ಬಹುಮತ ಸಾಬೀತು ಮಾಡೇ ಮಾಡ್ತೇನೆ, ಜೊತೆಗೆ ಸಾಲಮನ್ನಾನೂ ಮಾಡ್ತೀನಿ – ನೂತನ ಸಿಎಂ BSY

ನೂರಕ್ಕೆ ನೂರರಷ್ಟು ಬಹುಮತ ಸಾಭೀತು ಮಾಡ್ತೇನೆ: ಇನ್ನೆರೆಡು ದಿನಗಳಲ್ಲಿ ಸಾಲಮನ್ನಾ ಘೋಷಣೆ- ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಬಿಎಸ್ ಯಡಿಯೂರಪ್ಪ ಭರವಸೆ…
ರೈತರ ಮತ್ತು ನೇಕಾರರ ಸಾಲಮನ್ನಾ ಬಗ್ಗೆ ಭರವಸೆ ನೀಡಿದ್ದೆ. ಈ ಬಗ್ಗೆ ಮುಖ್ಯಕಾರ್ಯದರ್ಶಿ ಜತೆ ಚರ್ಚೆ ನಡೆಸಿದ್ದು ಅಂಕಿ ಅಂಶಗಳನ್ನ ಪರಿಶೀಲಿಸಿ ಎರಡು ದಿನಗಳಲ್ಲಿ ಸಾಲಮನ್ನಾ ಘೋಷಣೆ ಮಾಡುತ್ತೇನೆ ಎಂದು ನೂತನ ಸಿಎಂ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.
ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ರಾಜ್ಯದ ಜನ ಬಿಜೆಪಿ ಹಾಗೂ ನನಗೆ ಬೆಂಬಲ ನೀಡಿದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳನ್ನ ಜನ ತಿರಸ್ಕರಿಸಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ವಿನಾಕಾರಣ ಪ್ರತಿಭಟನೆ ಮಾಡ್ತಿದ್ದಾರೆ. ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ 221 ಶಾಸಕರು ನನ್ನ ಪರ ಮತ ಚಲಾಯಿಸ್ತಾರೆ ಅನ್ನೊ ವಿಶ್ವಾಸ ಇದೆ. ನಾನು ನೂರಕ್ಕೆ ನೂರರಷ್ಟು ಬಹುಮತ ಸಾಭೀತು ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರ ಇರೋದ್ರಿಂದ ಸಂಖ್ಯಾಭಲದ ಬಗ್ಗೆ ಹೆಚ್ಚು ಮಾತನಾಡೋದಿಲ್ಲ. ನರೇಂದ್ರ ಮೋದಿ ಹಾಗೂ ಅಮೀತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ರೈತರ ಸಾಲ ಕ್ರಾಫ್ಟ್ ಲೋನ್ ಮನ್ನಾ ಬಗ್ಗೆ ಭರವಸೆ ನೀಡಿದ್ದೆ. ಕೊಟ್ಟ ಮಾತಿನಂತೆ ನಾಡಿನ ನೇಕಾರರ ಸಾಲ ಮನ್ನಾ ಮಾಡುತ್ತೇನೆ. ಅಂಕಿ ಅಂಶಗಳ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ತಿಳಿಸಿದ್ದು ಇನ್ನೆರೆಡು ದಿನಗಳಲ್ಲಿ ಸಾಲಮನ್ನಾ ಮಾಡ್ತೇನೆ ಎಂದರು.

60ರ ದಶಕದಲ್ಲಿ ಇಂದಿರಾ ಗಾಂಧಿ ಆತ್ಮಸಾಕ್ಷಿಯ ಮತ ಕೇಳಿ ಯಶಸ್ವಿಯಾಗಿದ್ರು. ಅದರಂತೆ ನಾನು ನೂರಕ್ಕೆ ನೂರರಷ್ಟು ಬಹುಮತ ಸಾಭಿತು ಮಾಡುತ್ತೇನೆ. ಮೂರರಿಂದ ನಾಲ್ಕು ಲಕ್ಷ ಜನ ಸೇರಿಸಿ ಬೆಂಗಳೂರಿನಲ್ಕಿ ಬೃಹತ್ ಸಭೆ ಮಾಡ್ತೀನಿ. ಬಿಜೆಪಿ ಅಧಿಕಾರದಲ್ಲಿ ಇರೋ ಸಿ ಎಂಗಳನ್ನ ಕರೆದು ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದರು.

Leave a Reply

Your email address will not be published.