ವಾರಣಾಸಿ : ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು 18 ಜನರ ದುರ್ಮರಣ

ಪ್ರಧಾನಿ ನರೇಂದ್ರ ಮೋದಿಯವರ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದ ಪರಿಣಾಮ 18 ಜನರು ಮೃತಪಟ್ಟಿರುವ ಘಟನೆ ಮಂಗಳವಾರ ಸಾಯಂಕಾಲ ನಡೆದಿದೆ. ನಿರ್ಮಾಣ ಹಂತದಲ್ಲಿದ್ದ ಬೃಹತ್ ಗಾತ್ರದ ಫ್ಲೈ ಓವರಿನ ಎರಡು ಆಧಾರ ಸ್ಥಂಭಗಳು ಕುಸಿದು, ದೈತ್ಯಾಕಾರದ ಸಿಮೆಂಟ್ ಚಪ್ಪಡಿಗಳು ಮೇಲೆ ಬಿದ್ದ ಪರಿಣಾಮ 18 ಜನ ಸಾವಿಗೀಡಾಗಿದ್ದಾರೆ.

Image result for fly over varanasi collapse

ಮೃತಪಟ್ಟವರಲ್ಲಿ ಅನೇಕರು ಫ್ಲೈ ಓವರ್ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದವರೇ ಆಗಿದ್ದಾರೆ. ಫ್ಲೈ ಓವರ್ ಕುಸಿತದ ಅವಶೇಷಗಳ ಅಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮೂವರನ್ನು ಹೊರಗೆಳೆದು ರಕ್ಷಿಸಲಾಗಿದೆ. 8 ಕ್ರೇನ್ ಗಳನ್ನು ಬಳಸಿ ಅವಶೇಷಗಳನ್ನು ತೆಗೆದು ಹಾಕಲಾಗುತ್ತಿದೆ.

Image result for fly over varanasi collapse

ಘಟನಾ ಸ್ಥಳಕ್ಕೆ NDRF ತಂಡದ ಸದಸ್ಯರು ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಸ್ಥಳದಲ್ಲಿ ಪೋಲೀಸ್ ಸಿಬ್ಬಂದಿಯವರೂ ಕೂಡ ಉಪಸ್ಥಿತರಿದ್ದು, ರಕ್ಷಣೆಗೆ ನೆರವು ನೀಡುತ್ತಿದ್ದಾರೆ. 2261 ಮೀಟರ್ ಉದ್ದದ ಫ್ಲೈ ಓವರನ್ನು 129 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿತ್ತು. ಉತ್ತರ ಪ್ರದೇಶ ಸರಕಾರದಿಂದ ನಿರ್ಮಾಣಗೊಳ್ಳುತ್ತಿದ್ದ ಫ್ಲೈ ಓವರ್ 51 ಪ್ರತಿಶತ ಪೂರ್ಣಗೊಂಡಿತ್ತು.

Leave a Reply

Your email address will not be published.