HDK ಜೊತೆ ಮಾತನಾಡಿ ಎರಡೂವರೆ ವರ್ಷವಾಗಿತ್ತು, ಮಾತಾಡಿ ಖುಷಿಯಾಯ್ತು : ಜಮೀರ್

ರಾಮನಗರ : ‘ ಕುಮಾರಸ್ವಾಮಿ ಅವರ ಜೊತೆಗೆ ಮಾತನಾಡಿ ಎರಡುವರೆ ವರ್ಷವಾಗಿತ್ತು. ಇವತ್ತು ಮಾತನಾಡಿ ಖುಷಿಯಾಯ್ತು ‘ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ. ರೆಸಾರ್ಟ್ ನಿಂದ ಹೊರಬಂದಾಗ ಹೇಳಿಕೆ ನೀಡಿರುವ ಜಮೀರ್ ‘ ರಾಜಕೀಯದಲ್ಲಿ ನಾನು ಅವರನ್ನ ವಿರೋಧ ಮಾಡಿದ್ದೆ, ಅವರು ನನ್ನನ್ನ ವಿರೋಧ ಮಾಡಿದ್ದರು ಅಷ್ಟೇ, ಈಗ ಜೆಡಿಎಸ್ ಜೊತೆಗೆ ಸರ್ಕಾರ ರಚಿಸಲು ಪಕ್ಷ ತೀರ್ಮಾನಿಸಿದೆ. ನಾವು ಅದಕ್ಕೆ ಒಪ್ಪಿಕೊಂಡಿದ್ದೇವೆ ‘ ಎಂದಿದ್ದಾರೆ.

ಜಮೀರ್ – ಹೆಚ್ ಡಿ ಕೆ ದೋಸ್ತಿಗೆ ಕಾಂಗ್ರೆಸ್ – ಜೆಡಿಎಸ್ ಮೈತ್ರಿಯೇ ಕಾರಣವಾ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಜಮೀರ್ ‘ ಇಲ್ಲ, ಅದನ್ನ ಹೇಳೋಕಾಗಲ್ಲ, ನಿಮ್ಮ ಪ್ರಶ್ನೆ ಬೇರೆ ಇದೇ. ಕಾಂಗ್ರೆಸ್ ಪಕ್ಷದಲ್ಲೇ ಇರ್ತೇನೆ ‘ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published.