ನೂತನ ಸರ್ಕಾರದಲ್ಲಿ ಯಡಿಯೂರಪ್ಪ ಸಂಪುಟದ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ…

ಬೆಂಗಳೂರು, ಮೇ 17: ರಾಜಭವನದಲ್ಲಿ ರಾಜಕೀಯ ಮಾಡಿ ರಾಜ್ಯದ 24ನೇ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವಿಕರಿಸಿರುವ ಯಡಿಯೂರಪ್ಪ ಚುನಾವಣೆ ಫಲಿತಾಂಶಕ್ಕೂ ಮುನ್ನ ಘೋಷಣೆ  ಮಾಡಿದಂತೆ   ಕರ್ನಾಟಕದ  ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.. ನಾನೇ ಎಂದು ಯಡಿಯೂರಪ್ಪ ಅವರು ಚುನಾವಣೆ ಫಲಿತಾಂಶಕ್ಕೂ ಮುನ್ನ ಘೋಷಣೆ ಮಾಡುವಾಗ ಎಲ್ಲರೂ ಆಡಿಕೊಂಡು ನಗಾಡಿದ್ದರು. ಆದರೆ, ಬಿಎಸ್ ಯಡಿಯೂರಪ್ಪ ಅವರು ಅಂದುಕೊಂಡಂತೆ ಎಲ್ಲವೂ ನಡೆದಿದೆ. ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ
ರಾಮಕೃಷ್ಣ ಹೆಗಡೆ ಅವರ ನಂತರ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರಿ ಸ್ವೀಕರಿಸಿ ದಾಖಲೆ ಬರೆದಿರುವ ಯಡಿಯೂರಪ್ಪ ಅವರು ಈಗ ಮುಂದಿನ 15 ದಿನಗಳೊಳಗೆ ಸದನದಲ್ಲಿ  ಬಹುಮತ ಸಾಬಿತು ಪಡಿಸಬೇಕು… ಇದನ್ನು ಹೇಗೆ ಸಾಧಿಸುತ್ತಾರೋ ಕಾದು ನೋಡಬೇಕಿದೆ.  ಇನ್ನೆರಡು ದಿನಗಳಲ್ಲಿ ತಮ್ಮ ಸಾಮರ್ಥ್ಯವನ್ನು  ತಿಳಿಸುತ್ತೇನೆ ಎಂದು ಸಿಎಂ ಆಗಿ ಮೊದಲ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.
ಸದನದಲ್ಲಿ ನೂತನ ಸ್ಪೀಕರ್ ಆಯ್ಕೆ, ನೂತನ ಶಾಸಕರ ಪ್ರಮಾಣ ವಚನ ಸಂಭ್ರಮ ಮುಗಿದ ಬಳಿಕ ವಿಶ್ವಾಸಮತ ಗಳಿಸುವ ಅಗ್ನಿ ಪರೀಕ್ಷೆಗೆ ಒಳಪಡಲಿದ್ದಾರೆ. ಈ ಪರೀಕ್ಷೆಯಲ್ಲಿ ಗೆಲುವ ಸಾಧಿಸಿದರೆ ಮುಂದಿನ ದೊಡ್ಡ ಕೆಲಸವೆಂದರೆ, ಸಂಪುಟ ವಿಸ್ತರಣೆ.
ಲಭ್ಯವಿರುವ ಮಾಹಿತಿಯಂತೆ ಮೊಳಕಾಲ್ಮೂರು ಶಾಸಕ ಜನರ್ಧನ ರೆಡ್ಡಿಯ ಆಪ್ತ ಬಿ. ಶ್ರೀರಾಮುಲು ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಸುವ ಸಾಧ್ಯತೆ ಹೆಚ್ಚಿದೆ. ಮಿಕ್ಕಂತೆ ಯಡಿಯೂರಪ್ಪ ಅವರ ಆಪ್ತರಿಗೆ ಸಂಪುಟದಲ್ಲಿ ಸ್ಥಾನಗಳು ಸಿಗಲಿವೆ.

ಈಗ ಸಂಪುಟ ಸೇರಲು ಹಾತೊರೆಯುತ್ತಿರುವ ಶಾಸಕರ ಪಟ್ಟಿ ಹೀಗಿದೆ:

. ಬಿ ಶ್ರೀರಾಮುಲು
. ಕೆಎಸ್ ಈಶ್ವರಪ್ಪ
. ಆರ್ ಅಶೋಕ
. ಸುರೇಶ್ ಕುಮಾರ್
. ಗೋವಿಂದ ಕಾರಜೋಳ
. ಬಸವರಾಜ ಬೊಮ್ಮಾಯಿ
. ಸಿಎಂ ಉದಾಸಿ
. ಬಾಲಚಂದ್ರ ಜಾರಕಿಹೊಳಿ
. ವೀರಣ್ಣ ಚರಂತಿ ಮಠ
. ಬಸನಗೌಡ ಪಾಟೀಲ್ ಯತ್ನಾಳ್
. ಜಗದೀಶ್ ಶೆಟ್ಟರ್
. ಗೂಳಿಹಟ್ಟಿ ಶೇಖರ್
. ಸಿಟಿ ರವಿ
. ವಿ ಸೋಮಣ್ಣ
. ಅರವಿಂದ ಲಿಂಬಾವಳಿ
.  ಎಸ್ಎ ರಾಮದಾಸ್
. ಶಶಿಕಲಾ ಜೊಲ್ಲೆ
. ಮುರುಗೇಶ್ ನಿರಾಣಿ
. ರಾಜುಗೌಡ
. ವಿಶ್ವೇಶ್ವರ ಹೆಗ್ಡೆ ಕಾಗೇರಿ
. ರೇಣುಕಾಚಾರ್ಯ

ಮತ್ತು ಸಿ ಸಿ ಪಾಟೀಲ್ BSY ಅವರ ಸಂಪೂಟ ಸೇರುವ ಸಾಧ್ಯತೆ ಹೆಚ್ಚಿದೆ….

Leave a Reply

Your email address will not be published.

Social Media Auto Publish Powered By : XYZScripts.com