ಜಯನಗರ ವಿಧಾನಸಭೆ ಚುನಾವಣೆ : ಜೂನ್ 11ಕ್ಕೆ ಮತದಾನ, 17ರಂದು ಫಲಿತಾಂಶ

ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವಿಜಯ್ ಕುಮಾರ್ ಅವರ ಹಠಾತ್ ನಿಧನದಿಂದ ರದ್ದುಗೊಂಡು ಮುಂದೂಡಲ್ಪಟ್ಟಿದ್ದ ಜಯನಗರ ವಿಧಾನಸಭೆ ಚುನಾವಣೆಯ ದಿನಾಂಕವನ್ನು ನಿಗದಿಪಡಿಸಲಾಗಿದೆ. ಮುಂದಿನ ತಿಂಗಳು ಅಂದರೆ, ಬರುವ ಜೂನ್ 11 ರಂದು ಮತದಾನ ನಡೆಯಲಿದ್ದು, ಜೂನ್ 17ರಂದು ಫಲಿತಾಂಶ ಹೊರಬೀಳಲಿದೆ.

ಮಾಧ್ಯಮಗಳಿಗೆ ಈ ಮಾಹಿತಿಯನ್ನು ತಿಳಿಸಿರುವ ರಾಜ್ಯ ಚುನಾವಣಾ ಆಯೋಗ ‘ ಜೂನ್ 11ಕ್ಕೆ ಮತದಾನ ನಡೆಯಲಿದೆ, ಜೂನ್ 17ರಂದು ಫಲಿತಾಂಶ ಘೋಷಣೆಯಾಗಲಿದೆ. ನಾಮಪತ್ರ ಸಲ್ಲಿಸಲು ಮೇ 25 ಕೊನೆಯ ದಿನಾಂಕವಾಗಿರಲಿದೆ, ಹಾಗೂ ಮೇ 28 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗರಲಿದೆ ‘ ಎಂದು ತಿಳಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com