ಕೋರ್ಟ್‌ ನೀಡಿದ್ದ ತೀರ್ಪನ್ನೂ ಸಹ ಉಲ್ಲೇಖೀಸಿದರು. ಬೊಮ್ಮಾಯಿ ಹಾಗೂ ರಾಮೇಶ್ವರ್‌ ಪ್ರಸಾದ್‌ ತೀರ್ಪನ್ನು ಈ ಸಂದರ್ಭದಲ್ಲಿ ಕೋರ್ಟ್‌ ಗಮನಕ್ಕೆ ತರಲಾಯಿತು. ಸರ್ಕಾರಿಯಾ ವರದಿಯನ್ನು ಸಿಂಘ್ವಿ ಅವರು ಉಲ್ಲೇಖೀಸಿದರು. ಕಾಂಗ್ರೆಸ್‌ – ಜೆ.ಡಿ.ಎಸ್‌. ಸರಕಾರ ರಚನೆಗೆ ಅವಕಾಶ ಮಾಡಿಕೊಡದಿರುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ ಎಂದು ಸಿಂಘ್ವಿ ವಾದವಾಗಿತ್ತು. ಬಹುಮತ ಸಾಬೀತುಪಡಿಸಲು ಬಿ.ಜೆ.ಪಿ.ಗೆ 15 ದಿನ ಕಾಲಾವಕಾಶ ನೀಡಿರುವ ಕ್ರಮವನ್ನೂ ಸಹ ಈ ಸಂದರ್ಭದಲ್ಲಿ ಆವರು ಕೋರ್ಟ್‌ ಗಮನಕ್ಕೆ ತಂದರು.
ಅರ್ಜಿದಾರರ ವಾದವನ್ನು ಆಲಿಸಿದ ನ್ಯಾಯ ಪೀಠವು, ನಿಮ್ಮದು ಚುನಾವಣಾ ಪೂರ್ವ ಮೈತ್ರಿಯೇ ಎಂಬ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಎತ್ತಿತು. ಮತ್ತು ಅತೀ ದೊಡ್ಡ ಪಕ್ಷವನ್ನು ರಾಜ್ಯಪಾಲರು ಸರಕಾರ ರಚನೆಗೆ ಅಹ್ವಾನಿಸಿದ್ದಾರೆ ಎಂದು ಪೀಠ ಅಭಿಪ್ರಾಯಪಟ್ಟಿತು. ಅದರೆ ಸಿಂಘ್ವಿ ಅವರು, ಅತೀ ದೊಡ್ಡ ಪಕ್ಷವಾದರೂ ಬಿ.ಜೆ.ಪಿ.ಗೆ ಬಹುಮತವಿಲ್ಲ ಎಂಬ ವಾದವನ್ನು ಪೀಠದ ಮುಂದೆ ಮಂಡಿಸಿದರು.
 ಸುಪ್ರೀಂ ಕೋರ್ಟ್‌ ನಲ್ಲಿ ತಮ್ಮ ಪರವಾದ ತಿರ್ಪ ಬಂದನಂತರ ಅಖಾಡಕ್ಕರ ಇಳಿದಿರುಬ ರೆಡ್ಡಿ ಸಹೋದರರು ಮತ್ತು ಶ್ರೀರಾಮಲು ಕಾಂಗ್ರೆಸ್‌ -JDS ನಿಂದ ಶಾಸಕರನ್ನು ಕರಿದಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇನ್ನೊಂದಡೆ ಅಮಿತ್ ಶಾ ED ಕೇಸ್ ಗಳ ಒತ್ತಡ ಹಾಕಿ ಶಾಸಕರನ್ನು ತಮ್ಮತ್ತ ಸೆಳೆಯುವ ಯತ್ನ ನಡೆಸಿದ್ದಾರೆ ಎಂದು ತಳಿದುಬಂದಿದೆ,,,

Leave a Reply

Your email address will not be published.

Social Media Auto Publish Powered By : XYZScripts.com