EVM ಹ್ಯಾಕಿಂಗ್ ಪ್ರಕರಣಕ್ಕೆ ಪುಷ್ಟಿ : ಮೈಸೂರಿನಲ್ಲಿ ಓರ್ವ ಆರೋಪಿಯ ಬಂಧನ

ಇವಿಎಂ ಹ್ಯಾಕಿಂಗ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ದಟ್ಟಗಳ್ಳಿ ನಿವಾಸಿ ವೆಂಕಟೇಶ್ ಎಂಬಾತನನ್ನು ಪೋಲೀಸರು ಬಂಧಿಸಿದ್ದಾರೆ. ವೆಂಕಟೇಶ್ ಕಾರಿನಲ್ಲಿ ವಿ.ವಿ.ಪ್ಯಾಟ್ ನ ಚೀಟಿಗಳು ಪತ್ತೆಯಾಗಿವೆ.

ನರಸಿಂಹರಾಜ, ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಹ್ಯಾಕಿಂಗ್ ಮಾಡಿರುವ ಆರೋಪವಿದೆ. ವೆಂಕಟೇಶ್ ಸೇರಿದಂತೆ ನಾಲ್ವರನ್ನು ಒಳಗೊಂಡ ತಂಡ ಹ್ಯಾಕಿಂಗ್ ಮಾಡಿರುವ ಆರೋಪ ಎದುರಿಸುತ್ತಿದೆ. ವಿಜಯನಗರದ ಐಶ್ವರ್ಯ ಪೆಟ್ರೋಲ್ ಬಂಕ್ ಬಳಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.

ಸೂಕ್ತ ಕ್ರಮ ಜರುಗಿಸುವಂತೆ ನರಸಿಂಹರಾಜ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಬ್ದುಲ್ಲಾ ಮನವಿ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com